ಹೀರೋ ಸ್ಪ್ಲೆಂಡರ್ ಬೈಕ್ ಹಾಗೂ ಬಜಾಜ್ ಸಿಟಿ 110 ಎಕ್ಸ್ ಎರಡು ಬೈಕ್ ಗಳು ಕಡಿಮೆ ಬಜೆಟ್ ನಲ್ಲಿ ಸಿಗುತ್ತದೆ ಮತ್ತು ಹೆಚ್ಚು ಮೈಲೇಜ್ ಕೊಡುತ್ತದೆ. ಪೆಟ್ರೋಲ್ ಬೆಲೆ ಗಗನಕ್ಕೇರಿರುವುದರಿಂದ 25ರಿಂದ 30 ಕಿಲೋಮೀಟರ್ ಮೈಲೇಜ್ ಕೊಡುವ ಬೈಕ್ ಗಳನ್ನು ಮೆಂಟೇನ್ ಮಾಡಲು ಆಗುವುದಿಲ್ಲ ಆದ್ದರಿಂದ ಈ ರೀತಿಯ ಬೈಕ್ ಗಳನ್ನು ಖರೀದಿಸುವುದು ಒಳ್ಳೆಯದು.
ಹೀರೊ ಸ್ಪ್ಲೆಂಡರ್ ಬೈಕ್ ಮತ್ತು ಬಜಾಜ್ ಸಿಟಿ 110 ಎಕ್ಸ್ ಬೈಕ್ ಗಳು ಉತ್ತಮವಾಗಿವೆ, ಎರಡು ಬೈಕ್ ಗಳು ಹೆಚ್ಚಿನ ಮೈಲೇಜ್ ಕೊಡುತ್ತದೆ. ಬಜಾಜ್ ಕಂಪನಿಗೆ ಹೋಲಿಸಿದರೆ ಹೀರೋ ಕಂಪನಿಯ ಬೈಕ್ ಗಳ ಎಂಜಿನ್ ಉತ್ತಮವಾಗಿರುತ್ತದೆ. ಬಜಾಜ್ ಸಿಟಿ 110 ಎಕ್ಸ್ ಬೈಕ್ ನಲ್ಲಿ ಒಂದು ಲಕ್ಷ ಕಿಲೋಮೀಟರ್ ವರೆಗೆ ಹೋಗುವವರು ಇದ್ದಾರೆ.
ಯಾವುದೆ ಬೈಕ್ ಅನ್ನು ಆದರೂ ನಾವು ಸರಿಯಾಗಿ ಮೆಂಟೆನ್ ಮಾಡಬೇಕಾಗುತ್ತದೆ. ಈ ಎರಡು ಬೈಕ್ ಗಳನ್ನು ಬಹಳಷ್ಟು ಜನರು ಖರೀದಿಸಿದ್ದಾರೆ. ಹೀರೋ ಕಂಪನಿ ಬೈಕ್ ಗಳಿಗೆ ಹೋಲಿಸಿದರೆ ಬಜಾಜ್ ಕಂಪನಿ ಬೈಕ್ ಗಳು ಮೈಲೇಜ್ ಹೆಚ್ಚು ಕೊಡುತ್ತದೆ ಆದರೆ ಸ್ಪ್ಲೆಂಡರ್ ಬೈಕ್ ನಲ್ಲಿ ಆರಾಮಾಗಿ ಹೋಗಬಹುದು ಕಂಫರ್ಟೆಬಲ್ ಇರುತ್ತದೆ.
ಸ್ಪ್ಲೆಂಡರ್ ಬೈಕ್ 97.2 ಸಿಸಿ ಎಂಜಿನ್ ಹೊಂದಿರುತ್ತದೆ. ಬಜಾಜ್ ಸಿಟಿ 110 ಎಕ್ಸ್ ಬೈಕ್ 110ಸಿಸಿ ಎಂಜಿನ್ ಹೊಂದಿರುತ್ತದೆ. ಸ್ಪ್ಲೆಂಡರ್ ಬೈಕ್ ಎಫ್ಐ ಎಂಜಿನ್ ಹೊಂದಿರುತ್ತದೆ. ಬಜಾಜ್ ಕಂಪನಿಯ ಬೈಕ್ ನ ಎಂಜಿನ್ ಕಾರ್ಬೊನೇಟರ್ ವರ್ಷನ್ ಆಗಿರುತ್ತದೆ. ಸ್ಪ್ಲೆಂಡರ್ ಬೈಕ್ ನಲ್ಲಿ ಪೂರ್ತಿಯಾಗಿ ಪೆಟ್ರೋಲ್ ಖಾಲಿಯಾದ ನಂತರ ಅರ್ಧ ತಾಸು ಬೈಕ್ ಸ್ಟಾರ್ಟ್ ಆಗುವುದಿಲ್ಲ.
