ರೈತರು ತಮ್ಮ ಜಮೀನಿನ ಬೇಸಾಯದ ಜೊತೆಗೆ ಮೀನು ಸಾಕಾಣಿಕೆಯನ್ನು ಮಾಡಬಹುದು ಅದರಿಂದ ಒಳ್ಳೆಯ ಲಾಭ ಪಡೆಯಬಹುದು. ಮೀನು ಸಾಕಾಣಿಕೆಯನ್ನು ಹೇಗೆ ಮಾಡಬೇಕು, ಮೀನುಗಳಿಗೆ ಯಾವ ಆಹಾರವನ್ನು ಎಷ್ಟು ಕೊಡಬೇಕು ಹಾಗೂ ಅದರಿಂದ ಆಗುವ ಲಾಭದ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಹಂಪಾಪುರ ಎಂಬ ಗ್ರಾಮದಲ್ಲಿ ಕುಮಾರ್ ಎಂಬ ರೈತನು ತನ್ನ ಜಮೀನಿನಲ್ಲಿ ಕಬ್ಬು, ಜೋಳ, ಭತ್ತ, ತರಕಾರಿಗಳನ್ನು ಬೆಳೆಯುತ್ತಿದ್ದರು ಆದರೆ ಮಾರ್ಕೆಟಿಂಗ್ ಸಮಸ್ಯೆಯಿಂದ ಸರಿಯಾದ ಬೆಲೆ ಸಿಗದೆ ನಷ್ಟವಾಗುತ್ತಿತ್ತು. ಆಗ ಹೊಸದಾಗಿ ಮೀನು ಸಾಕಾಣಿಕೆಯನ್ನು ಪ್ರಾರಂಭಿಸಿದರು. ಅವರು ಮೀನು ಸಾಕಾಣಿಕೆ ಪ್ರಾರಂಭಿಸುವ ಮೊದಲು ಕೆಲವು ಕೃಷಿ ಅಧಿಕಾರಿಗಳಿಂದ ಸಲಹೆ ಪಡೆಯುತ್ತಾರೆ. ಅಧಿಕಾರಿಗಳು ನಿಮ್ಮ ಜಮೀನಿನಲ್ಲಿರುವ ಮಣ್ಣು ಮೀನು ಸಾಕಾಣಿಕೆಗೆ ಯೋಗ್ಯವಾಗಿದೆಯೇ, ನೀರಿನಲ್ಲಿ ಮೀನುಗಳು ಬೆಳವಣಿಗೆ ಹೊಂದುತ್ತದೆಯೇ ಎಂಬುದನ್ನು ನೋಡಲು ಮಣ್ಣು ಮತ್ತು ನೀರನ್ನು ಪರೀಕ್ಷೆ ಮಾಡಿಸಬೇಕು ಎಂದು ಹೇಳುತ್ತಾರೆ. ನಂತರ ಕುಮಾರ್ ಅವರು ತಮ್ಮ ಜಮೀನಿನ ಮಣ್ಣು ಮತ್ತು ನೀರನ್ನು ಪರೀಕ್ಷೆ ಮಾಡಿಸುತ್ತಾರೆ ಇದರಿಂದ ಮೀನು ಸಾಕಾಣಿಕೆಗೆ ಯೋಗ್ಯವಾಗಿದೆ ಎಂದು ತಿಳಿಯುತ್ತದೆ.
