ಇತ್ತೀಚಿನ ಟಾಪ್ ನಟಿಯರ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಅವರು ಕೂಡ ಒಬ್ಬರು. ಇವರು ಕಿರಿಕ್ ಪಾರ್ಟಿ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಸಿನಿಮಾ ಬಹಳ ಜನಪ್ರಿಯಗೊಂಡಿತು. ಹಾಗೆಯೇ ನಂತರದಲ್ಲಿ ಬೇರೆಬೇರೆ ಭಾಷೆಗಳ ಸಿನಿಮಾಗಳಿಗೆ ಕರೆಗಳು ಬರುತ್ತಾ ಹೋದವು. ನಂತರದಲ್ಲಿ ಹಲವಾರು ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ. ಆದ್ದರಿಂದ ನಾವು ಇಲ್ಲಿ ರಶ್ಮಿಕ ಮಂದಣ್ಣ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯೋಣ.
ರಶ್ಮಿಕಾ ಅವರು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಒಂದು ಕೊಡವ ಕುಟುಂಬದಲ್ಲಿ ಜನಿಸಿದರು. ಇವರು ಕೂರ್ಗ್ ಪಬ್ಲಿಕ್ ಸ್ಕೂಲ್ ನಲ್ಲಿ ಆರಂಭಿಕ ವಿಧ್ಯಾಬ್ಯಾಸವನ್ನು ಪಡೆದರು. ಮೈಸೂರು ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಆರ್ಟ್ಸ್ ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದರು. ಎಂ.ಎಸ್.ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ & ಕಾಮರ್ಸ್ನಿಂದ ಸೈಕಾಲಜಿ, ಜರ್ನಲಿಸಮ್ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ರಶ್ಮಿಕಾರವರು 2018ರ ಬೆಂಗಳೂರು ಟೈಮ್ಸ್ ನ 25ರ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡರು. 2019ರಲ್ಲಿ ಅವರು 28ನೇ ಸ್ಥಾನದಲ್ಲಿದ್ದರು. ನಂತರ ಅವರು ಮೊದಲ ಬಾರಿಗೆ ಬೆಂಗಳೂರ್ ಟೈಮ್ಸನಲ್ಲಿ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದರು. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಈಚೆಗೆ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಒಳ್ಳೊಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇವರ ನಟನೆಗೆ ಹೆಚ್ಚಿನ ಭಾಷೆಗಳ ಚಲನಚಿತ್ರಗಳು ಇವರನ್ನು ಕೈ ಬೀಸಿ ಕರೆಯುತ್ತಿವೆ. ಈಗಾಗಲೇ ಕನ್ನಡದಲ್ಲಿ ಹಲವಾರು ಸಿನೆಮಾಗಳನ್ನು ಮಾಡಿದ್ದಾರೆ. ಹಾಗೆಯೇ ತೆಲುಗುದಲ್ಲಿ ಸಹ ಗೀತ ಗೋವಿಂದಂ ಎನ್ನುವ ಸಿನೆಮಾ ಬಹಳಷ್ಟು ಹೆಸರು ಮಾಡಿತು. ಹಾಗೆಯೇ ಈಗ ಶೂಟಿಂಗ್ ಗಳಲ್ಲಿ ಬಹಳ ಕಾರ್ಯ ನಿರತ ಆಗಿದ್ದಾರೆ. ಹಾಗಾಗಿ ಸದ್ಯದ ಮಟ್ಟಿಗೆ ಕನ್ನಡದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.