ಮೊಸರು ಸೇವನೆಯಿಂದ ದೇಹಕ್ಕೆ ಸಿಗುವ ಲಾಭಗಳಿವು, ನಾವು ಪ್ರತಿದಿನ ಆಹಾರದಲ್ಲಿ ಮೊಸರನ್ನ ಸೇವಿಸುವುದರಿಂದ ಹಲವು ಲಾಭಗಳನ್ನ ಪಡೆದುಕೊಳ್ಳಬಹುದು, ಮೊಸರು ಹಲವು ಆರೋಗ್ಯಕಾರಿ ಲಾಭಗಳನ್ನ ಹೊಂದಿದೆ ಹಾಗಾದರೆ ಬನ್ನಿ ಇಂದು ನಾವು ಮೊಸರನ್ನ ಸೇವಿಸುವುದರಿಂದಾಗುವ ಲಾಭಗಳನ್ನ ತಿಳಿಯೋಣ.
ಒಂದು ಲೋಟ ಮೊಸರು ಜೊತೆ ಸ್ವಲ್ಪ ಕಪ್ಪು ಮೆಣಸಿನ ಪುಡಿ ಅನ್ನು ಬೆರೆಸಿ ತಿನ್ನಬೇಕು. ಇದು ಮಲಬದ್ಧತೆಯನ್ನು ದೂರಮಾಡುತ್ತದೆ, ತಿಂದ ಆಹಾರ ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ. ಮೊಸರಿನೊಂದಿಗೆ ಜೇನತುಪ್ಪ ಬೆರೆಸಿ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿನ ಅಲ್ಸರ್ ಮಾಯವಾಗುತ್ತದೆ. ಈ ಮಿಶ್ರಣ ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿ ಇನ್ಫಕ್ಷನ್ ಶೀಘ್ರವಾಗಿ ಕಡಿಮೆಯಾಗುತ್ತದೆ.
ಮೊಸರಿನೊಂದಿಗೆ ಆರೆಂಜ್ ಜ್ಯೂಸ್ ಬೆರೆಸಿಕೊಂಡು ಸೇವನೆ ಮಾಡಬೇಕು, ಇದರಿಂದ ಶರೀರಕ್ಕೆ ಸಾಕಷ್ಟು ವಿಟಮಿನ್ ಸಿ ಲಭ್ಯವಿದೆ. ಅಷ್ಟೇ ಅಲ್ಲದೆ ಇದು ಕೀಲು ನೋವು ಕಡಿಮೆ ಮಾಡುತ್ತದೆ. ವೃದ್ಧಾಪ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಸ್ವಲ್ಪ ಕಪ್ಪು ಉಪ್ಪನ್ನು ತೆಗೆದುಕೊಂಡು ನುಣ್ಣಗೆ ಮಾಡಿಕೊಳ್ಳಿ. ಇದು ಒಂದು ಕಪ್ ಮೊಸರಿನೊಂದಿಗೆ ಬೆರೆಸಿಕೊಂಡು ಕುಡಿಯಬೇಕು. ಇದರಿಂದ ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ ಹಾಗೂ ಮುಖ್ಯವಾಗಿ ಗ್ಯಾಸ್ ಅಸಿಡಿಟಿ ಕಡಿಮೆಯಾಗುತ್ತವೆ.
ಮೊಸರಿನೊಂದಿಗೆ ಸ್ವಲ್ಪ ಅರಿಶಿಣ ಸ್ವಲ್ಪ ಶುಂಠಿ ಬೆರೆಸಿ ತಿನ್ನಬೇಕು ಇದರಿಂದ ಫೋಲಿಕ್ ಆಸಿಡ್ ಶರೀರಕ್ಕೆ ಸೇರುತ್ತದೆ. ಇದು ಚಿಕ್ಕಮಕ್ಕಳಿಗೆ ಗರ್ಭಿಣಿಯರಿಗೆ ತುಂಬಾ ಉಪಯುಕ್ತ ಇನ್ನು ಮಾಂಸಖಂಡಗಳ ಶಕ್ತಿಗೆ ಸಹಾಯಕವಾಗಿವೆ ಮೊಸರಿನೊಂದಿಗೆ ವಿವಿಧ ರೀತಿಯ ಹಣ್ಣುಗಳನ್ನು ಬೆರೆಸಿಕೊಂಡು ತಿಂದರೆ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಹಲವಾರು ರೀತಿಯ ಇನ್ಫೆಕ್ಷನ್ಸ್, ರೋಗಗಳು ಬರದಂತೆ ನೋಡಿಕೊಳ್ಳಬಹುದು.
ಸ್ವಲ್ಪ ಒಂಕಾಳನ್ನು ತೆಗೆದುಕೊಂಡು ಒಂದು ಕಪ್ ಮೊಸರಿನೊಂದಿಗೆ ಬೆರೆಸಿ ತಿನ್ನಬೇಕು. ಇದರಿಂದ ಬಾಯಿಹುಣ್ಣು ಹಲ್ಲುನೋವು ಇತರ ದಂತ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಜೀರಿಗೆ ತೆಗೆದುಕೊಂಡು ಅದನ್ನು ಪುಡಿ ಮಾಡಿ ಇದಕ್ಕೆ ಒಂದು ಕಪ್ ಮೊಸರು ಬೆರೆಸಿಕೊಂಡು ಸೇವನೆ ಮಾಡುವುದರಿಂದ ತ್ವರಿತವಾಗಿ ತೂಕ ಕಡಿಮೆ ಮಾಡಬಹುದು. ಸ್ವಲ್ಪ ಮೊಸರಿನೊಂದಿಗೆ ಸಕ್ಕರೆ ಬೆರೆಸಿಕೊಂಡು ತಿನ್ನುವುದರಿಂದ ದೇಹಕ್ಕೆ ಶಕ್ತಿಯು ಸಿಗುತ್ತದೆ ಮೂತ್ರಕೋಶದ ಸಮಸ್ಯೆಗಳು ದೂರವಾಗುತ್ತವೆ.