400 ಕ್ಕೂ ಹೆಚ್ಚು ಕಾರುಗಳನ್ನು ಹೊಂದಿರೋ ಮಾಲೀಕ ಕಟಿಂಗ್ ಶಾಪ್ ನಲ್ಲಿ ಕೆಲಸ

0 4

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯುವ ಜನರೇ ಅತಿಯಾಗಿ ಇರುವ ಈಗಿನ ಕಾಲದಲ್ಲಿ ಇಂಥವರ ನಡುವೆ ರಮೇಶ್ ಬಾಬು ಎಂಬ ವ್ಯಕ್ತಿ ತುಂಬಾ ವಿಶೇಷವಾಗಿ ಕಾಣುತ್ತಾರೆ. ಏಕೆಂದರೆ 400 ಕಾರುಗಳ ಒಡೆಯ ಆದರೂ ಸಹ ತನ್ನ ಮೂಲ ವೃತ್ತಿಯನ್ನು ಬಿಡದೆ ಆ ವೃತ್ತಿಯನ್ನೇ ಮಾಡಿಕೊಂಡು ಹೋಗುತ್ತಿದ್ದಾರೆ. ಈ ರಮೇಶ್ ಬಾಬು ಅವರ ಮೂಲ ವೃತ್ತಿ ಹೇರ್ ಕಟ್ಟಿಂಗ್ ಮಾಡುವುದು. ಒಂದು ಕಟ್ಟಿಂಗ್ ಶಾಪ್ ಇಟ್ಟುಕೊಂಡು 400 ಕಾರುಗಳ ಒಡೆಯ ಆಗಿದ್ದು ಹೇಗೆ ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರಮೇಶ್ ಬಾಬು ಅವರು ಹುಟ್ಟಿದ್ದು 1974 ರಲ್ಲಿ ಬೆಂಗಳೂರಿನಲ್ಲಿ. ಇವರು 7 ವರ್ಷದಲ್ಲಿರುವಾಗ ಇವರ ತಂದೆ ಮರಣ ಹೊಂದುತ್ತಾರೆ ಈ ಕಾರಣದಿಂದ ಮನೆಯ ಎಲ್ಲಾ ಜವಾಬ್ಧಾರಿ ಕೂಡಾ ರಮೇಶ್ ಬಾಬು ಅವರ ತಾಯಿಯ ಮೇಲೆ ಬೀಳುತ್ತೆ. ಬೇರೆಯವರ ಮನೆಗಳಲ್ಲಿ ಕೆಲಸ ಮಾಡುವ ಮೂಲಕ ಹೇಗೋ ತಮ್ಮ ಸಂಸಾರವನ್ನು ನಿಭಾಯಿಸುತ್ತಾ ಇರುತ್ತಾರೆ. ಆದರೆ ಇವರು ದುಡಿದು ತರುತ್ತಿರುವ ಹಣ ಈ ಸಂಸಾರಕ್ಕೆ ಸಾಲುತ್ತಿರಲ್ಲಿ ಆಗ ರಮೇಶ್ ಬಾಬು ಸುಮ್ಮನೆ ಕೂರದೆ ತನ್ನ ಓದಿನ ಜೊತೆಗೆ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಮನೆ ಮನೆಗೆ ಹಾಲು ಪೇಪರ್ ಹಾಕುವ ಸಣ್ಣ ಪುಟ್ಟ ಕೆಲಸ ಮಾಡುವ ಮೂಲಕ ತಿಂಗಳಿಗೆ 100 ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಆದರೆ ಈ ಹಣ ಕೂಡಾ ಇವರ ಸಂಸಾರ ನಡೆಸಲು ಸಾಲುತ್ತಿರಲಿಲ್ಲ. ಇವರ ತಂದೆಯ ಒಂದು ಸಣ್ಣ ಅಂಗಡಿಯನ್ನು ಬೇರೆಯವರಿಗೆ ತಿಂಗಳಿಗೆ 5 ರೂಪಾಯಿ ಅಂತೆ ಬಾಡಿಗೆಗೆ ನೀಡಿದ್ದರು. ಹೀಗೆ ಜೀವನ ಸಾಗುತ್ತಿರಬೇಕಾದರೆ ರಮೇಶ್ ಬಾಬು ಅವರು ತಮ್ಮ ಸೆಕೆಂಡ್ ಪಿಯುಸಿ ಪರೀಕ್ಷೆ ಕೂಡಾ ಬರೆಯುತ್ತಾರೆ ಇದರಲ್ಲಿ ಫೇಲ್ ಆಗ್ತಾರೆ ಮತ್ತೆ ಐಟಿಐ ಮಾಡುತ್ತಾರೆ. 1989 ರಲ್ಲಿ ಇವರು ಬಾಡಿಗೆ ಕೊಟ್ಟ ಅಂಗಡಿಯನ್ನು ಮತ್ತೆ ತಮ್ಮ ವಶಕ್ಕೆ ಪಡೆಯುತ್ತಾರೆ. ಈ ಅಂಗಡಿಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಹೊಸ ಮಾದರಿಯಲ್ಲಿ ನವೀಕರಿಸಿ ಬಾರ್ಬರ್ (ಕಟಿಂಗ್ ಶಾಪ್) ಶಾಪ್ ಮಾಡುತ್ತಾರೆ.

