ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಮಾರುವೇಷದಲ್ಲಿ ಕನ್ನಡದ ಖ್ಯಾತ ನಟಿಯೊಬ್ಬರು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಶಾಪಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಜ್ವಲ್ ದೇವರಾಜ್ ನಟನೆಯ ವೀರಂ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ಶಾಪಿಂಗ್ ಮಾಡಿದ್ದಾರೆ. ಈ ವೇಳೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಾರ್ವಜನಿಕರ ಮಧ್ಯೆ ಶಾಪಿಂಗ್ ಮಾಡಿದ್ದಾರೆ. ಇದು ರಚಿತಾ ರಾಮ್ ಎಂದು ಯಾರು ಸಹ ಗುರುತಿಸಿಲ್ಲ ಎಂದು ಸ್ವತಃ ನಟಿಯೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇದೊಂದು ರೀತಿ ಹೊಸ ಅನುಭವ. ನನ್ನನ್ನು ಯಾರು ಗುರುತಿಸುತ್ತಿಲ್ಲ. ಸಿನಿಮಾಗಾಗಿ ಶಾಪಿಂಗ್ ಬಂದಿದ್ದೇವೆ ಇಡೀ ಚಿತ್ರತಂಡ ಇಲ್ಲಿದೆ ಎಂದು ಮಾರುವೇಷದ ಶಾಪಿಂಗ್ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಅಂದ್ಹಾಗೆ, ವೀರಂ ಚಿತ್ರಕ್ಕೆ ಖಾದರ್ ಕುಮಾರ್ ನಿರ್ದೇಶನ ಮಾಡ್ತಿದ್ದು, ಡಿಸೆಂಬರ್ ಆರರಿಂದ ಚಿತ್ರೀಕರಣ ಆರಂಭವಾಗಿದೆ. ರಚಿತಾ ರಾಮ್ ಹಿರಿಯ ನಟಿ ಶ್ರುತಿ ಶ್ರೀನಗರ ಕಿಟ್ಟಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಬೋಲ್ಡ್ ಲುಕ್ ನಲ್ಲಿ  ಕಾಣಿಸಿಕೊಂಡ ಗುಳಿಕೆನ್ನೆ ಬೆಡಗಿಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಬಿಸಿಯೂ ತಟ್ಟಿದೆ. ಅಸಲಿಗೆ  ರಚಿತಾ ಅವರ ಅಧಿಕೃತ ಖಾತೆಯಲ್ಲಿ ಪೋಟೋ ಶೇರ್ ಆಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈ ಪೋಟೋದ್ದೆ ಹವಾ.. ಅಸಲಿ ಕತೆ ಬೇರೆಯೇ ಇದೆ. ರಚಿತಾ ಅವರನ್ನೇ ಉದ್ದೇಶಿಸಿ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಮೇಡಂ ನಿಮಗೆ ಸೀರೆಯೆ ಚೆನ್ನಾಗಿ ಒಪ್ಪುತ್ತದೆ ಎಂದು  ಹೇಳಿ ಈ ಡ್ರೆಸ್ ಸರಿ ಇಲ್ಲ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಇನ್ನು ಕೆಲವು ಖಾರದ ಕಮೆಂಟ್ ಗಳು ಬಂದಿವೆ. ಮೇಡಂ ದಯವಿಟ್ಟು ಈ ರೀತಿಯ ಬಟ್ಟೆ ಹಾಕಬೇಡಿ. ನಿಮ್ಮ ಮೇಲಿನ ಗೌರವ ಕಡಿಮೆಯಾಗುವಂತೆ ಮಾಡಿಕೊಳ್ಳಬೇಡಿ ಎಂದಿದ್ದಾರೆ. ಕನ್ನಡಿಗರಾಗಿ ಇಂಥ ಡ್ರೆಸ್ ಸಹವಾಸ ಮಾಡಬೇಡಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ . ಕೆಲವೊಬ್ಬರು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ಇನ್ನು ಬಿಚ್ಚಿಕೊಂಡು ಪೋಟೋ ತೆಗೆಸಿಕೊಳ್ಳಬೇಕಿತ್ತು ಎಂದು ಕುಟುಕಿದ್ದಾರೆ.

ಇದಕ್ಕೂ ಮೊದಲು ಉಪೇಂದ್ರ ಅಭಿನಯದ ಬಹು ನಿರೀಕ್ಷೆಯ ಐ ಲವ್ ಯು ಚಿತ್ರದಲ್ಲಿ ಅಭಿನಯ ಮಾಡಿದ್ದ ರಚಿತಾ ರಾಮ್ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ರಚಿತಾ ರಾಮ್ ಅವರು ನಟಿಸಿದ್ದಾರೆ. ಈ ಚಿತ್ರದ ಒಂದು ಹಾಡಿನಲ್ಲಿ ಉಪೇಂದ್ರ ಹಾಗು ರಚಿತಾ ರಾಮ್ ಅವರು ಸಕತ್ ಹಾಟ್ ಹಾಗು ಮಾದಕವಾಗಿ ಡಾನ್ಸ್ ಮಾಡಿದ್ದಾರೆ. ಇದಕ್ಕೆ ಹುಚ್ಚ ವೆಂಕಟ್ ಅವರು ಇದರ ಬಗ್ಗೆ ಚಿತ್ರ ತಂಡದ ಬಗ್ಗೆ ಹಾಗೂ ರಚಿತಾ ರಾಮ್ ಅವರ ಬಗ್ಗೆ ಕೂಡಾ ಸಕತ್ ಗರಂ ಆಗಿ ಬೈದಿದ್ದಾರೆ. ಆಗಲೂ ಸಹ ರಚಿತಾ ರಾಮ್ ಅವರ ಕುರಿತಾಗಿ ಸಾಕಷ್ಟು ನೆಗೆಟಿವ್ ಕಾಮೆಂಟ್ ಗಳೂ ಬಂದಿದ್ದವು ಒಟ್ಟಿನಲ್ಲಿ ರಚಿತಾ ರಾಮ್ ಅವರ ಈ ಪೋಟೋ ಸದ್ಯ ಸೋಶಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿದೆ ಅಷ್ಟಕ್ಕೂ ಈ ಪೋಟೋ ಕಿರುತೆರೆ ನಟಿ ನಿಖಿತಾ ಶರ್ಮಾ ಅವರದ್ದು. ಆದರೆ ಕಿಡಿ

Leave a Reply

Your email address will not be published. Required fields are marked *