ಇತ್ತೀಚಿನ ದಿನಗಳಲ್ಲಿ ತಲೆಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕೆಲವರಲ್ಲಿ ಕಾಡುತ್ತಿರುತ್ತದೆ ಆದ್ರೆ ಈ ತಲೆಕೂದಲು ಉದುರಲು ಹಲವು ಕಾರಣಗಳಿವೆ, ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಕೂಡ ಪ್ರತಿದಿನ ತಲೆಕೂದಲು ಉದುರುತ್ತದೆ. ಆದ್ರೆ ಅತಿಯಾಗಿ ತಲೆಕೂದಲು ಉದುರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಪ್ರತಿದಿನ ಸಾಮಾನ್ಯವಾಗಿ 70 ರಿಂದ ನೂರು ಕೂದಲುಗಳು ಎಲ್ಲರಲ್ಲೂ ಉದುರುತ್ತವೆ ಪುರುಷರಲ್ಲಿ ಕಡಿಮೆ ಪ್ರಮಾಣದಲ್ಲಿ ತಲೆ ಕೂದಲು ಉದುರಿದರೆ ಮಹಿಳೆಯರಲ್ಲಿ ಹೆಚ್ಚಿನ ಮಟ್ಟದಲ್ಲಿ ತಲೆಕೂದಲು ಉದುರುತ್ತದೆ ಇದಕ್ಕೆ ಕಾರಣವೇನು ಅನ್ನೋದನ್ನ ಹೇಳುವುದಾದರೆ

ಸಾಮಾನ್ಯವಾಗಿ ಮಹಿಳೆಯರು ಹೆಚ್ಚು ಒತ್ತಡದ ಸಮಸ್ಯೆಯಿಂದ ಬಳಲುತ್ತಾರೆ ಹಾಗಾಗಿ ಈ ಸಮಸ್ಯೆಯಿಂದ ದೇಹದ ಮೇಲೆ ಪ್ರಭಾವ ಬೀರಿ ಸರಿಯಾದ ರೀತಿಯಲ್ಲಿ ಊಟ ಮಾಡದೇ, ಪೌಷ್ಟಿಕಾಂಶ ಕೊರತೆಯಿಂದ ತಲೆಕೂದಲು ಹೆಚ್ಚು ಉದುರಲು ಕಾರಣವಾಗುತ್ತದೆ. ಅಷ್ಟೇ ಅಲ್ದೆ ಹೆಣ್ಣುಮಕ್ಕಳಲ್ಲಿ ದೇಹದ ಹಾರ್ಮೋನ್ಗಳು ಏರುಪೇರಾಗುವ ಸಂದರ್ಭದಲ್ಲಿ ಅಂದರೆ ತಿಂಗಳ ಮುಟ್ಟು ಹಾಗೂ ಗರ್ಭಿಣಿಯ ಸಮಯದಲ್ಲಿ ದೇಹದಲ್ಲಿ ಹಾರ್ಮೋನ್ ಗಳ ಏರುಪೇರಿನಿಂದ ತಲೆಕೂದಲು ಉದುರಲು ಕಾರಣವಾಗುತ್ತದೆ.

ಇನ್ನು ದೇಹದಲ್ಲಿ ವಿಟಮಿನ್ ಕೊರತೆಯಿದ್ದರು ಸಹ ತಲೆಕೂದಲು ಉದುರುತ್ತವೆ, ದೇಹದಲ್ಲಿ ನಿಶ್ಯಕ್ತಿಯ ಕಾರಣದಿಂದ ಕೂಡ ತಲೆಕೂದಲು ಉದುರುತ್ತವೆ. ಹಾಗಾಗಿ ಮಹಿಳೆಯರು ಪೌಷ್ಟಿಕಾಂಶಭರಿತವಾದ ಹಾಗೂ ವಿಟಮಿನ್ ಪ್ರೊಟೀನ್ ಅಂಶವುಳ್ಳ ಆಹಾರವನ್ನು ಸೇವನೆ ಮಾಡುವುದು ಅತಿ ಅವಶ್ಯಕವಾಗಿದೆ. ಆದಷ್ಟು ಮಹಿಳೆಯರು ಒತ್ತಡವನ್ನು ನಿಯಂತ್ರಿಸಿಕೊಳ್ಳುವುದು ಉತ್ತಮ ಹಾಗೆಯೆ ನೈಸರ್ಗಿಕವಾಗಿ ಸಿಗುವಂತ ಹಣ್ಣು ತರಕಾರಿಗಳ ಸೇವನೆ ಮಾಡುವುದರಿಂದ ದೇಹದ ಅರೋಗ್ಯ ಉತ್ತಮ ರೀತಿಯಲ್ಲಿ ವೃದ್ಧಿಯಾಗುತ್ತದೆ.

By

Leave a Reply

Your email address will not be published. Required fields are marked *