ಮೆಂತೆಯನ್ನು ಸೊಪ್ಪಾಗಿ ಎಲೆಗಳುಮತ್ತು ಸಂಬಾರ ಪದಾರ್ಥವಾಗಿಯೂ ಬೀಜ ಬಳಸಲಾಗುತ್ತದೆ ಅದನ್ನು ವಿಶ್ವಾದ್ಯಂತ ಒಂದು ಅರೆ-ಶುಷ್ಕ ಬೆಳೆಯಾಗಿ ಬೆಳೆಸಲಾಗುತ್ತದೆ ಅದನ್ನು ಸಾಮಾನ್ಯವಾಗಿ ಪಲ್ಯದಲ್ಲಿ ಬಳಸಲಾಗುತ್ತದೆ ತುಂಬಾ ಕಹಿಯಾಗಿ ಇರುವಂತಹ ಮೆಂತ್ಯೆ ಕಾಳನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ
ನಾಲಗೆಗೆ ರುಚಿಸದೆ ಇರುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ ಯಾವಾಗಲೂ ನಾವು ರುಚಿಕರವಾದ ಆಹಾರವನ್ನೇ ಸೇವಿಸುತ್ತೇವೆ ಆದರೆ ಇದು ನಮ್ಮ ಹೊಟ್ಟೆಗೂ ಒಳ್ಳೆಯದಲ್ಲ ಹೊಟ್ಟೆಗೆ ಒಳ್ಳೆಯದಲ್ಲದಿರುವುದು ನಮ್ಮ ಆರೋಗ್ಯಕ್ಕೂ ಕೆಟ್ಟದು ನಾವು ಹಲವಾರು ರೀತಿಯ ಸಾಂಬಾರ ಪದಾರ್ಥಗಳನ್ನು ಬಳಸಿಕೊಳ್ಳುತ್ತೇವೆ
ಇದರಲ್ಲಿ ಮೆಂತ್ಯೆ ಕಾಳು ಕೂಡ ಒಂದಾಗಿದೆ.ಪ್ರತಿಯೊಂದು ಸಾಂಬಾರ ಪದಾರ್ಥದಲ್ಲಿ ಏನಾದರೊಂದು ಒಳ್ಳೆಯ ಆರೋಗ್ಯ ಗುಣಗಳು ಇರುತ್ತದೆ ಹೀಗಾಗಿ ನಾವು ಇದನ್ನು ಪ್ರತಿನಿತ್ಯವೂ ಬಳಸಿಕೊಂಡರೆ ಆಗ ಹೆಚ್ಚಿನ ಲಾಭ ಸಿಗುವುದು. ನಾವು ಈ ಲೇಖನದ ಮೂಲಕ ಮೆಂತೆ ಕಾಳಿನ ಬಗ್ಗೆ ತಿಳಿದುಕೊಳ್ಳೋಣ.
ಶರೀರದ ಅನೇಕ ರೋಗವನ್ನು ನಿವಾರಣೆ ಮಾಡುವಂತ ಶಕ್ತಿಯಿದೆ ಮೊದಲು ಒಂದು ಚಮಚ ಮೆಂತೆಯನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು ಮಾರನೇ ದಿನ ಅದನ್ನು ಚಹಾದ ತರ ಮೆಂತೆ ನೀರನ್ನು ಕುದಿಸಿ ಕುಡಿಯಬೇಕು ಹೀಗೆ ನಿರಂತರವಾಗಿ ಒಂದು ತಿಂಗಳು ಈ ರೀತಿ ಮಾಡಿ ಕುಡಿಯುದರಿಂದ ಡಯಾಬಿಟಿಸ್ ಕಂಟ್ರೋಲ್ ಗೆ ಬರುತ್ತದೆ ಹಾಗೂ ಬ್ಲಡ್ ಶುಗರ ಲೆವೆಲ್ ಅನ್ನು ಕಂಟ್ರೋಲ್ ಮಾಡುತ್ತದೆ
