ಜೀವನದಲ್ಲಿ ಸೋತವರಿಗೆ ಸ್ಪೂರ್ತಿ ಈ ಸಾಧಕಿ, ಓದಿ ಇಂಟ್ರೆಸ್ಟಿಂಗ್ ಸ್ಟೋರಿ

0 11

ಸೋಲಿನ ರುಚಿ ನೋಡದೆ ಗೆದ್ದ ಶೂರ ಯಾವನೂ ಇಲ್ಲ. ಸೋಲದೆ ಗೆಲ್ಲಲು ಸಾಧ್ಯವಿಲ್ಲ, ಒಂದು ವೇಳೆ ಗೆದ್ದರೂ ಪ್ರಯೋಜನವಿಲ್ಲ. ಅದಕ್ಕಾಗಿ ಸೋತಾಗ ಅಳುವ ಬದಲು, ಖುಷಿಪಡಿ. ಏಕೆಂದರೆ ಸೋಲೆ ಗೆಲುವಿನ ಮೊದಲ ಮೆಟ್ಟಿಲು. ನೀವು ಸೋತಾಗ ನಿಮ್ಮ ಗೆಲುವಿನ ಪಯಣ ಪ್ರಾರಂಭವಾಗುತ್ತದೆ.ಜೀವನದಲ್ಲಿ ಒಮ್ಮೆಯಾದರೂ ಅವಮಾನ ಆಗಲೇಬೇಕು. ಏಕೆಂದರೆ ಅವಮಾನವನ್ನು ಮಾಡಿಸಿಕೊಳ್ಳದೆ ಸನ್ಮಾನ ಮಾಡಿಸಿಕೊಂಡವರು ಯಾರು ಇಲ್ಲ. ಅವಮಾನವಾದಾಗಲೇ ನಿಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ. ಆತ್ಮಸಾಕ್ಷಿಗೆ ನೋವಾದಾಗಲೇ ನಿಮಲ್ಲಿ ಜವಾಬ್ದಾರಿ ಮೂಡುತ್ತದೆ. ಅವಮಾನವಾದಾಗಲೇ ಸನ್ಮಾನ ಸಿಗುತ್ತದೆ. ಅವಮಾನವಾದಾಗಲೇ ಏನಾದರೂ ಒಂದನ್ನು ಸಾಧಿಸಬೇಕು ಎಂಬ ಕಿಚ್ಚು ಎದೆಯಲ್ಲಿ ಹೊತ್ತಿಕೊಳ್ಳುತ್ತದೆ.

ಜೀವನದಲ್ಲಿ ಆಸೆ, ನೋವು, ನಲಿವು ಮತ್ತು ನೆನಪುಗಳು ಎಲ್ಲವೂ ಇರುತ್ತವೆ. ಜೀವನ ನಾವಂದು ಕೊಂಡಂತೆ ಅಲ್ಲ. ಒಮ್ಮೊಮ್ಮೆ ಇದು ಸರಾಗವಾಗಿ ಸಾಗುತ್ತಿರುವಂತೆ ಕಂಡರು ಅದರ ಅಂತರಾತ್ಮದಲ್ಲಿ ನಮ್ಮಿಂದ ಮತ್ತೇನೋ ಬಯಸುತ್ತಿರುತ್ತದೆ. ನಾವು ಜೀವನೋಪಾಯಕ್ಕಾಗಿ ಏನೆಲ್ಲ ಮಾಡಿದರು ಜೀವನವು ನಮ್ಮಿಂದ ಮತ್ತಷ್ಟು ಅಧಿಕ ಶ್ರಮ, ಸಾಮರ್ಥ್ಯ ಮತ್ತು ಬದ್ಧತೆಯನ್ನು ಬಯಸುತ್ತದೆ.ಜೀವನದಲ್ಲಿ ಯಶಸ್ವಿಯಾಗಬೇಕೆನ್ನುವವರು ಮೊದಲು ತಮ್ಮನ್ನು ತಾವು ನಂಬಬೇಕು. ನಂಬಿಕೆಯಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ಏನನ್ನಾದರು ಸಾಧಿಸಲು ಹೋಗುವಾಗ ಮೊದಲು ಅದು ನಿಮ್ಮಿಂದ ಸಾಧ್ಯ ಎಂದು ನಂಬಿ. ನಂತರ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳುವ ಹಾದಿಯಲ್ಲಿ ಸಾಗಿ.ಸೋಲಿಗೆ ಪ್ರಮುಖ ಕಾರಣ ನಮಗೆ ಏನು ಬೇಕು ಎಂಬುದರ ಕುರಿತಾಗಿ ನಮಗೆ ಸ್ಪಷ್ಟತೆಯಿಲ್ಲದಿರುವುದೇ ಆಗಿರುತ್ತದೆ. ನಮಗೆ ಏನು ಬೇಕು ಎಂಬುದನ್ನು ನಿರ್ಧರಿಸಿಕೊಂಡು ನಾವು ಯಾವ ರಂಗಕ್ಕೆ ಇಳಿದರು ಅಲ್ಲಿ ಜಯ ಕಟ್ಟಿಟ್ಟ ಬುತ್ತಿ. ಇದೇ ಯಶಸ್ಸಿನ ಪ್ರಥಮ ಸೋಪಾನ ಎಂಬುದನ್ನು ಮರೆಯಬಾರದು.ಬಹುತೇಕ ಜನರು ತಮ್ಮ ಕುರಿತಾಗಿ ಜನ ಏನು ಆಲೋಚಿಸುತ್ತಾರೆ ಎಂದು ಯೋಚಿಸಲು ಆರಂಭಿಸುತ್ತಾರೆ. ಇದೇ ಅವರನ್ನು ಯಶಸ್ಸಿನ ಹಾದಿಯಿಂದ ವೈಫಲ್ಯದ ಹಾದಿಗೆ ಕೊಂಡೊಯ್ಯುತ್ತದೆ. ಇದೇ ಜನರು ಜೀವನದಲ್ಲಿ ವಿಫಲವಾಗಲು ಇರುವ ಪ್ರಮುಖ ಕಾರಣವಾಗಿದೆ.

