ಸಿಬ್ಬಂದಿ ನೇಮಕಾತಿಯ ಆಯೋಗದಲ್ಲಿ ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಿಬ್ಬಂದಿ ನೇಮಕಾತಿಯ ವಿವಿಧ ಹುದ್ದೆಗಳ ಅರ್ಜಿಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹುದ್ದೆಗಳು:- ಸಿಬ್ಬಂದಿ ನೇಮಕಾತಿ ಆಯೋಗದಲ್ಲಿ 3 ಹುದ್ದೆಗಳಿವೆ. ಅವುಗಳಲ್ಲಿ ಮೊದಲನೆಯದು ಲೋವರ್ ಡಿವಿಸನ್ ಕ್ಲರ್ಕ್. ಎರಡನೆಯದು ಪೋಸ್ಟಲ್ ಅಸಿಸ್ಟೆಂಟ್. ಮೂರನೆಯದು ಡಾಟಾ ಎಂಟ್ರಿ ಆಪರೇಟರ್ಸ್. ಈ ಮೂರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ:- ಒಟ್ಟಾರೆಯಾಗಿ 6000 ಹುದ್ದೆಗಳಿಗೆ ನೇಮಕಾತಿ ಕರೆಯಲಾಗಿದೆ. ಭಾರತದಲ್ಲಿ ಎಲ್ಲಾ ಕಡೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ವಿದ್ಯಾರ್ಹತೆ :- ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪಿಯುಸಿ ಪಾಸಾಗಿರಲೇಬೇಕು. ಇನ್ನುಳಿದ ಯಾವುದೇ ಪದವಿ ಪಾಸಾಗಿರುವ ಅವಶ್ಯಕತೆ ಇಲ್ಲ.

ವಯೋಮಿತಿ:-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ ಎಂದರೆ 18 ವರ್ಷ ವಯೋಮಿತಿ ಹೊಂದಿರಬೇಕು. ಗರಿಷ್ಠ ಎಂದರೆ 27 ವರ್ಷ ವಯೋಮಿತಿ ಹೊಂದಿರಬೇಕು. ಅದೇ ರೀತಿ ಎಸ್.ಸಿ.ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓ.ಬಿ.ಸಿ. ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪಿ.ಡಬ್ಲ್ಯೂ.ಡಿ. ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ವೇತನ:- ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂಪಾಯಿ 19,900 ರಿಂದ 92,300ರವರೆಗೂ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

ಆಯ್ಕೆಯ ನೇಮಕಾತಿ:- ಇಲ್ಲಿ ಹಲವಾರು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಲಿಖಿತ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ದಿನಾಂಕ:-ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 6-11-2020 ಆಗಿದೆ. ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-12-2020 ಆಗಿದೆ. ಹಾಗೆಯೇ ಶುಲ್ಕ ಪಾವತಿಸಲು ಕೊನೆಯ ದಿನಾಂಕ 17-12-2020 ಆಗಿದೆ.

ಅರ್ಜಿ ಸಲ್ಲಿಸುವ ವಿಧಾನ:- ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಹೋಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. WWW.SSC.nic.in

ಅರ್ಜಿ ಶುಲ್ಕ:-ಎಸ್ಸಿ.ಎಸ್ಟಿ, ಪಿ.ಡಬ್ಲ್ಯೂ.ಡಿ. ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಅಭ್ಯರ್ಥಿಗಳು 100 ರೂಪಾಯಿಗಳನ್ನು ಕಟ್ಟಬೇಕು. ಶುಲ್ಕವನ್ನು ಆನ್ ಲೈನ್ ಮುಖಾಂತರ ಅಥವಾ ಚಲನ್ ಮೂಲಕ ಎಸ್.ಬಿ.ಎ.ನ ಯಾವುದೇ ಶಾಖೆಯಲ್ಲಿ ಅರ್ಜಿ ಶುಲ್ಕ ಪಾವತಿಸಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!