ಸರ್ಕಾರದ ಮೀನುಗಾರಿಕಾ ಇಲಾಖೆಯಿಂದ ಒಂದು ಎಕರೆಗೆ 1,20,000 ರೂಪಾಯಿ ಸಹಾಯಧನ ಸಿಗುತ್ತದೆ. ಅವರು ಮೊದಲು ತಮ್ಮ ಜಮೀನಿನಲ್ಲಿ ಒಂದುವರೆ ಎಕರೆ ವಿಸ್ತೀರ್ಣದಲ್ಲಿ 4-5 ಅಡಿ ಆಳದ ಕೆರೆಗಳನ್ನು ತೆಗೆಯುತ್ತಾರೆ ಇದಕ್ಕೆ 5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಕೆರೆ ತೆಗೆದು 150-250 ಕೆಜಿ ಸಗಣಿ ಮತ್ತು ಸುಣ್ಣ ಹಾಕಿ 15 ದಿವಸ ನೀರು ಬಿಟ್ಟು ಚೆನ್ನಾಗಿ ಕೊಳೆಯಿಸಿ ನಂತರ ಮೀನು ಮರಿಗಳನ್ನು ಬಿಡಬೇಕು, ಬಿಟ್ಟ ಎರಡು ದಿನದ ನಂತರ ಆಹಾರ ಕೊಡಬೇಕು. ಅವರು 6,000 ಗ್ಲಾಸ್ ಕರ್ಪೂ ಮತ್ತು ರೋಹು ಜಾತಿಯ ಮೀನಿನ ಮರಿಗಳನ್ನು ಆಂಧ್ರದಿಂದ ಖರೀದಿಸಿದರು ಮತ್ತು ಹಾಸ ಎಂಬ ಸ್ಥಳದಿಂದ 6,000 ಕಾಮನ್ ಕರ್ಪೂ, ಮೃಗಾಡ್ ಅಲ್ಲದೆ ಮೀನುಗಾರಿಕಾ ಇಲಾಖೆಯಿಂದ 1,000 ಮೀನು ಮರಿಗಳು ಒಟ್ಟು 13,000 ಮೀನು ಮರಿಗಳನ್ನು ಕೆರೆಯಲ್ಲಿ ಬಿಡಲಾಯಿತು. ಅಂದಾಜು 10,000 ಮೀನುಗಳು ಬದುಕುತ್ತವೆ.
ಪ್ರಾರಂಭದಲ್ಲಿ ಅವರು ಮೀನು ಮರಿಗಳಿಗೆ ಕಡ್ಲೆಕಾಯಿ ಹಿಂಡಿ ಹಾಕುತ್ತಿದ್ದರು ಎರಡು ತಿಂಗಳ ನಂತರ 20 ಕೆಜಿ ಜೋಳ, ರಾಗಿ ಹಾಕುತ್ತಿದ್ದಾರೆ, ದಿನಕ್ಕೆ ಎರಡು ಸಾರಿ ಆಹಾರ ಕೊಡುತ್ತಿದ್ದರು. ಅವರು ಮೀನು ಬೆಳವಣಿಗೆ ಆಗಲು ದಿನಕ್ಕೆ 60-80 ಕೆಜಿ ಆಹಾರವನ್ನು ಕೊಟ್ಟಿದ್ದಾರೆ ಆದರೆ ದಿನಕ್ಕೆ 40 ಕೆಜಿ ಆಹಾರ ಕೊಡುವುದು ಒಳ್ಳೆಯದು. ಮೀನು ಮರಿಗಳು ಒಂಭತ್ತು ತಿಂಗಳಿಗೆ 600 ಗ್ರಾಂ ನಿಂದ ಒಂದು ಕಾಲು ಕೆಜಿಯವರೆಗೆ ಬೆಳವಣಿಗೆ ಆಗಿದೆ. ಮೀನು ಸಾಕಾಣಿಕೆಯಿಂದ 10 ಲಕ್ಷ ರೂಪಾಯಿ ಆದಾಯ ಬರುತ್ತದೆ ಖರ್ಚು ತೆಗೆದರೆ 4-5 ಲಕ್ಷ ರೂಪಾಯಿ ಲಾಭ ಬರುತ್ತದೆ. ಮೀನು ಮರಿ ಹೆಚ್ಚು ತೂಕ ಬಂದರೆ ಹೆಚ್ಚು ಲಾಭ ಬರುತ್ತದೆ. ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಮೂಲಕ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೆ ನಿರುದ್ಯೋಗಿ ಯುವಕರಿಗೆ ತಿಳಿಸಿ ಇದರಿಂದ ನಿರುದ್ಯೋಗದ ಪ್ರಮಾಣ ಕಡಿಮೆಯಾಗುತ್ತದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466