ಇಲ್ಲಿಂದ ಇವರ ವ್ಯಾಪಾರ ಬಹಳ ಚೆನ್ನಾಗಿ ನಡೆಯುತ್ತೆ. ಎಷ್ಟರ ಮಟ್ಟಿಗೆ ವ್ಯಾಪಾರ ನಡೆಯುತ್ತೆ ಅಂದರೆ ಊಟ ತಿಂಡಿ ಮಾಡಲೂ ಸಹ ಸಮಯ ಇರದಷ್ಟು ಜನರು ಇವರ ಕಟಿಂಗ್ ಶಾಪ್ ಗೆ ಬರಲು ಆರಂಭಿಸುತ್ತಾರೆ. ಇದರ ಮಧ್ಯೆ ರಮೇಶ್ ಬಾಬು ಅವರಿಗೆ ತಾನು ಮಾಡುತ್ತಿರುವ ಈ ವ್ಯಾಪಾರ ತನ್ನ ಜೀವನಕ್ಕೆ ಸಾಲದು ತಾನು ಇನ್ನೂ ಏನಾದರೂ ಸಾಧಿಸಬೇಕು ಎನ್ನುವ ಆಲೋಚನೆ ಬರತ್ತೆ. ಆ ಅಲೋಚನೆಯಂತೆ 1984 ರಲ್ಲಿ ಒಂದು ಓಮಿನಿ ಕಾರ್ ತೆಗೆದುಕೊಳ್ಳುತ್ತಾರೆ. ಇದನ್ನು ತೆಗೆದುಕೊಂಡ ನಂತರ ಕಾರ್ ಲೋನ್ ಕಟ್ಟುವುದು , ಸಂಸಾರ ನಡೆಸುವುದು ಮತ್ತೂ ಸ್ವಲ್ಪ ಕಷ್ಟ ಆಗತ್ತೆ. ಆಗ ಇವರ ತಾಯಿ ಕಾರನ್ನು ಯಾಕೆ ಬಾಡಿಗೆಗೆ ಬಿಡಬಾರದು ಎನ್ನುವ ಉಪಾಯ ನೀಡುತ್ತಾರೆ. ಇದರ ಪ್ರಕಾರ ರಮೇಶ್ ಒಬ್ಬ ಡ್ರೈವರ್ ನ ಇಟ್ಟುಕೊಂಡು ಡ್ರೈವರ್ ಗೆ ಸಂಬಳ ನೀಡುವಷ್ಟು ಹಣ ತಮ್ಮ ಬಳಿ ಇಲ್ಲದ ಕಾರಣ ಸ್ವತಃ ತಾವೇ ಕಾರ್ ಬಾಡಿಗೆಗೆ ತೆಗೆದುಕೊಂಡು ಹೋಗುತ್ತಾರೆ.

ಇದರಿಂದಾಗಿ ಮುಂದೆ ಕಾರ್ ಲೋನ್ ತೀರಿಸಿ ಮನೆಯನ್ನು ನಿಭಾಯಿಸಿಕೊಂಡು ಮುಂದೆ ಇನ್ನೊಂದು ಕಾರ್ ಕೂಡ ತೆಗೆದುಕೊಳ್ಳುತ್ತಾರೆ. ಮುಂದೆ 2004 ರಲ್ಲಿ ರಮೇಶ್ ಬಾಬು ಟೂರ್ಸ್ ಅಂಡ್ ಟ್ರಾವೆಲ್ಸ್ ಎಂಬ ಕಂಪನಿಯನ್ನು ಆರಂಭಿಸುತ್ತಾರೆ. ಇವರಲ್ಲಿರುವ ಶ್ರದ್ಧೆ , ಶ್ರಮದಿಂದ ಇವತ್ತಿಗೆ 400 ಕ್ಕೂ ಹೆಚ್ಚು ಕಾರುಗಳನ್ನು ಖರೀದಿಸಿದ್ದಾರೆ. ಇವರ ಟ್ರಾನ್ಸ್ಫೋರ್ಟ್ ಇವತ್ತಿಗೆ ಯಾವ ಮಟ್ಟಿಗೆ ಬೆಳೆದಿದೆ ಎಂದರೆ ಇವರ ಬಳಿ ಇಲ್ಲದ ಕಾರ್ ಗಳೇ ಇಲ್ಲ. ಎಲ್ಲಾ ರೀತಿಯ ಐಷಾರಾಮಿ ಕಾರ್ ಗಳೂ ಸಹ ಇವರ ಬಳಿ ಇದೆ. ಇಷ್ಟು ಸಂಪತ್ತು ಇದ್ದರೂ ಸಹ ರಮೇಶ್ ಬಾಬು ಅವರು ತಮ್ಮ ಮೂಲ ವೃತ್ತಿಯಾದ ಕಟಿಂಗ್ ಮಾಡುವುದನ್ನು ಮಾತ್ರ ಇಂದಿಗೂ ಬಿಡಲಿಲ್ಲ. ಇವರ ಬಳಿ ದೊಡ್ಡ ದೊಡ್ಡ ಸಿನಿಮಾ ನಟರು , ರಾಜಕಾರಣಿಗಳು ಸಹ ಕಟಿಂಗ್ ಮಾಡಿಸುವ ಸಲುವಾಗಿ ಹೋಗುತ್ತಾರೆ. ತಾನು ಎಷ್ಟೇ ಶ್ರೀಮಂತ ಆದರೂ ಸಹ ತನ್ನ ಮೂಲ ವೃತ್ತಿಯನ್ನು ತಾನು ಬಿಡುವುದಿಲ್ಲ ಎಂದು ರಮೇಶ್ ಬಾಬು ಹೇಳುತ್ತಾರೆ. ರಮೇಶ್ ಬಾಬು ಅವರನ್ನು ಇಂದಿನ ಯುವಕರಿಗೆ ಮಾದರಿ ಎನ್ನಬಹುದು.

Leave A Reply

Your email address will not be published.