ಸಾವು ಎಂಬುದು ಆತ್ಮ ವು ಪರಮಾತ್ಮನಲ್ಲಿ ಲೀನವಾಗುವುದು. ಉಸಿರು ನಿಂತು ಶರೀರ ನಶ್ವರ ವಾಗುವುದೇ ಸಾವು, ಎಲ್ಲಿ ಸಾವಾಗಿರುತ್ತದೆ ಅಲ್ಲಿ ಸೂತಕ ಆವರಿಸಿರುತ್ತದೆ. ಸೂತಕದ ಮನೆಯಲ್ಲಿ ದೇವರಿಗೆ ಶಕ್ತಿ ಇರುವುದಿಲ್ಲ, ಏಕೆಂದರೆ ಅಲ್ಲಿ ಅಂದರೆ ಸೂತಕದ ಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿರುವುದಿಲ್ಲ. ಮರಣ ಆದ ನಂತರ ಕೆಲವೊಂದು ರೀತಿ ನೀತಿಗಳನ್ನು ಪಾಲಿಸುವ ಕಟ್ಟುಪಾಡುಗಳಿಗೆ, ಅವುಗಳನ್ನು ಇಲ್ಲಿ ತಿಳಿಸಲಾಗುತ್ತದೆ.

ಶವ ಸಂಸ್ಕಾರಕ್ಕೆ ಹೋಗಿ ಬಂದಾಗ ರೀತಿರೀವಾಜುಗಳನ್ನು ಪಾಲಿಸುವುದು ಅನಿವಾರ್ಯ ಹಾಗೂ ಕಟ್ಟುಪಾಡುಗಳಿವೆ. ಅದರಲ್ಲಿ ಯಾರು ಶವ ಸಂಸ್ಕಾರಕ್ಕೆ ಹೋಗುತ್ತಾರೋ ಅವರು ಸ್ನಾನ ಮಾಡಿ ಮನೆ ಪ್ರವೇಶಿಸುವುದು ಒಂದು ನಿಯಮ, ಈ ರೀತಿ ನಿಯಮದಲ್ಲಿ ಸ್ನಾನ ಮಾಡಿ ಮನೆ ಪ್ರವೇಶಿಸುವುದು ಹಿಂದು ಧರ್ಮದಲ್ಲಿ ಅಲಿಖಿತವಾದ ನಿಯಮ.

ದೇವರ ಸೃಷ್ಟಿಯಲ್ಲಿ ಹುಟ್ಟು ಸಾವು ಎಂಬುದು ಸೃಷ್ಟಿಯ ನಿಯಮ ಇದರಲ್ಲಿ ಭೂಮಿಯಮೇಲೆ ಹುಟ್ಟುವ ಪ್ರತಿ ಜೀವಿಗಳಿಗು ಸಾವು ನಿಶ್ಚಿತ, ಎಲ್ಲರೂ ತಮ್ಮವರನ್ನು ಬಿಟ್ಟು ಹೋಗಲೇಬೇಕು. ಈ ರೀತಿಯ ಜೀವನದಲ್ಲಿ ಹಲವು ಆಚಾರ ವಿಚಾರಗಳು, ಸಂಪ್ರದಾಯಗಳು ಇವೆ ಇದರಲ್ಲಿ ಒಂದು ಸಾವಿನ ಮನೆಗೆ ಹೋಗಿ ಬಂದವರು ಸ್ನಾನ ಮಾಡುವುದು ಒಂದು ಆಚಾರ. ಈ ರೀತಿ ಮಾಡದೆ ಹೋದಲ್ಲಿ ಸತ್ತ ಆತ್ಮ ನಮ್ಮನ್ನು ಹಿಂಬಾಲಿಸುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ ಇದು ಅವರ ನಂಬಿಕೆ.

ಇದರ ಮುಖ್ಯ ಉದ್ದೇಶ/ಕಾರಣ ಎಂದರೆ ನಮ್ಮವರು ಎಂಬುವವರು ನಮ್ಮಿಂದ ದೂರ ಆದಾಗ ಅದೇ ದುಃಖದಲ್ಲಿ ತಮ್ಮವರ ಚಿಂತೆಯಲ್ಲಿಯೇ ಇರುತ್ತಾರೆ ಎಂಬ ಕಾರಣಕ್ಕೆ ಅದರಿಂದ ಹೊರಗಡೆ ಬರಲಿ ಎಂಬ ಕಾರಣಕ್ಕೆ ಅಡಿಯಿಂದ ಮುಡಿಯ ವರೆಗು ಬಿಸಿನೀರಿನಲ್ಲಿ ಮಿಂದಾಗ ಮನಸ್ಸು ಹಾಗೂ ದೇಹ ಸಮ ಸ್ಥಿತಿಗೆ ಬರುವಲ್ಲಿ ಸಫಲವಾಗುತ್ತದೆ, ಆದ್ದರಿಂದ ಈ ರೀತಿಯ ಸಂಪ್ರದಾಯ ಪಾಲಿಸುವುದು ಅನಿವಾರ್ಯವಾಗಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!