ನಮ್ಮ ದೇಶದಲ್ಲಿ ಕುತೂಹಲಕಾರಿಯಾದ ಅನೇಕ ವಿಷಯಗಳಿವೆ ಹಿಂದಿನ ಕಾಲದಲ್ಲಿ ಅಡಗಿಸಿಟ್ಟಿರುವ ನಿಧಿಗಳು ಕೂಡ ಕುತೂಹಲವನ್ನು ಮೂಡಿಸುತ್ತವೆ. ಬಂಗಾರದ ನಿಧಿ ಇದೆ ಎಂಬುದನ್ನು ತಿಳಿಸುವ ಗುರುತುಗಳು ಯಾವವು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗುಪ್ತ ನಿಧಿಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ ಸುಲಭವಾಗಿ ಸಿಗುವಂತಿದ್ದಿದ್ದರೆ ಪ್ರತಿಯೊಬ್ಬರೂ ಕೋಟ್ಯಾಧಿಪತಿಗಳಾಗುತ್ತಿದ್ದರು. ಆದರೆ ಪೂರ್ವಕಾಲದಲ್ಲಿ ಶತ್ರು ರಾಜ್ಯದವರು ದಂಡಯಾತ್ರೆಗೆ ಬರುತ್ತಿದ್ದಾರೆ ಎಂದು ಗೊತ್ತಾದರೆ ಬಂಗಾರವನ್ನು ರತ್ನವನ್ನು ಎಲ್ಲ ಧನವನ್ನು ಗುಪ್ತ ಪ್ರದೇಶಗಳಿಗೆ ಅಂದರೆ ಬಾವಿಗಳಲ್ಲಿ ಅರಣ್ಯಗಳಲ್ಲಿ ದೇವಾಲಯಗಳಲ್ಲಿ ಬೆಟ್ಟದ ಗುಹೆಗಳಲ್ಲಿ ಈ ಬಂಗಾರವನ್ನು ತೆಗೆದುಕೊಂಡು ಹೋಗಿ ಮುಚ್ಚಿಡುತ್ತಿದ್ದರು.
ಪರಿಸ್ಥಿತಿಗಳು ಸರಿಹೋದ ನಂತರ ಆ ಬಂಗಾರವನ್ನು ತಂದುಕೊಳ್ಳುತ್ತಿದ್ದರು ಇಲ್ಲ ಅಂದರೆ ಆ ನಿಧಿಗಳು ಅಲ್ಲೇ ಉಳಿದುಕೊಂಡು ಬಿಡುತ್ತಿದ್ದವು. ಅದೃಷ್ಟ ಇರುವವರಿಗೆ ಅವು ಸಿಗುತ್ತಿದ್ದವು ಈ ರೀತಿಯ ಗುಪ್ತ ನಿಧಿಗಳು ಈಗಲೂ ಅಲ್ಲಲ್ಲಿ ಸಿಗುತ್ತಿರುತ್ತವೆ.
ನಮ್ಮ ದೇಶದಲ್ಲಿ ಗುಪ್ತನಿಧಿಗಳ ಸ್ಥಾವರಗಳು ಜಾಸ್ತಿನೇ ಇವೆ ತುಂಬಾ ಜನ ಇದರ ಮೇಲೆ ಫರಿಶೋಧನೆಯನ್ನು ಮಾಡುತ್ತಿದ್ದಾರೆ ಕೆಲವರು ತಮ್ಮ ಮನೆಗಳನ್ನು ಮಾರಿ ಇವುಗಳಿಗಾಗಿ ಓಡಾಡುತ್ತಿದ್ದಾರೆ ಕೊನೆಗೆ ಯಾವುದು ಸಿಗದೆ ಹುಚ್ಚರಾದವರು ಇದ್ದಾರೆ ನಿಮಗೇನಾದರೂ ಈ ನಿಧಿಗಳನ್ನು ಹುಡುಕುವ ಆಸೆ ಇದ್ದರೆ ಅದನ್ನು ಬಿಟ್ಟು ಬಿಡಿ.
