ನಿದ್ರಾಹೀನತೆ ಸತತವಾಗಿ ನಿದ್ರೆ ಇಲ್ಲದಿರುವ ತೊಂದರೆಯಾಗಿದ್ದು, ಇದರಿಂದ ನಿದ್ರಾ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು ಮತ್ತು ಕೆಲವೊಮ್ಮೆ ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆ ಅಲ್ಪಕಾಲಿಕ, ದೀರ್ಘಕಾಲೀಕವಾಗಿ ಕಾಡಬಹುದು. ಒತ್ತಡ, ಎದೆಯುರಿ, ಋತುಬಂಧ, ಔಷಧಗಳು, ಮದ್ಯಪಾನ ಅಥವಾ ಬೇರೆ ಮಾದಕವಸ್ತುಗಳ ಪರಿಣಾಮ, ಅನಿಗದಿತ ರೀತಿಯ ನಿದ್ರಾ ಅಭ್ಯಾಸಗಳು ಅಥವಾ ಅನಿಯಮಿತ ಕೆಲಸದ ಗಂಟೆಗಳು ಇದಕ್ಕೆ ಕಾರಣವಾಗಬಹುದು.

ಈ ಎಲ್ಲದರಿಂದ ದೇಹದ ಜೈವಿಕ ಗಡಿಯಾರಕ್ಕೆ ಅಡ್ಡಿಯಾಗುತ್ತದೆ. ವಯಸ್ಕರಲ್ಲಿ ಶೇ.15ರಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಾರೆ. ವಯಸ್ಸಾದಂತೆ ಇದರ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಪುರುಷರಿಗಿಂತ ಮಹಿಳೆಯರು ಇದಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ನಿದ್ರೆ ಸರಿಯಾಗಿ ಮಾಡದಿರುವುದು, ಅಡೆತಡೆಯ ನಿದ್ದೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯಿಂದ ಮಾನಸಿಕ ಖಿನ್ನತೆ, ರಕ್ತದ ಒತ್ತಡ, ಬೊಜ್ಜು ಮತ್ತಿತರ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ದರಿಂದ ನಿದ್ರಾಹೀನತೆ ಉಂಟಾಗದಂತೆ ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು. ಈ ಲೇಖನದಲ್ಲಿ ನಾವೂ ನಿದ್ರಾಹೀನತೆಗೆ ಮನೇಮದ್ದನ್ನು ತಿಳಿದುಕೊಳ್ಳೋಣ.

ಚರಕಾಚಾರ್ಯರ ಪ್ರಕಾರ, ನಿದ್ರೆ ಮನುಷ್ಯನ ಸಂತೋಷ, ನೆಮ್ಮದಿ, ದುಃಖ, ದೇಹದ ಪೌಷ್ಟಿಕತೆ, ಕೃಶತೆ, ಬಲ, ಧೃಢತೆ, ಜ್ಞಾನ, ಮೂಢತ್ವ, ಜೀವ, ಮರಣಗಳಿಗೆ ಕಾರಣ ಎಂದು ಹೇಳುತ್ತಾರೆ. ಇಂದು ನಾವು ನಿದ್ರೆಗೆ ಸಾಕಷ್ಟು ಸಮಯವನ್ನು ಕೊಡುತ್ತಿಲ್ಲ. ಆಯುರ್ವೇದದ ಪ್ರಕಾರ, ಆರೋಗ್ಯಯುತ ಜೀವನದ ಮೂರು ತಳಹದಿಗಳು ಎಂದರೆ ಅವು ಆಹಾರ, ಸಾತ್ವಿಕ ಜೀವನ ಮತ್ತು ನಿದ್ರೆ. ನಿದ್ರೆ ಮನುಷ್ಯನ ದೈಹಿಕ–ಮಾನಸಿಕ ವಿಶ್ರಾಂತಿಯ ಸಮಯ. ಈ ಸಮಯದಲ್ಲೇ ದೇಹದಲ್ಲಿನ ಪ್ರತಿಯೊಂದು ಜೀವಕೋಶಗಳು ಪುನರ್ಜೀವೀತಗೊಳ್ಳುತ್ತಿರುತ್ತವೆ. ಸಹಜವಾಗಿ ಒಬ್ಬ ಮನುಷ್ಯನಿಗೆ 7–8 ಗಂಟೆಗಳ ಸುಖನಿದ್ರೆ ಅತ್ಯವಶ್ಯಕ. ಮಕ್ಕಳಿಗೆ ಸುಮಾರು 10–15 ಗಂಟೆಗಳ ನಿದ್ರೆ ಬೇಕಾಗುತ್ತದೆ.

