ಬಿಗ್ ಬಾಸ್ ಕನ್ನಡ ಸೀಸನ್ 8ರ 7ನೇ ಸ್ಪರ್ಧಿಯಾಗಿ ನಟಿ ನಿಧಿ ಸುಬ್ಬಯ್ಯ ಆ ಮೆನೆಯ ಒಳಗೆ ಹೋಗಿದ್ದಾರೆ. ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ನಿಧಿ ನಟಿಸಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 8ರ ಮನೆಗೆ ಎಂಟ್ರಿ ನೀಡಿರುವ ನಟಿ, ಮಾಡೆಲ್ ಆಗಿರುವ ನಿಧಿ ಸುಬ್ಬಯ್ಯ ಅವರು ಅನೇಕ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚರಂಗಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ ಸಿನಿಮಾಗಳು ಅವರಿಗೆ ಸ್ವಲ್ಪ ಪಾಪ್ಯುಲಾರಿಟಿ ತಂದುಕೊಟ್ಟಿದ್ದವು. ಹಿಂದಿಯ ಓಹ್ ಮೈ ಗಾಡ್ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುವ ಮೂಲಕ ಅವರು ಬಾಲಿವುಡ್‌ಗೂ ಎಂಟ್ರಿ ಕೊಟ್ಟರು. ಆಮೇಲೆ ಅಜಾಬ್ ಗಜಾಬ್ ಲವ್ ಸಿನಿಮಾದಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡರು. ಕೊಡಗಿನ ಈ ಕುವರಿ ಕ್ರೀಡೆಯಲ್ಲಿಯೂ ಮುಂದಿದ್ದರು. ಮಾಡೆಲಿಂಗ್‌ನಲ್ಲಿ ಬ್ಯುಸಿಯಾದ ನಿಧಿ ಇಂಜಿನಿಯರಿಂಗ್‌ನ್ನು ಅರ್ಧಕ್ಕೆ ಬಿಟ್ಟರು. ಅಭಿಮಾನಿ ಸಿನಿಮಾದಲ್ಲಿ ಮೊದಲು ನಿಧಿ ಬಣ್ಣ ಹಚ್ಚಿದ್ದರು. ಆ ಚಿತ್ರ ಅವರಿಗೆ ಅಷ್ಟೊಂದು ಖ್ಯಾತಿ ತಂದುಕೊಡಲಿಲ್ಲ.

ಕೃಷ್ಣ ನೀ ಲೇಟ್ ಆಗಿ ಬಾರೋ, ವೀರ ಬಾಹು, ಅಣ್ಣ ಬಾಂಡ್, 5ಜಿ, ಆಯುಷ್ಮಾನ್ ಭವ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದೆರಡು ಕನ್ನಡ ಸಿನಿಮಾಗಳ ಮೂಲಕ ನಿಧಿಗೆ ಖ್ಯಾತಿ ಸಿಕ್ಕಿದೆ. ಆದರೆ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಪ್ರಸಾದ್ ಹಾಗೂ ಪವನ್ ನಿರ್ದೇಶನದ ಹಾರರ್ ಸಿನಿಮಾದಲ್ಲಿ ನಿಧಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇನ್ನು ಲಾಕ್‌ಡೌನ್ ವೇಳೆ ನಿಧಿ ಅಮೆರಿಕದಲ್ಲಿದ್ದರು. ಆನಂತರದಲ್ಲಿ ಅವರು ಭಾರತಕ್ಕೆ ಮರಳಿ ಹೋಮ್ ಕ್ವಾರಂಟೈನ್ ಆಗಿದ್ದರು. ಕರಕುಶಲತೆಗೆ ಸಂಬಂಧಪಟ್ಟ ಕೋರ್ಸ್ ಮಾಡಲು ನಿಧಿ ಅಮೆರಿಕಕ್ಕೆ ತೆರಳಿದ್ದರು. ನಿಧಿ ಮುಂಬೈನಲ್ಲಿಯೇ ಇರುತ್ತಾರೆ. ಬಾಲಿವುಡ್‌ನಲ್ಲಿ ಅವಕಾಶಗಳು ಹೆಚ್ಚು ಸಿಗಬಹುದು ಎಂಬುದು ಅವರ ಆಶಯ. ನಿಧಿ ಸುಬ್ಬಯ್ಯ ಅವರಿಗೆ ಮದುವೆ ಆಗಿದೆ.

ಈಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಆಗಿರುವ ನಿಧಿ ಸುಬ್ಬಯ್ಯ ಅವರು ಸತತ ಮೂರನೇ ವಾರದಲ್ಲಿ ಕೂಡಾ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಮಿನೇಟ್ ಆಗಿದ್ದು ಎಲಿಮಿನೇಷನ್ ನಿಂದಾ ಪಾರಾಗಿ ಮೂರು ವಾರಗಳನ್ನು ಕಳೆದಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಬರುವ ಎಲ್ಲಾ ಸ್ಪರ್ಧಿಗಳ ಹಿಂದೆಯೂ ಒಂದು ನೋವಿನ ಕಥೆ ಇರುತ್ತದೆ. ಅದೇ ರೀತಿ ನಿಧಿ ಸುಬ್ಬಯ್ಯ ಅವರ ಜೀವನದಲ್ಲಿಯೂ ಸಹ ಒಂದು ನೋವಿನ ಕಥೆ ಇದೆ. ಅದು ಅವರ ದಾಂಪತ್ಯ ಜೀವನದಲ್ಲಿ ನಡೆದ ಕಥೆಯಾಗಿದೆ. ನಿಧಿ ಸುಬ್ಬಯ್ಯ ಅವರು ಮದುವೆ ಆದ ಹುಡುಗನ ಹೆಸರು ಲಾವೇಶ್ ಎಂದು. ಲಾವೇಷ್ ದೊಡ್ಡ ಉದ್ಯಮಿ ಹಾಗೂ ಶ್ರೀಮಂತ. ನಿಧಿ ಸುಬ್ಬಯ್ಯ ಅವರು ಲಾವೆಷ್ ಅವರನ್ನು ಕಾಮನ್ ಫ್ರೆಂಡ್ ಮೂಲಕ ಭೇಟಿ ಆಗುತ್ತಾರೆ.

ನಂತರ ಸ್ನೇಹ ಪ್ರೀತಿಗೆ ತಿರುಗಿ ನಿಧಿ ಸುಬ್ಬಯ್ಯ ಹಾಗೂ ಲಾವೇಷ ಇಬ್ಬರೂ ಸ್ವಲ್ಪ ದಿನಗಳ ಕಾಲ ಡೇಟಿಂಗ್ ಮಾಡುತ್ತಾರೆ. ನಂತರ 2017 ರಲ್ಲಿ ನಿಧಿ ಸುಬ್ಬಯ್ಯ ಹಾಗೂ ಲಾವೆಶ್ ಇಬ್ಬರೂ ಕೊಡವ ಸಂಪ್ರದಾಯದ ಪ್ರಕಾರ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಆದ ಸ್ವಲ್ಪ ದಿನಗಳ ಕಾಲ ಇಬ್ಬರೂ ಬಹಳ ಅನ್ಯೋನ್ಯವಾಗಿ ಜೀವನ ನಡೆಸುತ್ತಾ ಇರುತ್ತಾರೆ. ಆದರೆ ಕೆಲವು ತಿಂಗಳುಗಳು ಕಳೆದ ನಂತರ ಇಬ್ಬರ ನಡುವೆ ಸಣ್ಣಪುಟ್ಟ ಮನಸ್ತಾಪಗಳು ಉಂಟಾಗಿ ಇದು ಚಿಕ್ಕ ಚಿಕ್ಕ ಜಗಳಕ್ಕೆ ಕಾರಣ ಆಗುತ್ತದೆ. ಈ ಕಾರಣಕ್ಕಾಗಿ ನಿಧಿ ಸುಬ್ಬಯ್ಯ ಹಾಗೂ ಲಾವೆಶ್ ಇಬ್ಬರೂ 2019 ರಲ್ಲಿ ತಮ್ಮ ವೈವಾಹಿಕ ಜೀವನಕ್ಕೇ ಮುಕ್ತಾಯ ಹಾಡುತ್ತಾರೆ. ಕೇವರ ಎರಡು ವರ್ಷಗಳ ಕಾಲ ಇವರಿಬ್ಬರೂ ದಂಪತಿಗಳಾಗೀ ಜೀವನ ನಡೆಸಿರುತ್ತಾರೆ. ಈಗ ಲಾವೆಶ್ ಇನ್ನೊಂದು ಹುಡುಗಿಯ ಜೊತೆಗೆ ಸಂಬಂಧದಲ್ಲಿ ಇದ್ದು ಇದರ ಕುರಿತಾಗಿ ನಿಧಿ ಸುಬ್ಬಯ್ಯ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಬಿಗ್ ಬಾಸ್ ಮನೆಯಲ್ಲಿ ಕೂಡಾ ನಿಧಿ ಸುಬ್ಬಯ್ಯ ಇದರ ಕುರಿತಾಗಿ ಯಾವುದೇ ಮಾತು ಆಡಲಿಲ್ಲ. ಏನ್ ಆದರೂ ಒಂದು ಹೆಣ್ಣಿಗೆ ಮದುವೆ ಆಗಿ ಎರಡು ವರ್ಷಕ್ಕೆ ದಾಂಪತ್ಯ ಜೀವನಕ್ಕೆ ತೊಡಕು ಬಂತು ಎಂದರೆ ಅದು ಒಂದು ದೊಡ್ಡ ಸವಾಲೇ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!