Gruhalakshmi Scheme 4th instalment payment: ಗೃಹಲಕ್ಷ್ಮಿ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಮದುವೆಯಾಗಿ ಮನೆ ನಡೆಸಿಕೊಂಡು ಹೋಗುತ್ತಿರುವ ಎಲ್ಲಾ ಗೃಹಲಕ್ಷ್ಮಿಯರಿಗಾಗಿ ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗಲಿ ಎನ್ನುವ ಉದ್ದೇಶ ಇದಾಗಿದ್ದು, ಈಗಾಗಲೇ ಸುಮಾರು 1.15ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಎಲ್ಲಾ ಮಹಿಳೆಯರಿಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ.

3ನೇ ಕಂತಿನ ಹಣ ಕೂಡ ಮಹಿಳೆಯರನ್ನು ತಲುಪಿದೆ, ಆದರೆ ಸುಮಾರು 5 ರಿಂದ 7 ಲಕ್ಷ ಮಹಿಳೆಯರಿಗೆ ಇನ್ನು ಮೊದಲ ಕಂತಿನ ಹಣವೇ ಬಂದಿಲ್ಲ ಎಂದು ಚಿಂತೆಗೆ ಒಳಗಾಗಿದ್ದಾರೆ. ಅಂಥವರಿಗೆ ಸರ್ಕಾರವೇ ಭರವಸೆ ನೀಡಿದ್ದು, ಶೀಘ್ರದಲ್ಲೇ ಎರಡನೇ ಕಂತಿನ ಹಣ ಎಲ್ಲಾ ಮಹಿಳೆಯರನ್ನು ತಲುಪುತ್ತದೆ ಎಂದು ತಿಳಿಸಿದೆ. ಹಲವು ಮಹಿಳೆಯರಿಗೆ ಇನ್ನು ಮೊದಲ ಕಂತಿನ ಹಣವೇ ಜಮೆಯಾಗಿಲ್ಲ, ಅವರೆಲ್ಲರು ತಮಗೆ ಇನ್ನು ಹಣ ಬಂದಿಲ್ಲ ಎಂದು ಆತಂಕಕ್ಕೆ ಒಳಗಾಗಿದ್ದಾರೆ.

ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬರದೆ ಇರುವುದಕ್ಕೆ ತಾಂತ್ರಿಕ ದೋಷ ಕಾರಣ ಇರಬಹುದು. ಅಥವಾ ಬ್ಯಾಂಕ್ ಅಕೌಂಟ್ ಮಾಹಿತಿ ತಪ್ಪಾಗಿರುವುದು, ekyc ಮಾಡಿಸಿಲ್ಲದೆ ಇರುವುದು, ಆಧಾರ್ ಸೀಡಿಂಗ್ ಆಗಿಲ್ಲದೆ ಇರುವುದು ಹೀಗೆ ಹಲವು ಕಾರಣಗಳಿವೆ. ಈ ತಿಂಗಳ ಒಳಗೆ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಅದರ ಬೆನ್ನಲ್ಲೇ ಈಗ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ ಆಗಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ 15 ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿದೆ. ಮೈಸೂರು, ಕೋಲಾರ, ಹಾಸನ, ವಿಜಯಪುರ, ಮಂಡ್ಯ, ಉತ್ತರ ಕನ್ನಡ, ಧಾರವಾಡ, ದಾವಣಗೆರೆ, ಬೆಂಗಳೂರ ನಗರ, ಗ್ರಾಮಾಂತರ ಜಿಲ್ಲೆ,, ಕಲ್ಲುಬುರ್ಗಿ, ಬೆಳಗಾವಿ, ರಾಯಚೂರು, ಬಾಗಲಕೋಟೆ, ಗದಗ ಜಿಲ್ಲೆ, ಈ 15 ಜಿಲ್ಲೆಗಳ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಿದೆ. ನಿಮ್ಮ ಜಿಲ್ಲೆಯ ಹೆಸರು ಇದ್ದರೆ, ಅಕೌಂಟ್ ಚೆಕ್ ಮಾಡಿ.

By

Leave a Reply

Your email address will not be published. Required fields are marked *