ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಸುವನ್ನು ಕಾಮಧೇನು ಎಂದು ಕರೆಯಲಾಗುತ್ತದೆ. ಪ್ರಾಣಿಗಳಲ್ಲಿಯೇ ಹಸುವನ್ನು ದೇವರಂತೆ ಕೈ ಮುಗಿಯಲಾಗುತ್ತದೆ. ಹಾಗೆಯೇ ಹಸುವಿನಲ್ಲಿ ಮೂರು ಕೋಟಿ ದೇವತೆಗಳು ವಾಸವಾಗಿರುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಹಾಗೆಯೇ ಹಸಿವಿನಿಂದ ಹಲವಾರು ಪ್ರಯೋಜನಗಳಿವೆ. ಹಸುಗಳು ಸಾಮಾನ್ಯವಾಗಿ ನಮಗೆ ಹಾಲನ್ನು ನೀಡುತ್ತವೆ. ಆದರೆ ನಾವು ಇಲ್ಲಿ ಒಂದು ಹಸು 20ಲೀಟರ್ ಹಾಲು ಕೊಟ್ಟ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ನಮ್ಮ ದೇಶದಲ್ಲಿ ಸುಮಾರು ಶೇಕಡಾ60ಕ್ಕಿಂತ ಹೆಚ್ಚು ಜನ ಕೃಷಿಯನ್ನು ಅವಲಂಬಿಸಿ ಜೀವನವನ್ನು ನಡೆಸುತ್ತಿದ್ದಾರೆ. ಹಾಗೆಯೇ ಕೃಷಿಯನ್ನು ನಡೆಸಬೇಕು ಎಂತಾದರೆ ಅದಕ್ಕೆ ಮುಖ್ಯವಾಗಿ ಗೊಬ್ಬರ ಬೇಕೇ ಬೇಕಾಗುತ್ತದೆ. ಹಾಗಾಗಿ ಗೊಬ್ಬರ ಹಾಗೂ ಹಾಲಿನ ಅವಶ್ಯಕತೆಗಾಗಿ ಹಸುವನ್ನು ಸಾಕುತ್ತಾರೆ. ಇನ್ನೂ ಕೆಲವರು ಹಸುಗಳ ಮೇಲೆ ಪ್ರೀತಿ ಇರುವುದರಿಂದ ಸಾಕುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಮತ್ತು ಶಿಕ್ಷಣದಿಂದಾಗಿ ಪಶುಪಾಲನೆ ಕಡಿಮೆಯಾಗುತ್ತಿದೆ.
ಹಾಗೆಯೇ ಪಶುಪಾಲನೆ ರೈತರಿಗೆ ಹಳ್ಳಿಗಳಲ್ಲಿ ಬೆನ್ನೆಲುಬು ಎಂದು ಹೇಳಬಹುದು. ಈಗ ಮುಂಚಿನಂತೆ ಎಲ್ಲರೂ ಮನೆಯಲ್ಲಿ ಹಸುಗಳನ್ನು ಸಾಕಿವುದಿಲ್ಲ. ಏಕೆಂದರೆ ಅವುಗಳ ಪಾಲನೆ ಮತ್ತು ಪೋಷಣೆ ಬಹಳ ಮುಖ್ಯವಾಗುತ್ತದೆ. ಪಶುಪಾಲನೆಯಲ್ಲಿ ಹಾಲಿನ ಉತ್ಪಾದನೆ ಸ್ವಲ್ಪ ಇಳಿಕೆಯನ್ನು ಕಾಣುತ್ತಿದೆ. ಆದ್ದರಿಂದ ಸರ್ಕಾರವು ಇದನ್ನು ಪ್ರೋತ್ಸಾಹಿಸಲು ಹಾಲು ಕರೆಯುವ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಹಳ್ಳಿಯಲ್ಲಿ ಹಾಲು ಕರೆಯುವ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ಮುಂತಾದ ಕಡೆಗಳಿಂದ ಹಸುಗಳನ್ನು ಸ್ಪರ್ಧೆಗೆ ತರಲಾಗಿತ್ತು. ರೈತರಿಗೆ ಹಾಲನ್ನು ಕರೆಯಲು 20ನಿಮಿಷಗಳ ಸಮಯ ನೀಡಲಾಗಿತ್ತು. ಇದರಿಂದ ತಮ್ಮ ಪ್ರತಿಭೆಯನ್ನು ರೈತರು ತೋರಿಸಿದ್ದಾರೆ. ಹಾಗೇ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಕೊನೆಯದಾಗಿ ಆರೋಹಳ್ಳಿ ಗ್ರಾಮದ ರೈತ 20ನಿಮಿಷಕ್ಕೆ 20ಲೀಟರ್ ಹಾಲು ಕರೆದು ದಾಖಲೆಯನ್ನು ನಿರ್ಮಿಸಿದ್ದಾರೆ. ಇದು ಸಾಮಾನ್ಯವಾದ ಸಾಧನೆಯಲ್ಲ. ಏಕೆಂದರೆ ಎಲ್ಲರಿಗೂ ಹಾಲು ಕರೆಯಲು ಸಹ ಬರುವುದಿಲ್ಲ.