ತಂದೆಯಿಂದ ಬರಿ 2 ಸಾವಿರ ಸಾಲ ಪಡೆದು 20 ದಿನದಲ್ಲಿ 20 ಲಕ್ಷ ಆಧಾಯ ಗಳಿಸಿದ ಹಳ್ಳಿ ಯುವಕನ ಸಕ್ಸಸ್ ಸ್ಟೋರಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ನಮ್ಮ ಬಳಿ ಹಣವಿದ್ದರೆ ಮಾತ್ರ ಸಾಧನೆ ಮಾಡಬಹುದು ಎಂದು ಅಂದುಕೊಂಡಿರುತ್ತೇವೆ ಆದರೆ ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಉತ್ತರಪ್ರದೇಶದ ಹಳ್ಳಿಯೊಂದರ 21 ವರ್ಷದ ಯುವಕ ತೋರಿಸಿದ್ದಾನೆ. ತನ್ನ ತಂದೆಯಿಂದ ಕೇವಲ 1,800 ರೂಪಾಯಿ ಸಾಲ ಪಡೆದು ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಸಂಪಾದಿಸಿದ ಯುವಕನ ಕಥೆಯನ್ನು ಈ ಲೇಖನದಲ್ಲಿ ನೋಡೋಣ.

ಉತ್ತರಪ್ರದೇಶದ ಚಂದೋಲಿ ಜಿಲ್ಲೆಯ ಪುಟ್ಟ ಹಳ್ಳಿಯ ಮೃತ್ಯುಂಜಯ ಸಿಂಗ್ ಎಂಬಾತ ತನ್ನ ಸ್ವಂತ ಕಂಪನಿಯೊಂದನ್ನು ಶುರು ಮಾಡುವ ಆಸೆಯಿಂದ ತಂದೆಯಿಂದ 1,800 ರೂಪಾಯಿಗಳನ್ನು ಸಾಲದ ರೂಪದಲ್ಲಿ ತೆಗೆದುಕೊಂಡಿದ್ದನು. ಮೃತ್ಯುಂಜಯ ಸಿಂಗನ ತಂದೆ ರೈತನು, ಅಣ್ಣ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತ್ಯುಂಜಯ ಆ್ಯಡ್‌ಜಂಕ್ಷನ್ ಡಾಟ್ ಕಾಮ್ ಎಂಬ ವೆಬ್ ಸೈಟ್ ಪ್ರಾರಂಭಿಸಿದ. ಅದು ಕೇವಲ 20 ದಿನಗಳಲ್ಲೆ 20 ಲಕ್ಷ ಟರ್ನ್ ಟರ್ನವರ್ ಆಯಿತು.

ನಂತರದ ದಿನಗಳಲ್ಲಿ ಮೃತ್ಯುಂಜಯ ಸಿಂಗ್ ಅವರ ವೆಬಸೈಟ್ ನಲ್ಲಿ ದೊಡ್ಡ ದೊಡ್ಡ ಕಂಪನಿಗಳಾದ ನೈನ್ ಆ್ಯಪ್ಸ್, ವಿಡ್ಮೇಟ್, ಯೂಸಿ ಬ್ರೌಸರ್, ಅಲಿಬಾಬಾ, ಅಮೆಜಾನ್ ಇನ್ನು ಹಲವು ಕಂಪೆನಿಗಳು ತಮ್ಮ ಪ್ರಾಡಕ್ಟ್ಸ್ ಗಳ ಪ್ರಮೋಷನ್ ಮಾಡುತ್ತಿವೆ ಹಾಗೂ ಅದರ ಸಹಾಯದಿಂದ ಪಬ್ಲಿಷರ್ ಆದ ಮೃತ್ಯುಂಜಯ ಸಿಂಗ್ ಅವರು ಹೆಚ್ಚೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾನೆ. ಆತ ತನ್ನ ಕಠಿಣ ಪರಿಶ್ರಮದಿಂದ ಇಂಟರ್ನೆಟ್ ಜಗತ್ತಿನಲ್ಲಿ ಎಲ್ಲರೂ ಮೂಗಿನ ಮೇಲೆ ಕೈ ಇಟ್ಟುಕೊಳ್ಳುವಂತೆ ಮಾಡಿದ್ದಾನೆ. ಕೇವಲ 21 ವರ್ಷದ ಮೃತ್ಯುಂಜಯ ಎಥಿಕಲ್ ಹ್ಯಾಕರ್ ಆಗಿದ್ದು, ತನ್ನ ಕಠಿಣ ಪರಿಶ್ರಮದಿಂದ ಆ್ಯಡ್‌ಜಂಕ್ಷನ್ ಡಾಟ್ ಕಾಮ್ ಎಂಬ ಆ್ಯಡ ಎಡ್ವಟೇಸಮೆಂಟ್ ಟೆಕ್ನಾಲಜಿಗೆ ಸಂಬಂಧಿಸಿದ ವೆಬ್ ಸೈಟ್ ತಯಾರಿಸಿದ್ದಾನೆ. ಆ ವೆಬಸೈಟ್ ಅನ್ನು ಮೃತ್ಯುಂಜಯ ಸಿಂಗ್ ಬಹಳ ಇನೋವೇಟಿವ್ ರೀತಿಯಲ್ಲಿ ಡಿಸೈನ್ ಮಾಡಿದ್ದಾನೆ. ಮೃತ್ಯುಂಜಯ ಸಿಂಗನ ಪರಿಶ್ರಮದಿಂದ ಉತ್ತರಪ್ರದೇಶ ಎಡಿಷನ್ 2017 ನ ವಿಜೇತನಾಗಿ ಹೊರ ಹೊಮ್ಮಿದನು.

