ಕುರಿಗಳನ್ನು ಸಾಮಾನ್ಯವಾಗಿ ಜಾನುವಾರಾಗಿ ಇಟ್ಟುಕೊಳ್ಳಬಹುದಾದ ಒಂದು ಚತುಷ್ಪಾದಿ, ರೋಮಂಥಕ ಸಸ್ತನಿ. ಎಲ್ಲ ರೋಮಂಥಕಗಳಂತೆ, ಕುರಿಯು ಆರ್ಟಿಯೊಡ್ಯಾಕ್ಟಿಲಾ (ಸಮ ಕಾಲ್ಬೆರಳುಗಳಿರುವ ಗೊರಸುಳ್ಳ ಪ್ರಾಣಿ) ಗಣದ ಸದಸ್ಯ. ಕುರಿ ಎಂಬ ಹೆಸರು ಓವೀಸ್ ಜಾತಿಯಲ್ಲಿನ ಅನೇಕ ಪ್ರಜಾತಿಗಳಿಗೆ ಅನ್ವಯಿಸುತ್ತದಾದರೂ, ದೈನಂದಿನ ಬಳಕೆಯಲ್ಲಿ ಅದು ಬಹುತೇಕ ಯಾವಾಗಲೂ ಓವೀಸ್ ಆರಿಯೆಸ್ ಅನ್ನು ನಿರ್ದೇಶಿಸುತ್ತದೆ. ಟೊಳ್ಳು ಕೊಂಬಿನ ಮೆಲುಕು ಹಾಕುವ ಸಸ್ಯಾಹಾರಿ ಸ್ತನಿಗಳನ್ನೊಳಗೊಂಡ ಬೋವಿಡೀ ಕುಟುಂಬದ ಕ್ಯಾಪ್ರಿನೀ ಎಂಬ ಉಪಕುಟುಂಬಕ್ಕೆ ಸೇರಿದ ಸ್ತನಿ. ಈ ರೀತಿಯ ಜಾತಿಗೆ ಸೇರಿದ ಕುರಿಗಳು ದೇಶದ ವಿವಿದೆಡೆ ನಮ್ಮ ಕಣ್ಣಿಗೆ ಕಾಣಸಿಗುತ್ತವೆ. ಸಾಮಾನ್ಯವಾಗಿ ಅತಿ ಸಭ್ಯ ಸಾಕುಪ್ರಾಣಿ ಎನಿಸಿದ ಕುರಿ ಸಾವಿರಾರು ವರ್ಷಗಳಿಂದ ಮಾನವನೊಂದಿಗೆ ಬೆಳೆದು ಬಂದಿದೆ. ಆದಿಮಾನವ ಕುರಿಯ ಚರ್ಮದಿಂದ ಹೊದಿಕೆಗಳನ್ನು ತಯಾರಿಸುತ್ತಿದ್ದ. ಅದರ ಮಾಂಸ ಮತ್ತು ಹಾಲು ಅವನ ಆಹಾರದ ಮುಖ್ಯ ಭಾಗಗಳಾಗಿದ್ದುವು. ಭೂಮಂಡಲದ ಮೇಲೆ ಮಾನವ ವಸತಿಗೆ ಯೋಗ್ಯವಾದ ಎಲ್ಲ ಪ್ರದೇಶಗಳಲ್ಲೂ ಕುರಿಸಾಕುವರು. ಅದರಲ್ಲಿಯೂ ಆರ್ಥಿಕ ದೃಷ್ಟಿಯಿಂದ ಮುಂದುವರಿದ ರಾಷ್ಟ್ರಗಳಲ್ಲಿ ಕುರಿಸಂಗೋಪನೆಗೆ ವಿಶೇಷ ಗಮನವನ್ನೀಯ ಎನ್ನಲಾಗುತ್ತಿದೆ. ಕುರಿಯಿಂದ ನಮಗೆ ಉಣ್ಣೆ ದೊರಕುತ್ತದೆ. ಸಾಮಾನ್ಯವಾಗಿ ನಾವು ಮೂವತ್ತೈದು ಕೆಜಿ ತೂಕ ಹೊಂದಿರುವ ಕುರಿಯನ್ನು ನೋಡಿರುತ್ತೇವೆ ಆದರೆ ಅದರ ಚರ್ಮದ ಮೇಲಿನ ಉಣ್ಣೆಯೆ ಮೂವತ್ತು ಕೇಜಿಯ ಮೇಲೆ ಇದೆ ಎಂದರೆ ನಂಬಲು ಅಸಾಧ್ಯ. ಕಾಡಿನಲ್ಲಿ ಕಳೆದುಹೋಗಿ 35 ಕೆಜಿ ಉಣ್ಣೆ ಬೆಳೆಸಿಕೊಂಡಿದ್ದ ಕುರಿಯ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ವಿಚಿತ್ರ ಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಕಾಡುಗಳಲ್ಲಿ ಅಲೆದಾಡುತ್ತಿದ್ದ ಕಾಡು ಕೋರೆಯನು ರಕ್ಷಣೆ ಮಾಡಿ ಆಧಾರದ ಮೇಲೆ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಸುಮಾರು 35 ಕೆಜಿ ಅಷ್ಟು ತೂಕ ಒಂದು ಅದರ ಉಣ್ಣೆಯನ್ನು ತೆಗೆದು ಮುಂದೆ ಬರಬಹುದಾದಂತಹ ಅಪಾಯದಿಂದ ಆ ಕುರಿಯನ್ನು ರಕ್ಷಣೆ ಮಾಡಲಾಗಿದೆ. ಇದರ ಮೈಮೇಲಿದ್ದ ಉಣ್ಣೆ ಒಂದು ವಯಸ್ಕ ಕಾಂಗರೂವಿನ ಅರ್ಧದಷ್ಟು ತೂಕವನ್ನು ಹೊಂದಿದೆ. ಅನೇಕ ವರ್ಷಗಳ ಬಳಿಕ ಆಸ್ಟ್ರೇಲಿಯಾ ಕಾಡಿನಲ್ಲಿ ಈ ಕುರಿ ಕಂಡುಬಂದದಿದೆ. ಹೀಗಾಗಿ ಬರೋಬ್ಬರಿ 35 ಕೆಜಿಯಷ್ಟು ಉಣ್ಣೆಯನ್ನು ಬೆಳೆಸಿಕೊಂಡಿದೆ. ಆಸ್ಟ್ರೇಲಿಯಾದ ಕಾಡೊಂದರಲ್ಲಿ ಸಿಕ್ಕಿರುವ ವಯಸ್ಸಾದ ಕುರಿಯೊಂದನ್ನು ರಕ್ಷಿಸಲಾಗಿದ್ದು, ಅದರ ಮೈಮೇಲೆ ಬೆಳೆದಿದ್ದ ಸುಮಾರು 35 ಕೆಜಿಯಷ್ಟು ಉಣ್ಣೆಯನ್ನು ತೆಗೆದು ಅದರ ದೇಹದ ಭಾರವನ್ನು ಇಳಿಸಲಾಗಿದೆ. ಈ ಕುರಿಗೆ ಬರಾಕ್ ಎಂದು ಹೆಸರು ಇಡಲಾಗಿದೆ. ಕುರಿಗಳು ಉಣ್ಣೆಗೆ ಪ್ರಸಿದ್ಧಿ ಆದರೆ ಈ ಕುರಿ ಮೈಮೇಲೆ ಬೆಳೆದಿದ್ದ ಉಣ್ಣೆಯನ್ನು ನೋಡಿ ಸ್ವತಃ ಅದನ್ನು ರಕ್ಷಿಸಿದ ಜನರೇ ಬೆಚ್ಚಿಬಿದ್ದಿದ್ದಾರೆ. ತನ್ನ ಮೈಮೇಲೆಲ್ಲಾ ಉಣ್ಣೆ ಬೆಳೆಸಿಕೊಂಡಿರುವ ಈ ಕುರಿ ನೋಡಲು ಬೇರೆ ಪ್ರಾಣಿ ರೀತಿ ಕಾಣುತ್ತದೆ.
