Kannada Health tips: ಸಾಮಾನ್ಯವಾಗಿ ಕೆಲವರಲ್ಲಿ ಈ ಕೆದಿನಿಯಲ್ಲಿ ಸ್ಟೋನ್ ಆಗುವ ಸಮಸ್ಯೆ ಇದ್ದೆ ಇರುತ್ತದೆ ಅಂತವರಿಗೆ ಈ ಬಾಳೆದಿಂಡಿನ ಪಲ್ಯ ಹೆಚ್ಚು ಸಹಕಾರಿ ಇದನ್ನು ಹೇಗೆ ತಯಾರಿಸೋದು ಅನ್ನೋದನ್ನ ಇಲ್ಲಿ ತಿಳಿಯಿರಿ. ಆಹಾರದಲ್ಲಿನ ಭಿನ್ನತೆಯಿಂದ ಇಂದು ಕಿಡ್ನಿಯಲ್ಲಿ ಕಲ್ಲುಗಳಾಗುವುದು ಸರ್ವೇಸಾಮಾನ್ಯ ವಾಗಿಬಿಟ್ಟಿದೆ. ಈ ಸಮಸ್ಯೆಯಿಂದ ಸಾಕಷ್ಟು ನೋವನ್ನ ಅನುಭವಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳಿಗೆ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಮಾಡಿದ ಮನೆಮದ್ದುಗಳು ನಿರೀಕ್ಷಿತ ಫಲಿತಾಂಶ ನೀಡುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆಗೆ ಬಾಳೆತಿಂಡಿನ ಪಲ್ಯ ಸೂಕ್ತ ಮನೆಮದ್ದು.
ಬಾಳೆತಿಂಡಿನ ಪಲ್ಯಕ್ಕೆ ಬೇಕಾದ ಪದಾರ್ಥಗಳು: ಬಾಳೆ ತಿಂಡು,ಈರುಳ್ಳಿ, ಹಸಿ ಮೆಣಸಿನ ಕಾಯಿ, ಕರಿಬೇವು, ಸಾಸಿವೆ, ಕಡ್ಲೆಬೇಳೆ, ಉಪ್ಪು, ಹಸಿ ಕಾಯಿತುರಿ, ಎಣ್ಣೆ, ಅರಿಸಿಣಪುಡಿ. ಕೊತ್ತಂಬರಿ
ಬಾಳೆತಿಂಡಿನ ಪಲ್ಯ ಮಾಡುವ ವಿಧಾನ:ಮೊದಲಿಗೆ ಬಾಳೆದಿಂಡಿನ ತಿರುಳುಗಳನ್ನ ತೆಗೆದು ದಿಂಡನ್ನು ವೃತ್ತಾಕಾರಕ್ಕೆ ಬರುವಂತೆ ಕಟ್ ಮಾಡಿ ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ನಂತರ ಬಾಣಲೆಗೆ ಒಂದು ಟೇಬಲ್ ಸ್ಪೊನ್ ನಷ್ಟು ಎಣ್ಣೆ , ಒಂದು ಸ್ಪೂನ್ ಸಾಸಿವೆ, ಒಂದು ಬೌಲ್ ಕಡ್ಲೆಬೇಳೆ, ಕಟ್ ಮಾಡಿದ ಎರಡು ಮೆಣಸಿನಕಾಯಿ, ಕರಿಬೇವು , ಕಟ್ ಮಾಡಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಅದು ಕಂದು ಬಣ್ಣಕ್ಕೆ ಬಂದ ಮೇಲೆ ಕಟ್ ಮಾಡಿದ ಬಾಳೆದಿಂಡನ್ನು ಹಾಕಿ 15 ನಿಮಿಷ ಬೇಯಲು ಬಿಡಿ. ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು , 2 ಸ್ಪೂನ್ ಅರಿಸಿಣಪುಡಿ, ಕಾಯಿತುರಿ, ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿದರೆ ಬಾಳೆದಿಂಡಿನ ಪಲ್ಯ ಸಿದ್ದ. ಹೀಗೆ ತಯಾರಿಸಿದ ಪಲ್ಯ ವನ್ನು ವಾರಕ್ಕೆ ಎರಡು ಬಾರಿ ತಿಂದರೆ ಕಿಡ್ನಿ ಯಲ್ಲಿನ ಕಲ್ಲುಗಳು ಕರಗಿ ಸಮಸ್ಯೆ ನಿವಾರಣೆ ಆಗುತ್ತದೆ.
ನಿಮಗೆ ಈ ಆರೋಗ್ಯಕರವಾದ ವಿಚಾರ ಇಷ್ಟವಾದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಹಾಗೂ ಬಾಳೆ ದಿಂಡಿನ ಮಹತ್ವವನ್ನು ತಿಳಿಯಲಿ ನಿಮ್ಮಿಂದ ಬೇರೆಯವರಿಗೂ ಉಪಯೋಗವಾಗಬಹದು.