ಈಗಿನ ದಿನಗಳಲ್ಲಿ ಯಾವುದೇ ರೀತಿಯ ಚಿಕ್ಕಪುಟ್ಟ ತೊಂದರೆಗಳು ದೇಹಕ್ಕೆ ಆದರೂ ಆಸ್ಪತ್ರೆಗೆ ಹೋಗುವವರೇ ಜಾಸ್ತಿ. ಆದರೆ ಮನೆಯಲ್ಲಿ ಎಷ್ಟು ನಾವು ಬಳಸುವ ಆಹಾರ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಇದು ಎಷ್ಟು ಜನರಿಗೆ ತಿಳಿದಿರುವುದಿಲ್ಲ. ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಹಣದ ಅವಶ್ಯಕತೆ ಇರುವುದಿಲ್ಲ. ಕೇವಲ ನಮ್ಮ ಆಸಕ್ತಿಯಿದ್ದರೆ ಸಾಕಾಗುತ್ತದೆ. ಆದ್ದರಿಂದ ನಾವು ಇಲ್ಲಿ ಒಂದು ಕಷಾಯವನ್ನು ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಒಂದು ಪಾತ್ರೆಗೆ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ಒಂದು ಚಮಚ ಜೀರಿಗೆಯನ್ನು ಹಾಕಿ ಕುದಿಯಲು ಬಿಡಬೇಕು. ಜೀರಿಗೆಯು ಅನೇಕ ಅಂಶಗಳನ್ನು ಹೊಂದಿದೆ. ಅಂದರೆ ಮೆಗ್ನೀಷಿಯಂ, ಕಾಪರ್, ಪೊಟ್ಯಾಶಿಯಂ, ಕ್ಯಾಲ್ಸಿಯಂ ಇನ್ನೂ ಅನೇಕ ಅಂಶಗಳನ್ನು ಒಳಗೊಂಡಿದೆ. ಹಾಗೆಯೇ ವಿಟಮಿನ್ ಗಳನ್ನು ಮತ್ತು ಬಿ-ಕಾಂಪ್ಲೆಕ್ಸ್ ಗಳನ್ನು ಇದು ಹೊಂದಿದೆ. ಚೆನ್ನಾಗಿ ಕುದಿದ ನಂತರ ಒಂದು ಲೋಟಕ್ಕೆ ಹಾಕಿ ಇದನ್ನು ಸೋಸಿಕೊಳ್ಳಬೇಕು.

ಇದನ್ನು ಮಾಡಿಕೊಂಡು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಖಾಯಿಲೆಗಳು ದೂರವಾಗುತ್ತವೆ. ಗ್ಯಾಸ್ ಮತ್ತು ಎಸ್.ಎಸ್.ಡಿ.ಟಿ. ಯಾವುದೇ ರೀತಿಯ ತೊಂದರೆಗಳು ಇದ್ದರೂ ದೂರವಾಗುತ್ತದೆ. ಹಾಗೆಯೇ ಶುಗರ್ ಮತ್ತು ಕೊಲೆಸ್ಟ್ರಾಲ್ ತೊಂದರೆಗಳು ಸಹ ದೂರವಾಗುತ್ತದೆ. ಇದರಿಂದ ಕೀಲುನೋವುಗಳು ಸಹ ದೂರವಾಗುತ್ತದೆ. ಹಾಗೆಯೇ ಹೃದಯ ಸಂಬಂಧಿ ಕಾಯಿಲೆಗಳು ಸಹ ಬರುವುದಿಲ್ಲ.

ಹಾಗೆಯೇ ಮೂತ್ರಕೋಶಲ್ಲಿ ಇರುವ ಎಲ್ಲಾ ಕಲ್ಮಶಗಳನ್ನು ಇದು ಹೊರ ಹಾಕುತ್ತದೆ. ಹಾಗೆಯೇ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಬೊಜ್ಜುಗಳು ಸಹ ಕರಗುತ್ತವೆ. ದೇಹದಲ್ಲಿ ಜೀರ್ಣಶಕ್ತಿ ಸಹ ಅಭಿವೃದ್ಧಿ ಆಗುತ್ತದೆ. ಶೀತ, ನೆಗಡಿ ಮತ್ತು ಜ್ವರ ಉಂಟಾದಾಗ ಇದನ್ನು ಕುಡಿದರೆ ವಾಸಿ ಆಗುತ್ತದೆ. ಆದ್ದರಿಂದ ವಾರಕ್ಕೆ 3 ಬಾರಿಯಾದರೂ ಇದರ ಸೇವನೆ ಮಾಡಿ ಪ್ರಯೋಜನವನ್ನು ಪಡೆದುಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!