ಮೃತ್ಯುಂಜಯ ಮೊದಲು ತನ್ನ ವೆಬಸೈಟ್ ನಲ್ಲಿ ಗೂಗಲ್ ಆಡ್ ಸೆನ್ಸ್ ನಿಂದ ತನ್ನ ವೆಬಸೈಟ್ ಮೋನಿಟೈಜೇಷನ್ ನಡೆಸುತ್ತಿದ್ದನು ಆದರೆ ಕೆಲವು ದಿನಗಳ ಬಳಿಕ ಆತನ ವೈಬಸೈಟ್ ಗೆ ಗೂಗಲ್ ಆಡ್ ಸೆನ್ಸ್ ಬಂದ್ ಆಗಿ ಆತ ಗಳಿಸಿದ್ದ ಹಣವೆಲ್ಲಾ ಮುಳುಗಿಹೋಯಿತು. ನಂತರ ಛಲ ಬಿಡದೆ, ಕುಗ್ಗದೆ ಈ ಸಮಸ್ಯೆಯಿಂದ ಹೊರ ಬರಲು ಅವನು ಯೂನಿಕ್ ಪ್ಲಾಟಫಾರ್ಮ್ ಒಂದನ್ನ ಮಾಡಿ ಅದರಲ್ಲಿ ದೊಡ್ಡ ದೊಡ್ಡ ಕಂಪೆನಿಗಳ ಎಡ್ವಟೇಸ್ಮೆಂಟ್ ಹಾಗೂ ಪ್ರಮೋಷನ್ ಮಾಡಿ ಪಬ್ಲಿಷರ್ ತಮ್ಮ ವೆಬಸೈಟ್ ಹಾಗೂ ಅಪ್ಲಿಕೇಷನ್ ಮೂಲಕ ಹಣ ಗಳಿಸುವಂತೆ ಮಾಡುವ ಯೋಜನೆಯನ್ನು ರೂಪಿಸಿದ ಅದರಂತೆ ಅವನು ಒಂದು ವೆಬ್ ಸೈಟ್ ತಯಾರಿಸಿದ, ದೊಡ್ಡ ದೊಡ್ಡ ಕಂಪನಿಗಳು ಆತನ ವೆಬ್ ಸೈಟ್ ನಲ್ಲಿ ಆಡ್ಸ್ ನೀಡಲು ಬರಲಾರಂಭಿಸಿದರು.

ಮೃತ್ಯುಂಜಯ ಸಿಂಗ್ ಈ ಜಗತ್ತಿನಲ್ಲಿ ಯಾವ ಕೆಲಸವೂ ಅಸಾಧ್ಯ ಅಲ್ಲ ಅನ್ನುವುದನ್ನು ಸಾಧಿಸಿ ತೋರಿಸಿದ್ದಾನೆ. ಆ ವೆಬಸೈಟ್ ನಿಂದ ಬಹಳಷ್ಟು ಜನ ಕೂಡ ಹಣ ಸಂಪಾದಿಸುತ್ತಿದ್ದಾರೆ ಹಾಗೂ ದೊಡ್ಡ ದೊಡ್ಡ ಕಂಪನಿಗಳು ಈತನ ಜೊತೆ ಟೈಯಪ್ ಮಾಡಿಕೊಳ್ಳಲು ಇದೀಗ ಮುಂದೆ ಬರುತ್ತಿವೆ. ಮೃತ್ಯುಂಜಯ ತನ್ನ ಈ ಸ್ಟಾರ್ಟಪ್ ಶುರು ಮಾಡಲು ತನ್ನ ತಂದೆಯಿಂದ ಕೇವಲ 1800 ರೂಗಳನ್ನು ಸಾಲ ಪಡೆದಿದ್ದ ಆತ ತಿಂಗಳೊಳಗಾಗಿ ಲಕ್ಷಾಂತರ ರೂಪಾಯಿ ಟರ್ನ ಓವರ್ ಮಾಡುತ್ತಿದ್ದಾನೆ. ಇಷ್ಟೇ ಅಲ್ಲದೆ ಮೃತ್ಯುಂಜಯ ಸಿಂಗ್ ಇನ್ನೊಂದು ಸಾಧನೆಯನ್ನು ಮಾಡ ಹೊರಟಿದ್ದಾರೆ, ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನ ಆದರೆ ಅದರ ಲೊಕೇಟ್ ಮಾಡುವ ವಿಶಿಷ್ಟವಾದ ಆಪ್ ಕಂಡುಹಿಡಿಯುತ್ತಿದ್ದಾನೆ. ಮೃತ್ಯುಂಜಯ ಸಿಂಗ್ ನ ಆಸೆಗಳು ನೆರವೇರಲಿ, ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸೋಣ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *