ಶಂಕರ್ ಅಶ್ವಥ್ ಅವರಿಗೆ ಬಿಗ್ ಬಾಸ್ ಯಿಂದ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

0 2

ಸ್ಯಾಂಡಲ್‌ವುಡ್‌ನ ಅನುಭವಿ ಕಲಾವಿದ ಶಂಕರ್‌ ಅಶ್ವತ್ಥ್‌ ಸೋಶಿಯಲ್‌ ಮೀಡಿಯಾ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಅವರು ಈಗ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ. ಚಾಮಯ್ಯ ಮೇಸ್ಟ್ರ ಮಗ ಶಂಕರ್ ಅಶ್ವಥ್ ಬಿಗ್ ಬಾಸ್ ಮನೆಯ ಹಿರಿಯ ಅಭ್ಯರ್ಥಿ ಶಂಕರ್ ಅಶ್ವಥ್. ಶಂಕರ್ ಅಶ್ವಥ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಪ್ರಮುಖ ಪೋಷಕ ನಟ. ಇವರು ಕನ್ನಡ ಸಿನಿರಂಗದ ದಿಗ್ಗಜ ನಟ ಅಶ್ವಥ್ ರವರ ಪುತ್ರರು. ಹಲವಾರು ಚಿತ್ರಗಳಲ್ಲಿ ತಮ್ಮ ಪ್ರಬುದ್ಧ ನಟನೆಯಿಂದ ಅಭಿನಯ ಪ್ರೌಢಿಮೆ ಮೆರೆದಿದ್ದಾರೆ. ಶಂಕರ್ ಅಶ್ವಥ್ ಬಿಗ್ ಬಾಸ್ ಕನ್ನಡ ಸೀಸನ್ 8ರ 3ನೇ ಅಭ್ಯರ್ಥಿಯಾಗಿ ಮನೆಗೆ ಪ್ರವೇಶಿಸಿದ್ದಾರೆ. ಹೀಗಿದ್ದಾಗ ಶಂಕರ್ ಅಶ್ವಥ್ ರವರಿಗೆ ಬಿಗ್ ಬಾಸ್ ಮನೆಯಲ್ಲಿ ಸಿಗುತ್ತಿರುವ ಸಂಭಾವನೆ ಕಡಿಮೆ ಜಾಸ್ತಿ ಮಾಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ, ಅಷ್ಟಕ್ಕೂ ಅವರಿಗೆ ಸಿಗುತ್ತಿರುವ ಸಂಭಾವನೆ ಆದರೂ ಎಷ್ಟು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸ್ಯಾಂಡಲ್‌ವುಡ್‌ನ ಅನುಭವಿ ಕಲಾವಿದ ಶಂಕರ್‌ ಅಶ್ವತ್ಥ್‌ ಸೋಶಿಯಲ್‌ ಮೀಡಿಯಾ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ನಿಮಗೆ ಗೊತ್ತಿರಬಹುದು 80-90 ರ ದಶಕದಲ್ಲಿ ಸಿನಿಮಾರಂಗವನ್ನು ಆಳಿದ ಹಿರಿಯ ಕಲಾವಿದರ ಬಹುತೇಕ ಮಕ್ಕಳುಗಳು ತಮ್ಮ ತಂದೆಯಂತೆ ಚಿತ್ರರಂಗದಲ್ಲಿ ನೆಲೆಯೂರಲಿಲ್ಲ. ಅಭಿನಯ ಎಂಬುದು ತಮ್ಮ ರಕ್ತದಲ್ಲೇ ಬಂದಿದ್ದರೂ ನಟನಾ ಕೌಶಲ್ಯತೆಗಳನ್ನು ಹೊಂದಿದ್ದರು ನಿರ್ದೇಶಕ ಮತ್ತು ನಿರ್ಮಾಪಕರು ಅವಕಾಶಗಳನ್ನು ನೀಡುತ್ತಿರಲಿಲ್ಲ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಒಂದು ರಿಯಾಲಿಟಿ ಶೋ ಇದರಲ್ಲಿ ಹತ್ತಾರು ಜನಗಳನ್ನು ಕರೆತಂದು ಒಟ್ಟುಗೂಡಿಸಿ ಕೆಲವು ಆಟಗಳನ್ನು ಆಡಿಸಿ ನಿರ್ಬಂಧಗಳನ್ನು ಹೇರಿ ನಡೆಸುವುದೇ ಬಿಗ್ ಬಾಸ್ ಶೋ, ಇದರಲ್ಲಿ ಗೆದ್ದವರಿಗೆ ಕೊನೆಯಲ್ಲಿ ಲಕ್ಷಾಂತರ ರುಪಾಯಿಗಳನ್ನು ಕೊಟ್ಟು ಒಂದು ಮನೆಯನ್ನು ಕೊಡುವ ಪ್ರತೀತಿಯಿದೆ. ಈಗಾಗಲೇ ಕಳೆದ 7 ಸೀಸನ್ ಗಳು ಸಕ್ಸಸ್ ಫುಲ್ಲಾಗಿ ನಡೆದಿದ್ದು ಎಂಟನೇ ಆವೃತ್ತಿಯ ವರೆಗೂ ಬಂದು ನಿಂತಿದೆ. ಈ ವಿಚಾರ ತುಂಬಾ ಜನಗಳಿಗೆ ಗೊತ್ತಿಲ್ಲ ಬಿಗ್ಬಾಸ್ ಶೋನಲ್ಲಿ ಅಲ್ಲಿ ಇರುವ ಕಂಟೆಸ್ಟೆಂಟ್ ಗಳಿಗೆ ಹಣವನ್ನು ಕೊಡುತ್ತಾರೆ ಎಂದು. ಬಿಗ್ ಬಾಸ್ ನಲ್ಲಿ ಕಂಟೆಸ್ಟೆಂಟ್ ಗಳಿಗೆ ಹಣವನ್ನು ಕೊಡುತ್ತಾರೆ ಆದರೆ ಯಾರಿಗೆ ಎಷ್ಟು ಹಣ ಕೊಡುತ್ತಾರೆ ಎಂದು ಯಾರಿಗೂ ಸಂಪೂರ್ಣವಾಗಿ ಗೊತ್ತಿರುವುದಿಲ್ಲ

