ನೆಲದಿಂದ ಸ್ವಲ್ಪ ಎತ್ತರದಲ್ಲಿ ಇರುವ ಈ ಗಿಡ ಸೇವಂತಿಗೆ ಹೂವಿನ ಬೋನ್ಸಾಯ್ ಗಿಡದಂತೆ ಕಾಣತ್ತೆ. ಇದನ್ನ ಇಂಗ್ಲಿಷ್ ನಲ್ಲಿ ಮೆಕ್ಸಿಕನ್ ವೈಲ್ಡ್ ಡೈಸಿ, ರೋಸ್ ಡೈಸಿ ಎಂದು, ಹಿಂದಿಯಲ್ಲಿ ಕಲಾಲ್, ಕನ್ನಡದಲ್ಲಿ ಗಬ್ಬು ಸೇವಂತಿಗೆ ಎಂದೂ ಕರೆಯುತ್ತಾರೆ.
ಈ ಹೂವು ಅಲಂಕಾರಕ್ಕೆ ಬಳಕೆಯಾಗದೆ ಇದ್ದರು ಹಿಂದಿನ ಕಾಲದಲ್ಲಿ ಔಷಧೀಯ ಲೇಪಗಳಾಗಿ ಬಳಸುತ್ತಾ ಇದ್ರು. ಇದು ರಕ್ತ ಸ್ರಾವ ಆದಾಗ e ಗಬ್ಬು ಸೇವಂತಿಗೆ ಹೂವಿನ ಲೇಪ ಹಚ್ಚಿದರೆ ರಕ್ತ ಸ್ರಾವವನ್ನು ತಡೆದು ರಕ್ತ ಹೆಪ್ಪುಗಟ್ಟವಿಕೆಗೆ ಸಹಾಯ ಮಾಡುತ್ತೆ . ವಾಂತಿ ಬೇಧಿಯ ಸಮಸ್ಯೆ ಆದಾಗಲೂ ಸಹ ಈ ಗಿಡದ ಕಷಾಯ ಮಾಡಿ ಸೇವಿಸಿದರೆ ಕಡಿಮೆ ಆಗತ್ತೆ. ದೇಹದ ಯಾವುದೇ ಭಾಗದಲ್ಲಿ ಊತ ಕಂಡು ಬಂದರೆ ಈ ಗಿಡವನ್ನು ಅರೆದು ಪಟ್ಟಿ ಕಟ್ಟಿದರೆ ಗುಣಮುಖ ಆಗುತ್ತದೆ.
ಇನ್ನೂ ಅಸ್ತಮಾ ಹಾಗೂ ಕೆಮ್ಮಿಗೆ ಇದರ ಕಷಾಯ ಸೇವನೆ ಬಹಳ ಪ್ರಯೋಜನಕಾರಿ. ಹಳ್ಳಿಗಳಲ್ಲಿ ಚರ್ಮ ಸಂಬಂಧಿ ಕಾಯಿಲೆಗಳಿಗೆ ಹೆಚ್ಚು ಬಳಕೆ ಆಗುತ್ತದೆ. ಈ ಗಿಡದ ಹೂವುಗಳು ಒಂದು ರೀತಿಯ ವಿಚಿತ್ರ ವಾಸನೆ ಹೊಂದಿರುವುದರಿಂದ ಕ್ರಿಮಿ ಕೀಟಗಳು ಉಂಟಾಗುವುದಿಲ್ಲ. ಹಾಗಾಗಿ ಇವುಗಳನ್ನ ಹೆಚ್ಚು ಬೆಳೆಸಿದರೆ ಉತ್ತಮ. ಈ ಹೂವಿನ ರಸವನ್ನು ಹಚ್ಚಿಕೊಳ್ಳುವುದರಿಂದ ಸೊಳ್ಳೆಗಳು ಬರದಂತೆ ತಡೆಯುತ್ತದೆ.
ಗರ್ಭಿಣಿಯರಿಗೆ ಈ ಗಿಡದ ಕಷಾಯ ಸೇವಿಸಬಾರದು. ಚರ್ಮ ರೋಗಕ್ಕೆ ಕೂಡ ಇದು ಉತ್ತಮ ಔಷಧಿ. ನಾವು ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಬಿಡುವ ಈ ಗಬ್ಬು ಸೇವಂತಿಗೆ ಗಿಡ ಹಾಗೂ ಹೂವಿನಲ್ಲಿ ಎಷ್ಟೆಲ್ಲ ಔಷಧೀಯ ಗುಣಗಳು ಇವೆ ಅಲ್ವಾ.