ಪ್ರಜ್ಞೆನ್ಸ್ ಇದ್ದವರು ನಾರ್ಮಲ್ ಡೆಲಿವರಿ ಆಗಲು ಬೆಳಿಗ್ಗೆ ಹಸಿದ ಹೊಟ್ಟೆಯಲ್ಲೇ ಡಾಕ್ಟರ್ ಸಲಹೆಯ ಮೂಲಕ ದಿನ ತೆಗೆದುಕೊಳ್ಳುದರಿಂದ ನಾರ್ಮಲ್ ಡೆಲಿವರಿ ಆಗುತ್ತದೆ ಕೆಲಸ ಮಾಡಿ ಸುಸ್ತ್ ಆಗಿದ್ದರೆ ಮೆಂತೆ ನೀರನ್ನು ಕುಡಿಯುವ ಮೂಲಕ ಕಡಿಮೆಯಾಗುತ್ತದೆ ಇದರಿಂದ ಮೈಂಡ್ ಮತ್ತು ಬೋಡಿ ರಿಲಾಕ್ಸ್ ಆಗುತ್ತದೆ ಮೈ ಕೈ ನೋವಿನ ಸಮಸ್ಯೆ ಮಾಯವಾಗುತ್ತದೆ
ಮೆಂತ್ಯೆ ಕಾಳಿನಲ್ಲಿ ಗ್ಯಾಲಕ್ಟೋಮನ್ನನ್ ಎನ್ನುವ ನಾರಿನಾಂಶವಿದೆ ಇದು ರಕ್ತದಲ್ಲಿನ ಸಕ್ಕರೆ ಹೀರುವಿಕೆಯನ್ನು ತಗ್ಗಿಸುವುದು ಇದರಿಂದ ಮಧುಮೇಹ ತಡೆಯಲಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವಂತೆ ಮಾಡುತ್ತದೆ ಮೆಂತ್ಯೆ ಕಾಳಿನ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆಗ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ ಇದನ್ನು ಸೇವಿಸಿದರೆ ಶಾಖ ಉತ್ಪತ್ತಿಯಾಗಿ ತೂಕ ಕಳೆದುಕೊಳ್ಳಲು ಸಹಕಾರಿ ಆಗುತ್ತದೆ
ಮೆಂತ್ಯೆ ಕಾಳಿನ ನೀರು ಸೇವಿಸಿದರೆ ಅದರಿಂದ ಬಯಕೆ ಕಡಿಮೆ ಮಾಡಬಹುದು ಮೆಂತ್ಯೆಕಾಳಿನ ನೀರನ್ನು ಬಿಸಿ ಮಾಡಿ ಕುಡಿದರೆ ಆಗ ಅದು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುತ್ತದೆ ಇದು ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು ಮತ್ತು ಕಿಡ್ನಿಯ ಕಲ್ಲಿನ ಸಮಸ್ಯೆ ನಿವಾರಣೆ ಮಾಡುವುದು.
ಮೆಂತ್ಯೆಕಾಳಿನಲ್ಲಿ ಇರುವ ಉರಿಯೂತ ಶಮನಕಾರಿ ಗುಣದಿಂದಾಗಿ ಮೆಂತ್ಯೆ ಕಾಳಿನ ನೀರು ಕುಡಿದರೆ ಅದರಿಂದ ಸಂಧಿವಾತ ದೀರ್ಘಕಾಲಿಕ ಕೆಮ್ಮು ಬಾಯಿಯ ಹುಣ್ಣು ಬೊಕ್ಕೆ ಇತ್ಯಾದಿ ನಿವಾರಣೆ ಮಾಡುತ್ತದೆ ಮೆಂತ್ಯೆಕಾಳನ್ನು ದೇಹದಲ್ಲಿ ನೀರು ನಿಲ್ಲುವುದನ್ನು ಮತ್ತು ಹೊಟ್ಟೆ ಉಬ್ಬರ ತಡೆಯಲು ಬಳಸಬಹುದಾಗಿದೆ ಮೆಂತ್ಯೆಯಲ್ಲಿ ಉನ್ನತ ಮಟ್ಟದ ಮೆಗ್ನಿಶಿಯಂ ಅಂಶವಿದೆ ಮತ್ತು ಇದರ ಸೇವನೆ ಮಾಡಿದರೆ ಅದು ದೇಹಕ್ಕೆ ಆರಾಮ ನೀಡುತ್ತದೆ ಹೀಗೆ ಮೆಂತೆ ಕಾಳು ಪ್ರಯೋಜನಕಾರಿಯಾಗಿದೆ.