ಇದೆಲ್ಲದರ ನಡುವೆ ಒಬ್ಬ ಹೆಣ್ಣು ಮಗಳು ತನ್ನ ಜೀವನವನ್ನು ನಿರ್ವಹಿಸುವ ಸಲುವಾಗಿ ಕೆಲಸದ ಬಗ್ಗೆ ಯೋಚಿಸಬೇಕಾದರೆ ತನಗೆ ಬರುವ ಅಡುಗೆ ಕಲೆಯನ್ನೆ ಉಪಯೋಗಿಸಿಕೊಂಡು ಜೀವನಕ್ಕೆ ಒಂದು ಹಾದಿ ಕಂಡುಕೊಂಡಿದ್ದಾರೆ. ಪ್ರಸ್ತುತ ಈಕೆ ಅಂಗವೈಫಲ್ಯತೆಯನ್ನು ಎದುರಿಸುತ್ತಿದ್ದು ಆದರೂ ಕುಗ್ಗದೆ ಮೊಬೈಲ್ ಕ್ಯಾಂಟೀನ್ ತೆರೆದು ತಮ್ಮ ಜೀವನವನ್ನು ಸರಿದೂಗಿಸುವಲ್ಲಿ ಮೊದಲಿಗಳಾಗಿದ್ದು, ಇತರ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಸಾಧಕಿಯಾಗಿದ್ದಾಳೆ.

ನಮ್ಮ ಮಧ್ಯೆ ಎಷ್ಟೊಂದು ಜನ ಸೋತು ಗೆದ್ದವರಿದ್ದಾರೆ, ಅವಮಾನಿತರಾಗಿ ಸನ್ಮಾನಿತರಾಗಿದ್ದಾರೆ. ಸೋಲದೆ ಗೆದ್ದವರು, ಅವಮಾನಿತರಾಗದೆ ಸನ್ಮಾನಿಸಿಕೊಂಡವರು ಯಾರು ಇಲ್ಲ. ಅದಕ್ಕಾಗಿ ವಿನಾಕಾರಣ ಕೊರಗುವುದನ್ನು ಬಿಟ್ಟು, ಕೆಲಸ ಮಾಡಿ ಹಾಗೂ ಸಕ್ಸೆಸಫುಲ್ಲಾಗಿ. ಸೋಲಿನಿಂದಲೇ ಗೆಲುವು : ಅವಮಾನದಿಂದಲೇ ಸನ್ಮಾನ ಎಂಬುದನ್ನು ಮರೆಯದಿರಿ.

Leave A Reply

Your email address will not be published.