ಈಗ ಬಿಗ್ ಬಾಸ್ ಎಂಟರ ಆವೃತ್ತಿ ಆರಂಭ ಆಗಿದ್ದು ಶಂಕರ್ ಅಶ್ವತ್ಥ್ ಅವರು ಕೂಡ ಒಬ್ಬ ಕಂಟೆಸ್ಟೆಂಟ್ ಆಗಿ ಆಟವಾಡುತ್ತಿದ್ದಾರೆ. ಇವರಿಗೆ ಬಿಗ್ ಬಾಸ್ ಮನೆಯಲ್ಲಿ ಕೊಡುವ ಹಣ ಎಷ್ಟು ಎಂದು ಯಾರಿಗೂ ಗೊತ್ತಿಲ್ಲ ಅದನ್ನು ನಾವಿಲ್ಲಿ ತಿಳಿಸುತ್ತೇವೆ ಈಗಾಗಲೇ ಶಂಕರ್ ಅಶ್ವತ್ಥ್ ಅವರು ಕೆಲಸ ಇಲ್ಲದೆ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದದ್ದು ಎಲ್ಲರಿಗೂ ತಿಳಿದಿರುವಂತಹ ವಿಚಾರ. ಈ ಮಧ್ಯದಲ್ಲಿ ಬಿಗ್ ಬಾಸ್ ಅವರು ಅವರಿಗೊಂದು ವೇದಿಕೆ ಮಾಡಿಕೊಟ್ಟು ವಾರಕ್ಕೆ ಇಂತಿಷ್ಟು ಹಣವನ್ನು ಕೊಡುತ್ತಿದೆ. ಬಿಗ್ ಬಾಸ್ ನಲ್ಲಿ ತುಂಬ ದಿನ ಉಳಿಯಬೇಕು ಎಂದರೆ ಅವರು ಕೊಡುವ ಡಿಫಿಕಲ್ಟ್ ಟಾಸ್ಕ್ ಗಳನ್ನು ಮಾಡಲೇಬೇಕು, ಇನ್ನು ಶಂಕರ್ ಅಶ್ವತ್ಥ್ ಅವರು ಬಿಗ್ ಬಾಸ್ ನಲ್ಲಿ ಹಿರಿಯ ವ್ಯಕ್ತಿ ಆದುದರಿಂದ ಈಗಾಗಲೇ ಎಲ್ಲರ ಮನವನ್ನು ಗೆದ್ದಿದ್ದಾರೆ ಹಾಗೂ ಒಬ್ಬ ರೆಸ್ಪಾನ್ಸಿಬಲ್ ಪರ್ಸನ್ ಆಗಿ ನಿಂತಿದ್ದಾರೆ ಇವರ ಪರ್ಫಾರ್ಮೆನ್ಸ್ ವೀಕ್ಷಕರಿಗೂ ಬಹಳ ಇಷ್ಟವಾಗಿದೆ.

