ಮಕ್ಕಳಿಗೆ ಜ್ಞಾಪಕ ಶಕ್ತಿ ವೃದ್ಧಿಯಾಗಲು ಏನ್ ಮಾಡಬೇಕು, ತಿಳಿಯಿರಿ ಮನೆಮದ್ದು

0 5

ಮೆರೆವು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವ ಸಮಸ್ಯೆಯಾದರೂ ವಿಪರೀತ ಮರೆವು ಅಪಾಯಕಾರಿಯಾದ ಲಕ್ಷಣವಾಗಿದೆ ಮೆದುಳನ್ನು ಆರೋಗ್ಯಕರವಾಗಿ ಹಾಗೂ ಚುರುಕಾಗಿ ಇಡುವ ಮೂಲಕ ಮರೆವಿನ ಸಮಸ್ಯೆ ಬರದಂತೆ ತಡೆಯಬಹುದು ಮರೆವು ಎನ್ನುವುದು ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ

ವಿದ್ಯಾರ್ಥಿಗಳು ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿ ಪರೀಕ್ಷೆಗೆ ಬಂದಿರುತ್ತಾರೆ ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಉತ್ತರ ಗೊತ್ತಿರುತ್ತದೆ ಆದರೆ ಬರೆಯಲು ಅದರ ಪಾಯಿಂಟ್ಸ್‌ಗಳು ನೆನಪಾಗುವುದೇ ಇಲ್ಲ ಇನ್ನು ಇಟ್ಟ ವಸ್ತು ತಕ್ಷಣ ನೆನೆಪಿಗೆ ಬಾರದೇ ಹೋಗುವುದು ಹೀಗೆ ಸಣ್ಣ-ಪುಟ್ಟ ಮರೆವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಇರುತ್ತದೆ ಕೆಲವೊಮ್ಮೆ ಅಸಡ್ಡೆಯಿಂದಾಗಿ ಮರೆತು ಹೋಗಿರುತ್ತದೆ. ಚಿಕ್ಕ-ಪುಟ್ಟ ಮರೆವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುತ್ತದೆ.

ಅನೇಕ ಮಕ್ಕಳು ಪ್ರತಿನಿತ್ಯ ಮನೆಯಲ್ಲಿ ಕುಳಿತು ಓದಿದರೂ ಪರೀಕ್ಷಾ ಸಂದರ್ಭದಲ್ಲಿ ಮಾತ್ರ ಓದಿದ್ದು ನೆನಪಾಗುತ್ತಿಲ್ಲ ಎಂದು ಹೇಳುವುದನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ ಅದಕ್ಕೆ ಕಾರಣ ಪ್ರತಿ ಮಗುವೂ ಶಾಲೆಯಲ್ಲಿ ಫಸ್ಟ ರ್ಯಾಂಕ್ ಪಡೆಯಲು ಸಾಧ್ಯವಿಲ್ಲ. ಒಂದೊಂದು ಮಗು ಕೂಡ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಾಗೆಯೆ ಈ ಲೇಖನದ ಮೂಲಕ ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಏನು ಮಾಡಬಹುದು ಎನ್ನುವುದನ್ನು ತಿಳಿಯೋಣ.

ಕೆಲವರಿಗೆ ಮಾತ್ರಒಂದು ಬಾರಿ ಓದಿದ್ದನ್ನು ಮರೆಯದೆ ನೆನಪಿಟ್ಟು ಕೊಂಡಿರುತ್ತಾರೆ ಅಂಥವರಲ್ಲಿ ಶಂಕರಾಚಾರ್ಯ ಮಧ್ವಾಚಾರ್ಯರು ರಾಘವೇಂದ್ರಾಚಾರ್ಯರು ಇಂಥ ಮಹಾನ್ ವ್ಯಕ್ತಿಗಳಿಗೆ ಮಾತ್ರ ಅಗಾಧ ಜ್ಞಾಪಕಶಕ್ತಿ ಇರುತ್ತದೆ ಎಲ್ಲರಲ್ಲಿಯೂ ಸಾಧ್ಯವಿಲ್ಲ ಹಾಗಾದರೆ ಜ್ಞಾನಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕಮಲ ಹೂ ಅಥವಾ ನಾಲ್ಕು ತಾವರೆ ಎಲೆಯ ದಂಟನ್ನು ಸೇರಿಸಿ ತುರಿದು ಒಂದು ಶುದ್ದ ವಾದ ನೀರಿನಲ್ಲಿ ಬೇಯಿಸಬೇಕು

ಹಾಗೆ ತಾವರೆಯ ದಂಟು ಮೆತ್ತಗೆ ಆಗುವರೆಗೆ ಬೇಯಿಸಬೇಕು ಹಾಗೆ ಅದಕ್ಕೆಅರ್ಧ ಕಪ್ ಜೇನುತುಪ್ಪವನ್ನು ಹಾಕಬೇಕು ನಂತರ ಮೂರುದಿನದ ನಂತರ ಒಂದು ಪಿಂಗಾಣಿ ಪಾತ್ರೆಗೆ ಹಾಕಿ ಇಡಬೇಕು ಇದನ್ನು ದಿನಾಲೂ ಮಕ್ಕಳಿಗೆ ಒಂದು ಚಮಚ ನೀಡುವುದರಿಂದ ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ ಸಾಮಾನ್ಯವಾಗಿ ಕಾಡುವ ಮರೆವಿನ ಸಮಸ್ಯೆ ಹೋಗಲಾಡಿಸಿ ಬುದ್ಧಿಶಕ್ತಿ ಚುರುಕುಗೊಳಿಸಲು ಈ ರೀತಿಯ ಮನೆಮದ್ದುಗಳು ತುಂಬಾ ಸಹಕಾರಿಯಾಗಿದೆ.

Leave A Reply

Your email address will not be published.