ಈ ಸಮಯದಲ್ಲಿ ಅವರಲ್ಲಿ ಅಗ್ರೋತ್ ಹಾರ್ಮೋನ್ ಎಂಬ ರಾಸಾಯನಿಕ ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗಿ ಅವರ ಸಂಪೂರ್ಣ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗೆಯೇ ಒತ್ತಡ ಉಂಟಾದಾಗ ಬಿಡುಗಡೆಯಾಗುವ ಹಾರ್ಮೋನ್ ಅತಿ ಕಡಿಮೆ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಹಸಿವನ್ನು ಹತೋಟಿಯಲ್ಲಿಡುವ ಹಾರ್ಮೋನ್‌ಗಳು, ದೇಹ, ಮನಸ್ಸನ್ನು ಸುಸ್ಥಿತಿಯಲ್ಲಿಡುವ ವಿಷಯಗಳೆಲ್ಲವೂ ಸುಖನಿದ್ರೆಯನ್ನು ಸಂಪೂರ್ಣವಾಗಿ ಅವಲಂಬಿಸಿವೆ. ನಿದ್ರಾಹೀನತೆಯಿಂದ ಉಂಟಾಗುವ ಕೆಲವು ತೊಂದರೆಗಳು ಹೀಗಿವೆ.

ಸರಿಯಾದ ಪ್ರಮಾಣದ ನಿದ್ರೆ ಆಗದೇ ಇದ್ದಾಗ ಮಾನಸಿಕವಾಗಿ ಕಿರಿಕಿರಿ, ಒತ್ತಡ, ಉತ್ಸಾಹಹೀನತೆ, ತಲೆನೋವು, ತಲೆಭಾರ, ಅತಿಯಾದ ಆಕಳಿಕೆ, ಬಳಲಿಕೆ, ಶೀಘ್ರ ಕೋಪ, ಅಜೀರ್ಣಗಳು ಉಂಟಾಗುತ್ತವೆ. ದೇಹದ ರೋಗನಿರೋಧಕ ಶಕ್ತಿ ಮತ್ತು ನಿದ್ರೆಗಳೆರಡೂ ಒಂದಕ್ಕೊಂದು ಪೂರಕವಾಗಿದೆ. ಆವಶ್ಯಕತೆಗಿಂತ ಕಡಿಮೆ ನಿದ್ರೆ ದೇಹದಲ್ಲಿ ಅನೇಕ ಸೊಂಕು ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತದೆ. ಮಾನಸಿಕ ಒತ್ತಡ, ಭಯ, ಕೋಪ, ಆತಂಕ, ಅತಿಯಾದ ವ್ಯಾಯಮ, ದೈಹಿಕ ಶ್ರಮ, ಉಪವಾಸ, ಕಡಿಮೆ ಆಹಾರ ಸೇವಿಸುವುದು – ಇವೆಲ್ಲವೂ ನಿದ್ರಾಹೀನತೆಗೆ ಪ್ರಮುಖ ಕಾರಣಗಳು.

