Loreal India For Young Women In Science Scholarship 23-24: ನಮ್ಮ ದೇಶದಲ್ಲಿ ಆರ್ಥಿಕವಾಗಿ ಬಡವರ್ಗದಲ್ಲಿದ್ದು, ಉನ್ನತ ಶಿಕ್ಷಣ ಮಾಡಬೇಕು ಎಂದು ಆಸೆ ಇಟ್ಟುಕೊಂಡಿರುವವರಿಗೆ ಲಾರಿಯಲ್ ಇಂಡಿಯಾ ಸಂಸ್ಥೆ ಒಂದು ಗುಡ್ ನ್ಯೂಸ್ ತಂದಿದೆ. ಅದೇನು ಎಂದರೆ ಇದೀಗ ಇವರು ಸೈನ್ಸ್ ವಿಚಾರದಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂದುಕೊಂಡಿರುವವರಿಗೆ ಇದು ಸದಾವಕಾಶ ಆಗಿದೆ. ಇದು ಲಾರಿಯಲ್ ಇಂಡಿಯಾ ಫಾರ್ ಯಂಗ್ ವೂಮೆನ್ ಇನ್ ಸೈನ್ಸ್‌ ಸ್ಕಾಲರ್‌ಶಿಪ್‌ 2023 ಆಗಿದ್ದು, ಸೈನ್ಸ್ ವಿಭಾಗದಲ್ಲಿ ಪಿಯುಸಿ ಮುಗಿಸಿ ಪ್ಯೂರ್ ಸೈನ್ಸ್, ಅಪ್ಲೈಡ್ ಸೈನ್ಸ್, ಇಂಜಿನಿಯರಿಂಗ್, ಮೆಡಿಕಲ್ ಈ ವಿಚಾರಗಳಲ್ಲಿ ಓದಬೇಕು ಎಂದುಕೊಂಡಿರುವವರು ಈ ಸ್ಕಾಲರ್ಶಿಪ್ ಪ್ರಯೋಜನ ಪಡೆಯಬಹುದು..

ಈ ಯೋಜನೆಯ ಮೂಲಕ ವಿದ್ಯಾರ್ಥಿನಿಯರು ಸ್ಕಾಲರ್ಶಿಪ್ ಪಡೆಯಬಹುದು. ಇದರಲ್ಲಿ ನಿಮಗೆ ₹2.50 ಲಕ್ಷ ರೂಪಾಯಿವರೆಗು ಸ್ಕಾಲರ್ಶಿಪ್ ಸಿಗುತ್ತದೆ. ಇದಕ್ಕಾಗಿ ಬೇಕಾಗುವ ಅರ್ಹತೆಗಳು, ದಾಖಲೆಗಳು ಇದೆಲ್ಲದರ ಬಗ್ಗೆ ತಿಳಿಸುತ್ತೇವೆ ನೋಡಿ. ಇದಕ್ಕಾಗಿ ಬೇಕಾಗುವ ಅರ್ಹತೆಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..
ನಮ್ಮ ದೇಶದ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪಾಸ್ ಮಾಡಬೇಕು
ವಿಜ್ಞಾನ ಪಿಯುಸಿಯಲ್ಲಿ, ಪಿಸಿಎಂ/ಪಿಸಿಬಿ/ಪಿಸಿಎಂಬಿ ವಿಷಯಗಳಲ್ಲಿ 12ನೇ ತರಗತಿಯಲ್ಲಿ ಸುಮಾರು 85% ವರೆಗು ಮಾರ್ಕ್ಸ್ ಪಡೆದಿರಬೇಕು
2023-24ನೇ ವರ್ಷದಲ್ಲಿ ಸೈನ್ಸ್ ವಿಷಯದಲ್ಲಿ ಪದವಿಗೆ ಶಿಕ್ಷಣ ಪಡೆದಿರಬೇಕು
ಪಿಯುಸಿ ಆಗಿ 1 ವರ್ಷ ಆಗಿ ಹೋಗಿದ್ದರೆ, ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ಆಗುವುದಿಲ್ಲ.

ಅಪ್ಲಿಕೇಶನ್ ಹಾಕಲು ಬೇಕಾಗುವ ದಾಖಲೆಗಳ ಬಗ್ಗೆ ಹೇಳುವುದಾದರೆ..
ಸರ್ಕಾರದಿಂದ ಸಿಕ್ಕಿರುವ ಐಡೆಂಟಿಟಿ ಕಾರ್ಡ್ ಅಂದರೆ ಆಧಾರ್ ಕಾರ್ಡ್
ಕುಟುಂಬದ ಇನ್ಕಮ್ ಸರ್ಟಿಫಿಕೇಟ್
10ನೇ ತರಗತಿ ಮಾರ್ಕ್ಸ್ ಕಾರ್ಡ್
ಪಿಯುಸಿ ಮರ್ಕ್ಸ್ ಕಾರ್ಡ್

ಸ್ಕಾಲರ್ಶಿಪ್ ಗೆ ಅರ್ಜಿ ಹಾಕುವುದಕ್ಕೆ, https://www.buddy4study.com/page/loreal-india-for-young-women-in-science-scholarships?utm_source=HomePageBanner ಮೊದಲಿಗೆ ಈ ಲಿಂಕ್ ಕ್ಲಿಕ್ ಮಾಡಿ. ಇಲ್ಲಿ Apply Online ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಇಲ್ಲಿ ನಿಮ್ಮ ಜಿಮೇಲ್ ಐಡಿ ಹಾಗೂ ಫೋನ್ ನಂಬರ್ ಮೂಲಕ ಲಾಗಿನ್ ಮಾಡಿ. ಈ ರೀತಿಯಲ್ಲಿ ರಿಜಿಸ್ಟ್ರೇಷನ್ ಕಾರ್ಡ್. ಇನ್ನು ಈ ಕಂಪನಿ ಫ್ರೆಂಚ್ ದೇಶದ ಕಾಸ್ಮೆಟಿಕ್ ಕಂಪನಿ ಆಗಿದೆ.

By AS Naik

Leave a Reply

Your email address will not be published. Required fields are marked *