ಅತ್ತೆ ಮಾವ ಹಾಗೂ ಪತ್ನಿಯೊಂದಿಗೆ ಚಂದನ ಶೆಟ್ಟಿ ಕಾಣಿಸಿಕೊಂಡಿದ್ದು ಹೀಗೆ

0 0

ಸಾಮಾನ್ಯವಾಗಿ ಎಲ್ಲಾ ಭಾಷೆಗಳಲ್ಲಿ ಹಾಡುಗಳನ್ನು ಮಾಡಲು ರಾಪ್ ಹಾಡುಗಳನ್ನು ಮಾಡುವಂತಹವರು ಇರುತ್ತಾರೆ. ಹಾಗೆಯೇ ಕನ್ನಡದಲ್ಲಿ ರಾಪರ್ ಚಂದನ್ ಶೆಟ್ಟಿ ಅವರು ಬಹಳ ಪ್ರಸಿದ್ಧಿಯಾಗಿದ್ದಾರೆ. ಇವರ ಪ್ರತಿಯೊಂದು ಹಾಡುಗಳು ನಿಂತ ಜನರನ್ನು ಕುಣಿಸುವಂತೆ ಮಾಡುತ್ತವೆ. ಹಾಗೆಯೇ ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ಬಾಸ್ ಎಂಬ ಆಟದಲ್ಲಿ ತಾನೂ ಸಹ ಒಬ್ಬ ಸ್ಪರ್ಧಿಯಾಗಿ 90 ದಿನಗಳ ಕಾಲ ಅಲ್ಲಿ ಉಳಿದು ಬಹಳಷ್ಟು ಹೆಸರು ಮಾಡಿದ್ದಲ್ಲದೇ ವಿಜೇತರು ಸಹ ಆಗಿದ್ದಾರೆ. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಚಂದನ್ ಶೆಟ್ಟಿ ಅವರು 17 ಸೆಪ್ಟೆಂಬರ್ 1989ರಂದು ಹಾಸನ ಜಿಲ್ಲೆಯ ಶಾಂತಿಗ್ರಾಮದ ಹೊಳೆನರಸೀಪುರದಲ್ಲಿ ಜನಿಸಿದರು. ಇವರ ಪೂರ್ತಿ ಹೆಸರು ಚಂದನ್ ಪರಮೇಶ್ ಶೆಟ್ಟಿ. ನಟನಾಗಿ, ಸಂಗೀತ ನಿರ್ದೇಶಕನಾಗಿ, ಗಿಟಾರ್ ವಾದಕನಾಗಿ, ಡ್ರಮ್ಮರ್ ಮತ್ತು ರಾಪರ್ ಗಾಯಕನಾಗಿ ಇವರು ಹೆಸರು ಮಾಡಿದ್ದಾರೆ. ಟಾಪ್ ಟು ಬಾಟಮ್, 3 ಪೆಗ್, ಚಾಕೊಲೇಟ್ ಗರ್ಲ್, ಹಾಲಗೊಡೆ ಮತ್ತು ಟಕಿಲಾನಂತಹ ಹಾಡುಗಳಲ್ಲಿ ಏಕವ್ಯಕ್ತಿ ಕಲಾವಿದನಾಗಿ ಚಂದನ್ ಶೆಟ್ಟಿ ಅಭಿನಯಿಸಿದ್ದಾರೆ. ಪ್ರತಿವರ್ಷ ಕನ್ನಡದ ಹೊಸ ರ್ಯಾಪ್‌ ಹಾಡನ್ನು ಬಿಡುಗಡೆಗೊಳಿಸಿ ಎಲ್ಲರಿಗೆ ಹೊಸ ವರ್ಷಕ್ಕೆ ಹರ್ಷ ತುಂಬುವ ರ್ಯಾಪರ್ ಚಂದನ್‌ ಶೆಟ್ಟಿ ಈ ಬಾರಿಯೂ ಹೊಸ ಹಾಡಿನೊಂದಿಗೆ ಬಂದಿದ್ದಾರೆ.

ಈ ಬಾರಿ ಅವರ ವಿಡಿಯೋ ಸಾಂಗ್‌ ಸ್ವಲ್ಪ ಸ್ಪೆಷಲ್‌ ಆಗಿ ಮೂಡಿಬಂದಿದೆ. ಈ ಅದ್ಧೂರಿ ಪಾರ್ಟಿ ಹಾಡಿನಲ್ಲಿ ಚಂದನ್‌ ಜತೆಗೆ ಕನ್ನಡದ ಕೆಲ ನಟ, ನಟಿಯರೂ ಕಾಣಿಸಿಕೊಂಡಿದ್ದಾರೆ. ಹಾಗೆಯೇ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ವಿವಾಹವಾಗಿದ್ದಾರೆ. ಮನೆಯಲ್ಲಿ ಮದುವೆ ತಯಾರಿಗಳು ಅದ್ದೂರಿಯಾಗಿ ನಡೆದಿದ್ದವು. ನಿವೇದಿತಾ ಮನೆಯಂತೂ ಮಧುವಣಗಿತ್ತಿಯಂತೆ ತಯಾರಾಗಿತ್ತು. ಬಳೆ ಶಾಸ್ತ್ರ, ಮೆಹೆಂದಿ ಶಾಸ್ತ್ರದಲ್ಲಿ ನಿವೇದಿತಾ ಪಾಲ್ಗೊಂಡಿದ್ದರೆ. ಈ ಕಡೆ ಚಂದನ್ ಕೂಡ ಮದುವೆ ಪೂರ್ವದ ಹಲವು ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ನಿವೇದಿತಾ ಅವರ ತಂದೆ-ತಾಯಿಗೆ ಇರುವ ಏಕೈಕ ಪುತ್ರಿ.  ಹೀಗಾಗಿ ಮದುವೆಯನ್ನು ಇನ್ನಷ್ಟು ಅದ್ದೂರಿಯಾಗಿ ಮಾಡಿದ್ದಾರೆ. ಹಾಗೆಯೇ ಪೊಗರು ಚಿತ್ರದಲ್ಲಿ ಚಂದನ್ ಶೆಟ್ಟಿಯವರು ಹಾಡಿದ್ದರು. ಇದಕ್ಕೆ ಅಭಿಮಾನಿಗಳು ಬಹಳ ಇದ್ದಾರೆ. ಪೊಗರು ಸಿನೆಮಾದ ಖರಾಬು ಎನ್ನುವ ಹಾಡು ಕೇಳಿದವರಿಗೆ ಮೈ ಜುಂ ಎನ್ನಿಸುವಂತಿದೆ. ಹಾಗೆಯೇ ಅತಿ ಹೆಚ್ಚು ನೋಟಗಳನ್ನು ಕಾಣುತ್ತಿದೆ. ಒಂದು ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಮತ್ತು ಅವರ ಅತ್ತೆ ಮತ್ತು ಮಾವನ ಜೊತೆ ಪಾಲ್ಗೊಂಡಿದ್ದರು. ನಿವೇದಿತಾ ಗೌಡ ಅವರು ಸೀರೆಯನ್ನು ಉಟ್ಟುಕೊಂಡು ಬಹಳ ಸುಂದರವಾಗಿ ಕಾಣುತ್ತಿದ್ದರು.

Leave A Reply

Your email address will not be published.