Dr Bro Kannada: ಯೂಟ್ಯೂಬ್ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ಯುಟ್ಯೂಬರ್ ಅಂದ್ರೆ ಡಾ. ಬ್ರೋ. (Dr Bro) ಇವರು ತಾವು ಯೂಟ್ಯೂಬ್ ಇಂದ ದುಡಿದ ಸ್ವಂತ ಹಣದಿಂದ ದೇಶ ವಿದೇಶ ಸುತ್ತ ಅಲ್ಲಿನ ಆಚರಣೆ, ಪದ್ಧತಿ, ಜನಜೀವನ ಎಲ್ಲದರ ಬಗ್ಗೆ ಜನರಿಗೆ ತಿಳಿಸಿ ಇಂದು ಡಾ.ಬ್ರೋ ಎಂದೇ ಹೆಸರು ಮಾಡಿದ್ದಾರೆ. ಇವರ ಮೂಲಕ ಗಗನ ಶ್ರೀನಿವಾಸ್. ಒಂದು ತಿಂಗಳಿಂದ ಇವರು ವಿಡಿಯೋ (Video) ಅಪ್ಲೋಡ್ ಮಾಡಿಲ್ಲ ಎಂದು ನೆಟ್ಟಿಗರು ಆತಂಕಗೊಂಡಿದ್ದರು, ಹಾಗಿದ್ರೆ ಡಾ.ಬ್ರೋ ಈಗ ಎಲ್ಲಿದ್ದಾರೆ ಗೊತ್ತಾ

ನಮಸ್ಕಾರ ದೇವ್ರು ಎಂದು ವಿಡಿಯೋ ಶುರು ಮಾಡುವ ಗಗನ್ ಶ್ರೀನಿವಾಸ್ 23 ವರ್ಷದ ಹುಡುಗ. ಇವರು ಮೂಲತಃ ಬೆಂಗಳೂರಿನ ಹೊರವಲಯದವರು. ಇವರ ತಂದೆ ಶ್ರೀನಿವಾಸ್ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದರು. ತಂದೆಯನ್ನು ನೋಡಿ ಬೆಳೆದ ಗಗನ್, ತಂದೆ ಇಲ್ಲದ ವೇಳೆ ಅವರೇ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದರು. ಇವರಿಗೆ ಓದುವ ಕಡೆಗೆ ಹೆಚ್ಚು ಆಸಕ್ತಿ ಇರಲಿಲ್ಲ, ಹಾಡು ನೃತ್ಯ ಇವುಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಇದರಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು.

2016ರಲ್ಲಿ ಯೂಟ್ಯೂಬ್ ಚಾನೆಲ್ ಶುರು ಮಾಡಿ, ಮೊದಲಿಗೆ ಕಾಮಿಡಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು, ಬಳಿಕ ಕಲಾವಿದರ ಇಂಟರ್ವ್ಯೂ ಮಾಡುವುದಕ್ಕೆ ಶುರು ಮಾಡಿದರು ಆದರೆ ಇವರು ಹೆಚ್ಚು ಫೇಮಸ್ ಆಗಿದ್ದು ನಮ್ಮ ರಾಜ್ಯ, ದೇಶ ಮತ್ತು ಹೊರದೇಶಗಳಲ್ಲಿ ಓಡಾಡಿ ವಿಡಿಯೋ ಮಾಡೋಕೆ ಶುರು ಮಾಡಿದ ಮೇಲೆ. ಅಲ್ಲಿನ ಸಂಸ್ಕೃತಿಯನ್ನು ಜನರಿಗೆ ಹತ್ತಿರವಾದರು ಡಾ. ಬ್ರೋ. ಕಳೆದ ತಿಂಗಳು ಚೈನಾ ವಿಡಿಯೋ ಪೋಸ್ಟ್ ಮಾಡಿದ್ದರು..

ಆದರೆ ಒಂದು ತಿಂಗಳಿನಿಂದ ಇನ್ಯಾವುದೇ ವಿಡಿಯೋ ಹಾಕಿಲ್ಲ ಎಂದು ಅಭಿಮಾನಿಗಳು ಒಂದು ರೀತಿ ಆತಂಕಕ್ಕೆ ಒಳಗಾಗಿದ್ದರು. ಡಾ. ಬ್ರೋ ಅವರಿಗೆ ಏನಾಗಿದೆ ಎಂದು ಪ್ರಶ್ನೆ ಮಾಡಿದ್ದರು. ಆದರೆ ಈಗ ಡಾ. ಬ್ರೋ ಎಲ್ಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಕಿರುತೆರೆ ಮತ್ತು ಬಳ್ಳಿತೆರೆಯ ನಟ ಶೈನ್ ಶೆಟ್ಟಿ ಅವರು ಡಾ. ಬ್ರೋ ಜೊತೆಗೆ ಫೋಟೋ ಅಪ್ಲೋಡ್ ಮಾಡಿದ್ದಾರೆ.

“ದೇವ್ರು ಯಾರ್ ಇಲ್ಲಿದ್ದಾರೆ ನೋಡಿ.. ನಮ್ಮ ಕನ್ನಡಿಗರ ಹೆಮ್ಮೆ, ಅದ್ಭುತ ಪ್ರತಿಭೆ, ಮುಗ್ಧ ಮನಸ್ಸಿನ ಮುದ್ದು ಹುಡುಗ, ಗಗನ್ ಅವರನ್ನು ನಮ್ಮ ಜಸ್ಟ್ ಮ್ಯಾರಿಡ್ ಶೂಟಿಂಗ್ ವೇಳೆ ಭೇಟಿ ಆದ ಕ್ಷಣ” ಎಂದು ಬರೆದು ಫೋಟೋ ಶೇರ್ ಮಾಡಿದ್ದಾರೆ ಶೈನ್ ಶೆಟ್ಟಿ. ಇದನ್ನು ನೋಡಿ ಅಭಿಮಾನಿಗಳಿಗೆ ಈಗ ನೆಮ್ಮದಿಯಾಗಿದೆ, ಡಾ.ಬ್ರೋ ಅವರಿಗೆ ಏನು ಆಗಿಲ್ಲ ಎಂದು ಖಚಿತವಾಗಿದೆ.

By

Leave a Reply

Your email address will not be published. Required fields are marked *