ಇನ್ನು ಗುಪ್ತ ನಿಧಿಗಳು ಆ ಪ್ರದೇಶದಲ್ಲಿ ಇವೆ ಅಂತ ತಿಳಿದುಕೊಳ್ಳುವ ಮಾರ್ಗಗಳ ಬಗ್ಗೆ ತಿಳಿದುಕೊಳ್ಳೋಣ. ನೂರು ವರ್ಷದ ಮೊದಲು ಕಟ್ಟಿದ ಮನೆ ಅಥವಾ ಬಂಗಲೆಯ ಮುಂಬಾಗದಲ್ಲಿ ಆ ಮನೆ ಕಟ್ಟಿದಾಗ ನೆಟ್ಟಿರುವ ಬಾದಾಮಿ ಮರ ಇದ್ದರೆ ಆ ಪ್ರದೇಶದಲ್ಲಿ ಗುಪ್ತ ನಿಧಿ ಇರುತ್ತದೆ ಯಾಕೆಂದರೆ ಬಾದಾಮಿ ಗಿಡವನ್ನು ನಿಧಿಗಳಿಗೆ ಗುರುತಾಗಿ ಪೂರ್ವಿಕರು ಇಟ್ಟುಕೊಂಡಿದ್ದರಂತೆ ನಿಧಿಯನ್ನು ಭದ್ರಪಡಿಸುವಾಗಲೆ ಬಾದಾಮಿ ಗಿಡವನ್ನು ನೆಟ್ಟರೆ ಭವಿಷ್ಯದಲ್ಲಿ ಅವರ ವಂಶಸ್ಥರು ಆ ಗಿಡದ ಆಧಾರದ ಮೇಲೆ ಆ ಮನೆಯ ಅಂಗಳದಲ್ಲಿ ನಿಧಿ ಇದೆ ಎಂದು ಗುರುತಿಸುತ್ತಾರೆ ಎಂದು ಪೂರ್ವಿಕರು ಭಾವಿಸುತ್ತಿದ್ದರಂತೆ.
ಎರಡನೇ ಗುರುತು ನೂರು ವರ್ಷ ಮೆಲ್ಪಟ್ಟಿರುವ ಮನೆಗಳಲ್ಲಿ ದಕ್ಷಿಣ ಅಥವಾ ಉತ್ತರ ದಿಕ್ಕಿನಲ್ಲಿ ಒಂದು ದೊಡ್ಡ ಹುತ್ತ ಇದ್ದರೆ ಅದರಲ್ಲಿ ನಿಧಿ ಇರುತ್ತದೆ ಎಂದು ನಂಬುತ್ತಾರೆ. ಮೂರನೇ ಗುರುತು ನೂರೈವತ್ತು ಐನೂರು ವರ್ಷಗಳಲ್ಲಿ ನಿರ್ಮಿಸಿದ ಶಿವಾಲಯದ ಗರ್ಭಗುಡಿಯಲ್ಲಿ ಶಿವನಿಗೆ ಎದುರಾಗಿ ಇರುವ ನಂದಿಯ ತಳಬಾಗದಲ್ಲಿ ಗುಪ್ತ ನಿಧಿಗಳು ಇರುತ್ತವೆ ಎಂದು ಹೇಳುತ್ತಾರೆ. ಕನಿಷ್ಠ ನೂರೈವತ್ತು ವರ್ಷಗಳ ಹಿಂದೆ ನಿರ್ಮಿಸಿದ ದೇವಸ್ಥಾನದ ಗಜಸ್ಥಂಭದ ಕೆಳಗೆ ಮಂತ್ರ ತಂತ್ರಗಳಿಂದ ಪೂಜಿಸಲ್ಪಟ್ಟ ಐದು ಕೆಜಿಗು ಅಧಿಕ ಬಂಗಾರ ಇರುತ್ತದಂತೆ.
ನೂರು ವರ್ಷಗಳಿಗಿಂತ ಹಿಂದೆ ನಿರ್ಮಿಸಿದ ವಿಷ್ಣುವಿನ ದೇವಾಲಯದ ಗರ್ಭಗುಡಿಯ ಹೊಸ್ತಿಲಲ್ಲಿ ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳನ್ನು ಇರಿಸುತ್ತಿದ್ದರಂತೆ. ಬೆಟ್ಟದ ಮೇಲೆ ನಿರ್ಮಿಸಿರುವ ದೇವಾಲಯಗಳಲ್ಲಿ ಯಾವುದಾದರು ಒಂದು ಕಡೆಯಲ್ಲಿ ಗುಪ್ತ ನಿಧಿಗಳು ಇರುತ್ತವಂತೆ
ಈ ಮೇಲಿನ ಮಾಹಿತಿಯನ್ನು ತಿಳಿದುಕೊಂಡು ನೀವು ನಿಧಿ ಹುಡುಕಲು ಯಾವುದೇ ಪ್ರಯತ್ನ ಮಾಡಬೇಡಿ ಇದು ಕೇವಲ ತಿಳುವಳಿಕೆಗಾಗಿ ಮಾತ್ರ ನಿಧಿ ಸಿಗುತ್ತದೆ ಎಂದು ಅದನ್ನು ಹುಡುಕುವುದಕ್ಕೆ ಹೋದ ಏಷ್ಟೋ ಜನರು ಅಪಾಯಕ್ಕೊಳಗಾಗಿದ್ದರೆ ಇರುವುದರಲ್ಲೇ ನೆಮ್ಮದಿಯ ಜೀವನವನ್ನು ನಡೆಸುವುದು ಒಳ್ಳೆಯದು.