ಕೆಲವರಿಗೆ ಪ್ರತೀ ದಿನ ನಿದ್ರೆ ಮಾತ್ರೆ ತೆಗೆದುಕೊಂಡರೆ ಅಷ್ಟೇ ನಿದ್ದೆ ಬರುವುದು ಇಲ್ಲವಾದರೆ ಮಾತ್ರೆ ತೆಗೆದುಕೊಳ್ಳದ ದಿನ ನಿದ್ರೆ ಅವರಿಗೆ ಎಟುಕದ ನಕ್ಷತ್ರದ ಹಾಗೇ ಎಂದರೆ ತಪ್ಪಾಗಲಿಕ್ಕಿಲ್ಲ. ಹಿರಿಯರ ಮಾತಿನ ಹಾಗೇ ನಿಜವಾದ ಶ್ರೀಮಂತ ಎಂದರೆ, ರಾತ್ರಿ ಮಲಗುವ ಸಮಯದಲ್ಲಿ ದಿಂಬಿನ ಮೇಲೆ ತಲೆ ಇಟ್ಟ ತಕ್ಷಣ ಯಾರಿಗೆ ನಿದ್ರೆ ಬರುತ್ತದೆಯೋ ಅವರೇ ನಿಜವಾದ ಶ್ರೀಮಂತ ಎಂದು ಹೇಳುತ್ತಾರೆ.

ಹಣ ಎಷ್ಟು ಬೇಕಿದ್ದರೂ ಇರಬಹುದು ಹಣ ಎಷ್ಟಿದ್ದರೆ ಏನಂತೆ! ಸರಿಯಾಗಿ ಕನಿಷ್ಠ ಏನಿಲ್ಲಾ ಅಂದರೂ ದಿನಕ್ಕೆ ಒಬ್ಬ ವ್ಯಕ್ತಿಗೆ ಕನಿಷ್ಠ ಐದರಿಂದ ಆರು ತಾಸು ಆದರೂ ನಿದ್ರೆ ಮಾಡಿದಾಗ ಮಾತ್ರ ಆತ ನೆಮ್ಮದಿಯಾಗಿ ಇರಬಲ್ಲ. ಆದರೆ ಕೆಲವರಿಗೆ ನಿದ್ರೆ ಮಾತ್ರೆ ಇಲ್ಲ ಅಂದ್ರೆ ನಿದ್ದೆಯೇ ಬರೋದಿಲ್ಲ. ಅಂತಹ ಜನರಿಗೆ ನಿದ್ರೆ ಸರಿಯಾಗಿ ಬರಲು ಸುಲಭವಾದ ಪಾನೀಯ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ.

ಇದಕ್ಕೆ ಬೇಕಿರುವುದು ಕೇವಲ ನಾಲ್ಕು ಪದಾರ್ಥಗಳು ಅದೂ ನಮ್ಮ ಮನೆಯಲ್ಲಿ ಸುಲಭವಾಗಿ ಸಿಗುವಂತಹದ್ದೆ. ಎರಡು ಗ್ರಾಂ ಅಷ್ಟು ಗರಿಕೆ ಹುಲ್ಲಿನ ಚೂರ್ಣ, ಅವರ್ಕೆ ಹೂವಿನ ಚೂರ್ಣ ಎರಡು ಗ್ರಾಂ, ಅಲೋವೆರಾ ಚೂರ್ಣ ಇದೂ ಸಹ ಎರಡು ಗ್ರಾಂ ಹಾಗೂ ಕೊನೆಯದಾಗಿ ಸೊಗದೆ ಬೇರಿನ ಚೂರ್ಣ ಎರಡು ಗ್ರಾಂ. ಇವೆಲ್ಲವನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮುನ್ನೂರು ml ನೀರಿಗೆ ಹಾಕಿ ಕುದಿಸಿ ಇದು ನೂರು ml ಗೆ ಬರುವಷ್ಟು ಕುದಿಸಿ ಬೆಳಿಗ್ಗೆ ತಿಂಡಿಗೂ ಮೊದಲು ಹಾಗೂ ರಾತ್ರಿ ಊಟಕ್ಕೂ ಮೊದಲು ನೂರು ml ಅಷ್ಟು ನೂರು ದಿನಗಳ ಕಾಲ ತಪ್ಪದೆ ಕುಡಿದರೆ ನಿದ್ರೆ ಚೆನ್ನಾಗಿ ಬರುವುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ ಹಾಗೆ ಯಾವುದೇ ರೀತಿಯ ನಿದ್ರೆ ಮಾತ್ರೆ ಕೂಡಾ ಅಗತ್ಯ ಇರುವುದಿಲ್ಲ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!