ಸೈಲೆಂಟ್ ಹಾರ್ಟ್ ಅಟ್ಯಾಕ್ ನಿಂದ ಜೀವ ಉಳಿಸುವ ಸಾಧನ ಕಂಡು ಹಿಡಿದ 15 ವಯಸ್ಸಿನ ಪೋರ

0 1

ಇತ್ತೀಚಿನ ದಿನಗಳಲ್ಲಿ ಹಲವು ದೈಹಿಕ ಸಮಸ್ಯೆಗಳು ಮನುಷ್ಯನಿಗೆ ಕಾಡುವುದು ಸಹಜವಾಗಿದೆ, ಅವುಗಳಲ್ಲಿ ಈ ಸೈಲೆಂಟ್ ಹಾರ್ಟ್ ಅಟ್ಯಾಕ್ ಕೂಡ ಒಂದಾಗಿದೆ. ಕೆಲವೊಮ್ಮೆ ಈ ಹಾರ್ಟ್ ಅಟ್ಯಾಕ್ ಬಂದರೆ ಜೀವವೇ ಹೋಗುವ ಸಂಭವ ಹೆಚ್ಚು ಇದರಿಂದ ಪರಾಗಬಲ್ಲ ಸಾಧನವನ್ನು ಈ ೧೫ ವಯಸ್ಸಿನ ಪೋರ ಅಭಿವೃದ್ಧಿ ಮಾಡಿದ್ದಾನೆ.

ತಮಿಳುನಾಡು ಮೂಲದ ಆಕಾಶ್ ಎನ್ನುವ 15 ವಯಸ್ಸಿನ ಹುಡುಗ ಈ ಸಾಧನೆಗೆ ಮುಂದಾಗಿದ್ದಾನೆ. ಸೈಲೆಂಟ್ ಹಾರ್ಟ್ ಅಟ್ಯಾಕ್ ಹೇಗೆ ಆಗುತ್ತೆ ಅದನ್ನು ಹೇಗೆ ಪತ್ತೆ ಹಚ್ಚಬಹದು ಅನ್ನೋ ಸಾಧನವನ್ನು ಅಭಿವೃದ್ಧಿ ಪಡಿಸಿರುವ ಆಕಾಶ್ ಇದರ ಬಗ್ಗೆ ಹೇಳೋದೇನು ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ, ನಮ್ಮ ಮನೆಯಲ್ಲಿ ನಮ್ಮ ತಾತನಿಗೆ ಪದೇ ಪದೇ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗುತಿತ್ತುಇದರ ಸಲುವಾಗಿ ನಾನು ಕೂಡ ಇದನ್ನು ಪ್ರೇರಣೆಯಾಗಿಇಟ್ಟುಕೊಂಡು ಇದರ ಬಗ್ಗೆ ಹೊಸದಾಗಿ ಏನಾದರು ಮಾಡಬೇಕು ಅನ್ನೋ ಆಸಕ್ತಿಯಿಂದ ಹಾರ್ಟ್ ಅಟ್ಯಾಕ್ ಆಗುವುದನ್ನು ಪತ್ತೆ ಹಚ್ಚಬಲ್ಲ ಸಾಧನವನ್ನು ಅಭಿವೃದ್ಧಿ ಪಡಿಸಿದೆ, ಅಷ್ಟೇ ಅಲ್ದೆ ನನಗೆ ಮುಂಚೆ ಇಂದಲು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯಿದೆ ಅನ್ನೋದನ್ನ ಈ ಹುಡುಗ ಹೇಳುತ್ತಾರೆ.

ಆಕಾಶ್ ಅಭಿವೃದ್ಧಿ ಪಡಿಸಿರುವಂತ ಡಿವೈಸ್ ಯಾವ ರೀತಿ ಕಾರ್ಯ ನಿರ್ವಹಿಸಬಲ್ಲದು ಅನ್ನೋದನ್ನ ನೋಡುವುದಾದರೆ, ದೇಹಕ್ಕೆ ದುಷ್ಪರಿಣಾಮವಿಲ್ಲದ ವಸ್ತುಗಳನ್ನು ಉಪಯೋಗಿಸಿಕೊಂಡು ಸೈಲೆಂಟ್ ಹಾರ್ಟ್ ಅಟ್ಯಾಕ್ ಅನ್ನು ಪತ್ತೆ ಹಚ್ಚಬಲ್ಲ ಡಿವೈಸ್ ಕಂಡುಹಿಡಿದಿದ್ದಾರೆ. ಇನ್ನು ಇದು ಹೇಗೆ ಕಾರ್ಯ ನಿರ್ವಹಿಸುತ್ತೆ ಅಂದ್ರೆ ಈ ಸಾಧನ ದೇಹದ ರಕ್ತದಲ್ಲಿನ ಪ್ರೊಟೀನ, FABPS ಅನ್ನು ಕಂಡುಹಿಡಿಯುತ್ತದೆ ಹಾಗೂ ಇದರಿಂದ ಸೈಲೆಂಟ್ ಹಾರ್ಟ್ ಅಟ್ಯಾಕ್ ಪತ್ತೆ ಹಚ್ಚಬಹುದು.

ಇದನ್ನು ಹೇಗೆ ಬಳಸಬಹುದು ಅಂದ್ರೆ ಮೊಣಕೈ ಅಥವಾ ಕಿವಿಯ ಹಿಂಭಾಗದಲ್ಲಿ ಇಟ್ಟುಕೊಳ್ಳಬಹುದು FABPS ಅನ್ನೋದು ದೇಹದ ರಕ್ತದಲ್ಲಿ ಇರುವಂತ ಚಿಕ್ಕ ಪ್ರೊಟೀನ್ ಕಣವಾಗಿದೆ, ಇದು ನೆಗೆಟಿವ್ ಅಂಶಗಳನ್ನು ಹೊಂದಿರುವುದರಿಂದ ಪಾಸಿಟಿವ್ ಅಂಶಗಳನ್ನು ಆಕರ್ಷಿಸುತ್ತಿದೆ. ಇದು ಆಕಾಶ್ ಅಭಿವೃದ್ಧಿ ಪಡಿಸಿರುವಂತ ಡಿವೈಸ್ ನಿಂದ ಪತ್ತೆ ಹಚ್ಚ ಬಹುದಾಗಿದೆ.

ಇನ್ನು ಆಕಾಶ್ ಕಂಡು ಹಿಡಿದ ಈ ಸಾಧನದಿಂದ ಹಲವರ ಪ್ರಾಣ ಉಳಿಸಬಹುದು ಅನ್ನೋದನ್ನ ಹೇಳಲಾಗುತ್ತದೆ. ಈ ಸಾಧನೆಗೆ ರಾಷ್ಟ್ರಪತಿ ಶಬಾಸ್ ಗಿರಿ ನೀಡಿದ್ದಾರೆ ಅಲ್ಲದೆ ಭವಿಷ್ಯದಲ್ಲಿ ಇನ್ನು ದೊಡ್ಡ ದೊಡ್ಡ ಸಾಧನೆಯನ್ನು ಮಾಡುವ ಗುರಿ ಕನಸು ಆಕಾಶ್ ಅವರಿಗಿದೆ.

Leave A Reply

Your email address will not be published.