ಹೆಸರು ಕಾಲು ದೇಹಕ್ಕೆ ತಂಪು ನೀಡುವಂತ ಧಾನ್ಯವಾಗಿದೆ, ಇದರಿ ದೇಹದ ಉಷ್ಣತೆ ನಿವಾರಿಸುವಂತ ಗುಣವಿದೆ ಹಾಗಾಗಿ ಹೆಸರುಕಾಳನ್ನು ಪಾಯಸ ಮುಂತಾದ ಅಡುಗೆಗೆಳಲ್ಲಿ ಬಳಸುತ್ತಾರೆ ಅಷ್ಟೇ ಅಲ್ಲದೆ ಇನ್ನು ಹತ್ತಾರು ಪ್ರಯೋಜನಗಳನ್ನು ಹೆಸರುಕಾಳಿನಿಂದ ಪಡೆಯಬಹುದಾಗಿದೆ. ಹೆಸರುಕಾಳು ಹೇಗೆಲ್ಲ ಪ್ರಯೋಜನಕಾರಿ ಅನ್ನೋದನ್ನ ಈ ಮೂಲಕ ತಿಳಿಯ
ಮುಖದ ಕಲೆಗಳನ್ನು ನಿವಾರಿಸುವಲ್ಲಿ ಹೆಸರುಕಾಳು ಪ್ರಯೋಜನಕಾರಿ, ಹೌದು ಕಡಲೆಹಿಟ್ಟನ್ನು ಬಳಸುವಂತೆ ಹೆಸರುಕಾಳಿನ ಹಿಟ್ಟನ್ನು ಸಾಬೂನಿಗೆ ಬದಲಾಗಿ ಮುಖ ತೊಳೆಯಲು ಬಳಸುವುದರಿಂದ ಮುಖದ ಮೇಲಿನ ಕಲೆಗಳು ಇಲ್ಲವಾಗಿ ಚರ್ಮ ಕಾಂತಿಯುಕ್ತವಾಗುತ್ತದೆ.
ಅತಿಸಾರ ಸಮಸ್ಯೆಗೆ: ೫೦ ಗ್ರಾಂ ಹೆಸರುಕಾಳನ್ನು ೩೦೦ ಮಿಲಿ ನೀರಿನಲ್ಲಿ ಹಾಕಿ ಕುಡಿಸಿ ಭೇದಿಯಾದಾಗ ಅರ್ಧ ಕಪ್ಪನ್ನು ಗಂಟೆಗೊಮ್ಮೆ ಕುದಿಸಿದರೆ ಅತಿಸಾರ ಕಡಿಮೆಯಾಗುವುದು. ಇನ್ನು ಬೆವರು ಸಮಸ್ಯೆ ಕೆಲವರಲ್ಲಿ ಕಾಡುತ್ತದೆ ಸಾಮಾನ್ಯವಾಗಿ ಬೆವರು ಬರುವುದು ಸಹಜ ಆದ್ರೆ ಕೆಲವರಲ್ಲಿ ಅತಿಯಾಗಿ ಬೆವರು ಬರುತ್ತದೆ. ಅಂಗೈ ಅಂಗಾಲುಗಳಲ್ಲಿ ಬೆವರು ಹೆಚ್ಚಾದರೆ ಹೆಸರು ಕಾಲುಗಳನ್ನು ಕಾರಕಗುವಂತೆ ಹುರಿದು ಕುಟ್ಟಿ ಪುಡಿಮಾಡಿ ನೀರಿನಲ್ಲಿ ಕಲಸಿ ಅಂಗೈ ಅಂಗಾಲುಗಳಿಗೆ ಹಚ್ಚಿ ಒಂದು ಗಂಟೆ ನಂತರ ತೊಳೆಯಬೇಕು. ಈ ರೀತಿ ಪದೇ ಪದೇ ಬಿಡುವಿರುವಾಗ ಮಾಡಿದ್ದಲ್ಲಿ ಬೆವರು ಕಡಿಮೆಯಾಗುತ್ತದೆ.