ಹಿಂದಿನ ಕಾಲದಿಂದಲೂ ಕೂಡ ಗ್ರಾಮೀಣ ಭಾಗದಲ್ಲಿ ಈ ರೀತಿಯ ಕೆಲಸವನ್ನು ಮಾಡುವಂತ ಮಹಿಳೆಯರು ಕಾಣಬಹುದು ಇಂದಿನ ದಿನಗಳಲ್ಲಿ ಆಸ್ಪತ್ರೆಗಳು ಹೆಚ್ಚಾಗಿರುವ ಕಾರಣದಿಂದ ಈ ರೀತಿಯ ಹರಿಗೆ ಮಾಡಿಸುವ ಸೂಲಗಿತ್ತಿಯರು ಕಡಿಮೆಯಾಗಿದ್ದಾರೆ. ಅದೇನೇ ಇರಲಿ ಇಂದಿನ ದಿನಗಲ್ಲಿ ಸಹ ವೈದ್ಯರಿಗೆ ಸವಾಲು ಅನಿಸಿದ ಹೆರಿಗೆಗೆಳನ್ನು ಈ ಮಹಿಳೆ ನಾರ್ಮಲ್ ಹೆರಿಗೆ ಮಾಡಿಸಿ ವೈದ್ಯಲೋಕಕೆ ಅಚ್ಚರಿ ಮೂಡಿಸಿದ್ದಾರೆ, ಅಷ್ಟಕ್ಕೂ ಈ ಮಹಿಳೆ ಯಾರು ಅನ್ನೋ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರವನ್ನು ಈ ಮೂಲಕ ತಿಳಿದುಕೊಳ್ಳೋಣ ಬನ್ನಿ.
ಈ ಮಹಿಳೆಯ ಹೆಸರು ಮಾದಮ್ಮ ಎಂಬುದಾಗಿ ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದ ತಪ್ಪಲಲ್ಲಿ ಒಂದು ಪುಟ್ಟ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ, ಅದೇನೇ ಇರಲಿ ಈ ಮಹಿಳೆಯ ಬಗ್ಗೆ ಚಾಮರಾಜನಗರ ಜಿಲ್ಲೆಯಲ್ಲಿ ಎಲ್ಲಿ ಕೇಳಿದರು ಕೂಡ ಈ ಮಹಿಳೆಯ ಬಗ್ಗೆ ಹೇಳುತ್ತಾರೆ ಅಷ್ಟೊಂದು ಫೇಮಸ್ ಆಗಿದ್ದಾರೆ. ಬಡವರ ಪಾಲಿನ ದೇವಾ ಸ್ವರೂಪಿ ಎಂದರೆ ತಪ್ಪಾಗಲಾರದು ಯಾಕೆಂದರೆ ಇದ್ದಂತ ಶ್ರೀಮಂತರು ಲಕ್ಷ ಗಟ್ಟಲೆ ಹಣ ಖರ್ಚು ಮಾಡಿ ದೊಡ್ಡ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುತ್ತಾರೆ, ಆದ್ರೆ ಇಲ್ಲದವರ ಗತಿ ಏನು ಅಂತವರ ಪಾಲಿಗೆ ಇವರು ದೇವಾ ಸ್ವರೂಪಿಪಿ ಅಲ್ಲದೆ ಮತ್ತೇನು? ಹೌದು ನಿಜಕ್ಕೂ ಇವರ ಈ ನಿಸ್ವಾರ್ಥ ಸೇವೆಗೆ ಮೆಚ್ಚಲೇಬೇಕು.
ಈ ಕಾಯಕವನ್ನು ಇವರು ತಮ್ಮ ಅಜ್ಜಿಯ ಕಾಲದಿಂದಲೂ ಕೂಡ ಮುಂದುವರೆಸಿಕೊಂಡು ಬಂದಿದ್ದಾರೆ ಅಂದಿನ ದಿನಗಳಲ್ಲಿ ಅವರ ಅಜ್ಜಿ ಈ ಕಾಯಕವನ್ನು ಮಾಡುತ್ತಿದ್ದರು ಅವರಿಂದ ಇವರಿಗೆ ಬಲುಳಿಯಾಗಿ ಬಂದಿದೆ, ಇವರು ಯಾರ ಹತ್ತಿರಾನು ಕೂಡ ಹಣವನ್ನು ಕೇಳೋದಿಲ್ಲ ತಮ್ಮ ಪ್ರೀತಿಯಿಂದ ಕೊಟ್ಟರೆ ಸ್ವೀಕರಿಸುತ್ತಾರೆ. ಯಾವುದೇ ಔಷದಿ ಮಾತ್ರೆ ಚುಚ್ಚು ಮದ್ದು ಕೊಡದೆ ನಾರ್ಮಲ್ ಆಗಿ ಹೆರಿಗೆ ಮಾಡಿಸುವ ಕಾಯಕ ಈಕೆಯದ್ದು.
ಈ ಮಾದಮ್ಮನ ಬಗ್ಗೆ ಸುತ್ತ ಮುತ್ತ ಎರಡು ಮೂರೂ ಜಿಲ್ಲೆಯಲ್ಲಿ ಕೇಳಿದರು ಹೇಳುತ್ತಾರೆ ಅಷ್ಟೊಂದು ಜನಪ್ರಿಯತೆ ಇವರದ್ದಾಗಿದೆ. ಈಗಾಗಲೇ ಇವರು ೨ ಸಾವಿರದ ೮೦೦ ನಾರ್ಮಲ್ ಹೆರಿಗೆಯನ್ನು ಮಾಡಿಸಿದ್ದಾರೆ, ಜಿಲ್ಲೆಯ ವೈದ್ಯರು ಹೆರಿಗೆ ಮಾಡಿಸಲು ಕಷ್ಟದ ಪರಿಸ್ಥಿತಿ ಎದುರಾದಾಗ ಈಕೆಯನ್ನು ಕರೆದು ಹೆರಿಗೆ ಮಾಡಿಸಿದ್ದು ಉಂಟು ಅನ್ನೋದನ್ನ ಹೇಳಲಾಗುತ್ತದೆ. ಅದೇನೇ ಹೇಳಿ ಇವರ ಈ ನಿಸ್ವಾರ್ಥ ಸೇವೆಗೆ ನಿಜಕ್ಕೂ ನಮ್ಮ ಕಡೆಯಿಂದ ಒಂದು ಬಿಗ್ ಸಲ್ಯೂಟ್.