ಬ್ರೇಕ್ ವಿಚಾರಕ್ಕೆ ಬಂದರೆ ಎರಡು ಬೈಕ್ ಗಳಲ್ಲಿ ನಾರ್ಮಲ್ ಬ್ರೇಕ್ ಸಿಸ್ಟಮ್ ಇರುತ್ತದೆ, ಸಿಬಿಎಸ್ ಮತ್ತು ಇಬಿಎಸ್ ಟೆಕ್ನಾಲಜಿ ಇರುತ್ತದೆ. ಎರಡು ಬೈಕ್ ಗಳಲ್ಲಿ ಉಳಿದಂತೆ ಲಕ್ಷಣಗಳು ಒಂದೇ ರೀತಿ ಇರುತ್ತವೆ. ಎರಡು ಬೈಕ್ ಗಳಲ್ಲಿ ಸಿಂಗಲ್ ಸೀಟ್ ಸಿಸ್ಟಮ್ ಇರುತ್ತದೆ ಆದರೆ ಸೀಟ್ ಹೈಟ್ ತುಂಬಾ ವ್ಯತ್ಯಾಸ ಇರುತ್ತದೆ. ಎರಡು ಬೈಕ್ ಗಳಲ್ಲಿ ಗ್ರೌಂಡ್ ಫ್ಲೋರೆನ್ಸ್ ಚೆನ್ನಾಗಿದೆ ಆದರೆ ಬಜಾಜ್ ಬೈಕ್ ನಲ್ಲಿ ಉತ್ತಮವಾಗಿದೆ. ಅಡ್ವೆಂಚರ್ ಬೈಕ್ ಗಳಲ್ಲಿ ಇರುವ ಹಾಗೆ ಸಿಸ್ಟಮ್ ಇದೆ.
ಸ್ಪ್ಲೆಂಡರ್ ಬೈಕ್ ನಲ್ಲಿ ಎರಡು ಕಡೆಯ ಟೈಯರ್ ಚೆನ್ನಾಗಿದೆ. ಲೈಟ್ ವಿಷಯಕ್ಕೆ ಬಂದರೆ ಎರಡು ಬೈಕ್ ಗಳಲ್ಲಿ ಬಲ್ಬ್ ಸಿಸ್ಟಮ್ ಇದೆ. ಸ್ಪ್ಲೆಂಡರ್ ಬೈಕ್ ನ ಫುಲ್ ಟ್ಯಾಂಕ್ ಕ್ಯೆಪಾಸಿಟಿ 9.8 ಲೀಟರ್ ಇದೆ ಮತ್ತು ಪ್ರತಿ ಲೀಟರ್ ಗೆ 60 ರಿಂದ 65 ಕಿಲೋಮೀಟರ್ ಮೈಲೇಜ್ ನೋಡಬಹುದು, ಈ ಬೈಕ್ 112 ಕೆಜಿ ತೂಕವನ್ನು ಹೊಂದಿದೆ. ಬಜಾಜ್ ಸಿಟಿ110 ಬೈಕ್ ನ ಫುಲ್ ಟ್ಯಾಂಕ್ ಕೆಪ್ಯಾಸಿಟಿ 10.5 ಲೀಟರ್, ಪ್ರತಿ ಲೀಟರ್ ಗೆ 65- 70 ಕಿಲೋಮೀಟರ್ ಮೈಲೇಜ್ ಕೊಡುತ್ತದೆ, 118 ಕೆಜಿ ತೂಕವನ್ನು ಹೊಂದಿದೆ.
ಹೀರೋ ಸ್ಪ್ಲೆಂಡರ್ ಬೈಕ್ ಹೆಚ್ಚಿನ ವೆರೈಟಿ ಮತ್ತು ಕಲರ್ ನಲ್ಲಿ ಸಿಗುತ್ತದೆ. ಸ್ಟ್ಯಾಂಡರ್ಡ್ ಕಲರ್ ನಲ್ಲಿ ಈ ಬೈಕ್ ಗಳು ಸಿಗುತ್ತವೆ. ಬಜಾಜ್ ಸಿಟಿ 110 ಎಕ್ಸ್ ಬೈಕ್ ಒಂದೆ ವೆರಿಯಂಟ್ ಮತ್ತು 4 ಕಲರ್ ನಲ್ಲಿ ಸಿಗುತ್ತದೆ. ಹೀರೊ ಸ್ಪ್ಲೆಂಡರ್ ಬೈಕ್ ನ ಎಕ್ಸ್ ಶೋರೂಮ್ ನ ಬೆಲೆ 63,000- 69,000 ರೂಪಾಯಿ, ಆನ್ ರೋಡ್ ಬೆಲೆ 85,000- 90,000 ರೂಪಾಯಿ. ಬಜಾಜ್ ಸಿಟಿ 110 ಎಕ್ಸ್ ಬೈಕ್ ನ ಶೋರೂಮ್ ಬೆಲೆ 80 -90 ಸಾವಿರ ರೂಪಾಯಿ ಆಗಿರುತ್ತದೆ. ಎರಡು ಬೈಕ್ ನ ಲಕ್ಷಣಗಳು ಒಂದೇ ಆಗಿದ್ದು ಎರಡು ಕೂಡ ಚೆನ್ನಾಗಿದೆ ಒಂದು ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳುವುದಾದರೆ ಸ್ಪ್ಲೆಂಡರ್ ಪ್ಲಸ್ ಬೈಕ್ ಗಿಂತ ಬಜಾಜ್ ಸಿಟಿ 110 ಎಕ್ಸ್ ಬೈಕ್ ಚೆನ್ನಾಗಿದೆ.