ಇನ್ನು ಶಂಕರ್ ಅಶ್ವತ ರವರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಇನ್ನೂ ಅತಿ ಹೆಚ್ಚು ಸಿನಿಮಾಗಳಲ್ಲಿ ಅವಕಾಶ ಸಿಗುವ ಸಂಭವವಿದೆ ಏಕೆಂದರೆ ಪ್ರತಿದಿನ ಲಕ್ಷಾಂತರ ಜನರು ಇವರ ಟಾಸ್ಕ್ ಗಳನ್ನ ನೋಡುತ್ತಿರುತ್ತಾರೆ ಹಾಗಾಗಿ ಶಂಕರ್ ಅಶ್ವತ್ಥ್ ಅವರ ಜನಪ್ರಿಯತೆ ಇನ್ನು ಹೆಚ್ಚಾಗುವುದರಲ್ಲಿ ಎರಡು ಮಾತೇ ಇಲ್ಲ. ಬೇರೆ ಕಂಟೆಸ್ಟೆಂಟ್ ಗಳಿಗೆ ಹೋಲಿಸಿದರೆ ಹಿರಿಯ ಕಲಾವಿದರಾದ ಶಂಕರ್ ಅಶ್ವತ್ಥ್ ಅವರಿಗೆ ಕೊಡುತ್ತಿರುವ ಸಂಭಾವನೆ ಬಹಳ ಕಡಿಮೆ. ಇನ್ನು ಶಂಕರ್ ಅಶ್ವತ್ಥ್ ರವರಿಗೆ ಕೊಡುತ್ತಿರುವ ಸಂಭಾವನೆಯ ಬಗ್ಗೆ ಹೇಳುವುದಾದರೆ ಶಂಕರ್ ಅಶ್ವಥ್ ರವರಿಗೆ ಪ್ರತಿ ವಾರಕ್ಕೆ ಐವತ್ತು ಸಾವಿರ ರೂಪಾಯಿಗಳನ್ನು ಕೊಡುತ್ತಿದ್ದಾರೆ ಎಂದು ಕೆಲವು ಮಾಹಿತಿಗಳ ಮುಖಾಂತರ ಕಲೆ ಹಾಕಲಾಗಿದೆ. ಅದೇನೇ ಆದರೂ ಶಂಕರ್ ಅಶ್ವಥ್ ರವರು ಕಷ್ಟದಲ್ಲಿದ್ದಾರೆ ಅವರ ತಂದೆ ಅಶ್ವಥ್ ರವರು ಬಹಳ ಹಿರಿಯ ಕಲಾವಿದ ಹಾಗೂ ದೊಡ್ಡ ದೊಡ್ಡ ನಟರ ಜೊತೆ ನಟಿಸಿದ ಪ್ರತೀತಿ ಅವರದ್ದು. ತಂದೆಯವರಂತೆ ಇವರು ಕೂಡ ಸಾಕಷ್ಟು ಹೆಸರು ಮತ್ತು ಹಣವನ್ನು ಗಳಿಸಲಿ ಹಾಗೂ ಅವರ ಸಮಸ್ಯೆಯಿಂದ ಆದಷ್ಟು ಬೇಗ ಹೊರಬರಲಿ ಎಂದು ಆಶಿಸೋಣ.

Leave A Reply

Your email address will not be published.