ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮದುವೆ ಅನ್ನೋ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಆದರೆ ಹುಡುಗಿ ವಿಚಾರದಲ್ಲಿ ಕೆಲ ಊಹಾಪೋಹಗಳು ಭಾರಿ ಸದ್ದು ಮಾಡುತ್ತಿದೆ. ನಟಿ ಅನುಪಮಾ ಪರಮೇಶ್ವರನ್ ಹೆಸರು ಬುಮ್ರಾ ಜೊತೆ ಥಳಕು ಹಾಕಿಕೊಂಡಿತ್ತು. ಇದರ ನಡುವೆ ಸಂಜನಾ ಗಣೇಶನ್ ಜೊತೆ ಬುಮ್ರಾ ಮದುವೆ ಫಿಕ್ಸ್ ಆಗಿದೆ. ಮದುವೆ ದಿನಾಂಕ ಸೇರಿದಂತೆ ಇತರ ವಿವರ ಎಲ್ಲವೂ ದೊರಕಿದ್ದು , ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಮದುವೆ ಕುರಿತ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಜಸ್ಪ್ರೀತ್ ಬೂಮ್ರಾ, ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಕೈ ಹಿಡಿಯಲಿದ್ದಾರೆ ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಇದಕ್ಕೂ ಮುನ್ನ ನಟಿ ಅನುಪಮಾ ಪರಮೇಶ್ವರನ್ ಜೊತೆ ಬೂಮ್ರಾ ಡೇಟಿಂಗ್ ಮಾಡುತ್ತಿದ್ದಾರೆ. ನಟಿಯ ಜೊತೆ ಮದುವೆ ಮಾಡಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈಗ ಬೂಮ್ರಾ ಮದುವೆಯಾಗುತ್ತಿರುವುದು ನಟಿ ಅನುಪಮಾ ಅವರನ್ನಲ್ಲ, ಸಂಜನಾ ಗಣೇಶನ್ ಅನ್ನೋದು ಖಚಿತವಾಗಿದೆ. ಗೊಂದಲಗಳು ತೆರೆ ಬಿದ್ದ ಬೆನ್ನಲ್ಲೇ ಇದೀಗ ಬುಮ್ರಾ ಹಾಗೂ ಸಂಜನಾ ಮದುವೆ ದಿನಾಂಕವೂ ಬಹಿರಂಗವಾಗಿದೆ. ಮಾರ್ಚ್ 14-15ರಂದು ಬುಮ್ರಾ ಹಾಗೂ ಸಂಜನಾ ಗಣೇಶನ್ ಮದುವೆ ನಡೆಯಲಿದೆ. ಇದೇ ಬರುವ ಮಾರ್ಚ್ 14-15ರಂದು ಗೋವಾದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ನೆರವೇರಲಿದ್ದು, ಈ ಬಳಿಕ ಆತ್ಮೀಯರಿಗೆ ಹಾಗೂ ಸಹ ಆಟಗಾರರಿಗೆ ರಿಸೆಪ್ಷನ್ ಏರ್ಪಡಿಸಲಾಗುತ್ತೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬುಮ್ರಾ ಹಾಗೂ ಸಂಜನಾ ಕುಟುಂಬಸ್ಥರು ಹಾಗೂ ಆಪ್ತರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಸಂಜನಾ ಗಣೇಶನ್ 2019ರ ವಿಶ್ವಕಪ್ ಟೂರ್ನಿ ವೇಳೆ ಕ್ರಿಕೆಟಿಗನ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಅದು ಬುಮ್ರಾ ಅನ್ನೋ ಯಾವುದೇ ಸುಳಿವು ಅಥವಾ ಅಧೀಕೃತ ಮಾಹಿತಿ ಇರಲಿಲ್ಲ. ಸಂಜನಾ ಹಾಗೂ ಬುಮ್ರಾ ಡೇಟಿಂಗ್, ಭೇಟಿ ಕುರಿತು ಯಾವದೇ ಮಾಹಿತಿಗಳು ಹೊರಬಿದ್ದಿಲ್ಲ. ಬುಮ್ರಾ ಹಾಗೂ ಸಂಜನಾ ಅಧೀಕೃತವಾಗಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಜಸ್‌ಪ್ರಿತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ವೇಳೆ ಬಿಸಿಸಿಐನಿಂದ ಒಪ್ಪಿಗೆ ಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬಿಡುವು ಮಾಡಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಗೋವಾದಲ್ಲಿ ಬುಮ್ರಾ ವಿವಾಹವಾಗುತ್ತಿದ್ದಾರೆಂಬ ಸುದ್ದಿ ವರದಿಯಾಗಿತ್ತು.
ಸಂಜನಾ ಗಣೇಸನ್ ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡದ ಐಪಿಲ್ ಶೋ ನೈಟ್ ಕ್ಲಬ್ ನಲ್ಲಿ ನಿರೂಪಕಿ ಎಂದು ಬಹುತೇಕ ಕ್ರಿಕೆಟ್ ಅಭಿಮಾನಿಗಳಿಗೆ ಈಗಾಗಲೇ ಗೊತ್ತಿದೆ. ಮನೋರಂಜನಾ ನಿಮಿತ್ತ ಸಂಜನಾ ಗಣೇಸನ್ ಅವರು ಫ್ರಾಂಚೈಸಿ ಆಟಗಾರರೊಂದಿಗೆ ನಿಯಮಿತವಾಗಿ ಶೋಗಳನ್ನು ನಡೆಸುತ್ತಿರುತ್ತಾರೆ. ಕಳೆದ ಹಲವು ವರ್ಷಗಳಿಂದ ಜಸ್‌ಪ್ರಿತ್ ಬುಮ್ರಾ ಅವರು ಭಾರತ ತಂಡದ ಪ್ರಮುಖ ವೇಗಿಯಾಗಿ ಮಾರ್ಪಟ್ಟಿದ್ದಾರೆ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜಸ್‌ಪ್ರಿತ್ ಬುಮ್ರಾ, ಐದು ವರ್ಷಗಳ ಬಳಿಕ ಮೂರೂ ಸ್ವರೂಪದ ಕ್ರಿಕೆಟ್‌ನಲ್ಲಿಯೂ ವಿಶ್ವದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287