ಸುಮಾರು ಐದು ವರ್ಷಗಳ ಅನಿಯಂತ್ರಿತ ಬೆಳವಣಿಗೆಯ ಪರಿಣಾಮವಾಗಿ ಇಷ್ಟೊಂದು ತುಪ್ಪಟ ಕುರಿಯಲ್ಲಿ ಬೆಳೆದಿದೆ ಎಂದು ಹೇಳಲಾಗುತ್ತಿದೆ. ವರ್ಷಗಳ ಕಾಲ ಮಣ್ಣು ಮತ್ತು ಗೋಜಲುಗಳ ಅವಶೇಷಗಳಿಂದ ಕೂಡಿದ ಹೊಲಸು ಉಣ್ಣೆಯಲ್ಲಿ ಹೋರಾಟ ಮಾಡಿದ ಈ ಕುರಿ ಆಸ್ಟ್ರೇಲಿಯಾದ ವಿಕ್ಟೋರಿಯನ್ ಸ್ಟೇಟ್ ಅರಣ್ಯದಲ್ಲಿ ಪತ್ತೆಯಾಗಿತ್ತು. ಇದನ್ನು ಮೆಲ್ಬೋರ್ನ್ ನಲ್ಲಿರುವ ಪ್ರಾಣಿ ಪಾರುಗಾಣಿಕಾ ಅಭಯಾರಣ್ಯಕ್ಕೆ ತರಲಾಗಿದೆ. ಮಿಷನ್‌ನ ಕೈಲ್ ಬೆಹ್ರೆಂಡ್ ಪ್ರಕಾರ, ಮೆಲ್ಬೋರ್ನ್‌ನಿಂದ ಉತ್ತರಕ್ಕೆ 60 ಕಿಲೋಮೀಟರ್ ದೂರದಲ್ಲಿರುವ ವಿಕ್ಟೋರಿಯಾದ ಲ್ಯಾನ್ಸ್ ಫೀಲ್ಡ್ ಬಳಿಯ ಎಡ್ಗರ್ಸ್ ಮಿಷನ್ ಫಾರ್ಮ್ ತಾಣದ ಸಿಬ್ಬಂದಿ ಈ ಕುರಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಅಲ್ಲಿರುವ ಇತರ ಕುರಿಗಳೊಂದಿಗೆ ಬರಾಕ್ ಇದೀಗ ನಿವೃತ್ತ ಜೀವನ ನಡೆಸುತ್ತಿದೆ. ಈ ಕುರಿಯನ್ನು ಹಿಂದೆ ಯಾರೋ ಸಾಕುತ್ತಿದ್ದರೆಂದು ತೋರುತ್ತದೆ. ಏಕೆಂದರೆ ಅದರ ಕಿವಿಯ ಮೇಲೆ ಟ್ಯಾಗ್ ಇದೆ ಎಂದು ಬೆಹ್ರೆಂಡ್ ಹೇಳಿದ್ದಾರೆ.
ಕಾಡಿನಲ್ಲಿ ಬಂಡೆಗಳ ಮೇಲೆ ಓಡಾಡುತ್ತಾ ಕೆಲಕಾಲ ಕಳೆದ ಕುರಿಯ ಕಾಲುಗಳು ಬಲಿಷ್ಠವಾಗಿವೆ. ಕಣ್ಣಿನ ಸುತ್ತ ಉಣ್ಣೆ ಬೆಳೆದ ಕಾರಣ ಕುರಿಗೆ ಸರಿಯಾಗಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಕುರಿಗಳ ಉಣ್ಣೆಯನ್ನು ವರ್ಷಕೊಮ್ಮೆಯಾದರೂ ಕತ್ತರಿಸಬೇಕು. ಇಲ್ಲದಿದ್ದರೆ ಅದರ ಮೈಮೇಲೆ ಉಣ್ಣೆ ಬೆಳೆಯುತ್ತಾ ಹೋಗುತ್ತದೆ. ಬರಾಕ್ ನ ಮೈಮೇಲೆ ಬೆಳೆದಿದ್ದ ಎಲ್ಲಾ ಉಣ್ಣೆಯನ್ನು ಕತ್ತರಿಸಿ ತೂಕಕ್ಕೆ ಹಾಕಿದ ಬಳಿಕ ಅದು 35.4 ಕೆಜಿಯಷ್ಟು ತೂಕವಿತ್ತು ಎಂದು ಬೆಹ್ರೆಂಡ್ ಹೇಳಿದ್ದಾರೆ. ಕುರಿಗಳು ನಿಜವಾಗಿಯೂ ಧೈರ್ಯಶಾಲಿ ಪ್ರಾಣಿಗಳಾಗಿವೆ. ನಾವು ಅವುಗಳನ್ನು ಪ್ರೀತಿಸಲು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಕಾಡಿನಲ್ಲಿ ಕಳೆದುಹೋಗಿ ಬರೋಬ್ಬರಿ 35 ಕೆಜಿ ಉಣ್ಣೆ ಬೆಳೆಸಿಕೊಂಡಿದ್ದ ಬರಾಕ್ ಹೆಸರಿನ ಕುರಿಯ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ಈ ಕುರಿಯನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸಾಧನೆಯ ಕಥೆಗಳು ಹಾಗೂ ಸ್ಫೂರ್ತಿಧಾಯಕ ಸ್ಟೋರಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ, ಹಲವು ಬಗೆಯ ವಿಚಾರ ಧಾರೆಗಳನ್ನು ತಿಳಿಯಲು ಮರೆಯದೆ ನಮ್ಮ ಫೇಸ್ಬುಕ್ ನ News Media ಪೇಜ್ ಅನ್ನು ಮರೆಯದೆ ಲೈಕ್ ಮಾಡಿ ನಿಮ್ಮ ಆತ್ಮೀಯರಿಗೂ ಕೂಡ ಈ ವಿಚಾರಗಳನ್ನು ಹಂಚಿಕೊಳ್ಳಿ ಶುಭವಾಗಲಿ