ಸರ್ಕಾರವು ಅನೇಕ ನೀತಿ ನಿಯಮಗಳನ್ನು ಜಾರಿಗೆ ತರುತ್ತದೆ. ಹಾಗೆಯೇ ಅದನ್ನು ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಕೂಡ ಮಾಡುತ್ತಾ ಹೋಗುತ್ತದೆ. ಅದರಲ್ಲೂ ನಮ್ಮ ಪ್ರಧಾನಮಂತ್ರಿ ಅದ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಹುದ್ದೆಗೆ ಬಂದ ಮೇಲೆ ಅನೇಕ ಬದಲಾವಣೆಗಳು ಆಗಿವೆ. ದುಡ್ಡಿನ ವಿಷಯದಲ್ಲಿ ಆಗಿರಬಹುದು. ಹಾಗೆಯೇ ಎಲ್ಲಾ ರೀತಿಯ ಜನರಿಗೆ ಅನುಕೂಲ ಆಗುವಂತೆ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಆದರೆ ನಾವು ಇಲ್ಲಿ ರಾಜ್ಯ ಸರ್ಕಾರದ ವಸತಿ ನೀಡುವ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಪ್ರತಿಯೊಬ್ಬ ಮನುಷ್ಯನಿಗೂ ತಾನು ಹೊಸ ಮನೆಯನ್ನು ಕಟ್ಟಬೇಕೆಂದು ಬಹಳ ಆಸೆ ಇರುತ್ತದೆ. ಆದರೆ ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಇದು ಬಹಳ ಕಷ್ಟವಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರವು ಜನರು ವಸತಿ ಸೌಲಭ್ಯಗಳ ಪ್ರಯೋಜನ ಪಡೆಯಬೇಕೆಂದು ಅರ್ಜಿಯನ್ನು ಆಹ್ವಾನಿಸಿದೆ. ಯೋಜನೆಯಡಿಯಲ್ಲಿ ಬಡವರು ಅರ್ಜಿಗಳನ್ನು ಸಲ್ಲಿಸಿ ಹೊಸ ಮನೆಯನ್ನು ಕಟ್ಟಿಸಿಕೊಳ್ಳಬಹುದು. ಯೋಜನೆಯ ಹೆಸರು ವಸತಿ ಮತ್ತು ನಿವೇಶನ ಯೋಜನೆ ಎಂಬುದಾಗಿದೆ.
18ರಿಂದ 60 ವರ್ಷ ವಯಸ್ಸಿನವರು ವಸತಿ ಮತ್ತು ನಿವೇಶನ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಹಲವಾರು ದಾಖಲೆಗಳು ಬೇಕು. ಅವುಗಳು ಯಾವುವು ಎಂದರೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಹಾಗೆಯೇ ಅಸ್ತಿತ್ವದಲ್ಲಿರುವ ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಜೆರಾಕ್ಸ್ ಬೇಕಾಗುತ್ತದೆ. ಹಾಗೆಯೇ ಇತ್ತೀಚಿನ 3 ಫೋಟೋಗಳು ಬೇಕು. ಹಾಗೆಯೇ ವಾಸಸ್ಥಳ ಪ್ರಮಾಣ ಪತ್ರ ಬೇಕಾಗುತ್ತದೆ.
ಕನಿಷ್ಟ ಐದು ವರ್ಷವಾದರೂ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರಬೇಕು. ಜನರು ನಿಗಮ ಕಚೇರಿಯಿಂದ ಅರ್ಜಿಗಳನ್ನು ಉಚಿತವಾಗಿ ಪಡೆದುಕೊಂಡು ತುಂಬಬಹುದು. ಈ ಅರ್ಜಿಯ ಜೊತೆ ಎಲ್ಲಾ ದಾಖಲಾತಿಗಳನ್ನು ಸೇರಿಸಿ ಜನವರಿ 20 2021 ರ ಒಳಗೆ ಕೊಡಬೇಕು. ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರದ ವಸತಿ ಮತ್ತು ನಿವೇಶನ ಯೋಜನೆ ಕಚೇರಿ ಅಥವಾ ಇಲಾಖೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ತಿಳಿಯಿರಿ. ಸರ್ಕಾರದಿಂದ ಹಲವು ಯೋಜನೆಗಳು ಜನರ ಹಿತಕ್ಕಾಗಿ ಬರುತ್ತಿವೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಧನ್ಯವಾದಗಳು.