ಪೊಲೀಸರು ದಿನದ 24 ಗಂಟೆಯೂ ಈ ಮರಕ್ಕೆ ರಕ್ಷಣೆ ನೀಡ್ತಿದಾರೆ ಯಾಕೆ ಗೊತ್ತೇ?

0 1

ಪ್ರಮುಖ ವ್ಯಕ್ತಿಗಳಿಗೆ ಭದ್ರತೆ ಒದಗಿಸುವುದು ಸಹಜ ಆದರೆ ಮರಗಳಿಗೆ ಭದ್ರತೆ ಒದಗಿಸುವುದನ್ನು ಕೇಳಿರಲು ಸಾಧ್ಯವೇ ಇಲ್ಲ. ಭೂಪಾಲ್ ನಲ್ಲಿ ಮರವೊಂದಕ್ಕೆ ಭದ್ರತೆ ಒದಗಿಸುತ್ತಾರೆ ಅದು ದಿನದ 24 ಗಂಟೆ. ಈ ಮರ ಯಾವುದು, ಅದರ ವಿಶೇಷತೆ ಏನು ಹಾಗೂ ಅದರ ಹಿನ್ನಲೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಸಾಮಾನ್ಯವಾಗಿ ದೇಶದ ಪ್ರಧಾನಿ ಸೇರಿದಂತೆ ಕೆಲವು ಆಯ್ದ ಗಣ್ಯ ವ್ಯಕ್ತಿಗಳಿಗೆ ಭದ್ರತೆ ಕೊಡುವುದನ್ನು ನೋಡಿರುತ್ತೇವೆ. ಇನ್ನು ಕೆಲವೊಂದು ಐತಿಹಾಸಿಕ ಸ್ಥಳಗಳಿಗೂ ಸಹ ಕೆಲವು ಸಮಯದಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಮಾಡುವುದನ್ನು ನೋಡಿರುತ್ತೇವೆ. ಆದರೆ ಮರವೊಂದಕ್ಕೆ ಪ್ರತಿದಿನ, ದಿನದ 24 ಗಂಟೆಯೂ ಭದ್ರತೆ ಕೊಡಲಾಗುತ್ತದೆ. ಇದು ಕೇಳಲು ವಿಚಿತ್ರ ಅನಿಸಿದರೂ ಸತ್ಯವಾಗಿದೆ. ಮಧ್ಯಪ್ರದೇಶದ ರಾಜಧಾನಿ ಭೂಪಾಲ್ ನಲ್ಲಿ ಸಾಲಮತ್ಪುರ್ ಎಂಬ ಬೆಟ್ಟದ ಸ್ಥಳದಲ್ಲಿ ಇರುವ ವಿಶೇಷ ಮರಕ್ಕೆ 24 ಗಂಟೆ ಭದ್ರತೆ ಒದಗಿಸಲಾಗುತ್ತದೆ. ಈ ಮರ ವಿಶೇಷವಾದ ಮರವಾಗಿದೆ, ಈ ವಿಶೇಷ ಮರವನ್ನು ನೆಟ್ಟಿರುವುದು ಶ್ರೀಲಂಕಾದ ಮಾಜಿ ಅಧ್ಯಕ್ಷರಾಗಿರುವ ಮಹೇಂದ್ರ ರಾಜಪಕ್ಸೆ. ಅವರು ಮಧ್ಯಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಈ ಸ್ಥಳಕ್ಕೆ ಭೇಟಿ ಕೊಟ್ಟಿದ್ದು ಅಲ್ಲದೇ ತಾವೇ ಸ್ವತಃ ಈ ಮರವನ್ನ ನೆಟ್ಟಿದ್ದರು.

ಈ ಮರದ ವಿಶೇಷವೆಂದರೆ ಭಗವಾನ್ ಬುದ್ದನಿಗೆ ಜ್ಞಾನೋದಯವಾಗಿದ್ದು ಭೋದಿ ವೃಕ್ಷದ ಕೆಳಗೆ, ಈ ಮರ ಕೂಡ ಭೋದಿವೃಕ್ಷದ ಕೊಂಬೆಯಿಂದ ಬೆಳೆದಿರುವಂತದ್ದು. ಅಷ್ಟೆ ಅಲ್ಲದೆ ಈ ವಿಶೇಷ ಮರದ ಹಿಂದೆ ರೋಚಕ ಕತೆ ಕೂಡ ಇದೆ. ಈ ಬೋಧಿವೃಕ್ಷದ ಕೊಂಬೆಯೊಂದನ್ನು ಮೂರನೇ ಶತಮಾನದಲ್ಲಿ ಭಾರತದಿಂದ ಶ್ರೀಲಂಕಾಕ್ಕೆ ತೆಗೆದುಕೊಂಡು ಹೋಗಿದ್ದು ಅನುರಾಧಪುರದಲ್ಲಿ ನೆಡಲಾಗಿತ್ತು. ಈ ಮರ ಭೋದಿ ವೃಕ್ಷದ ಕೊಂಬೆಯದ್ದೇ ಎಂದು ಹೇಳಲಾಗಿದ್ದು, ಇದನ್ನು ಮಹೇಂದ್ರ ರಾಜಪಕ್ಸೆ ಅವರು ನೆಟ್ಟಿದ್ದರಿಂದ ಅದಕ್ಕೆ ವಿಐಪಿ ಸ್ಥಾನ ನೀಡಲಾಗಿದ್ದು ಭದ್ರತೆ ಒದಗಿಸಲಾಗಿದೆ. ಈ ವಿಶೇಷ ಮರದ ಭದ್ರತೆಗಾಗಿ 12 ಲಕ್ಷದವರೆಗೆ ಖರ್ಚಾಗುತ್ತದೆ ಎಂದು ಹೇಳಲಾಗಿದೆ. ಈ ಮರವನ್ನು ನೋಡುವ ಸಲುವಾಗಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಬರುತ್ತಿರುತ್ತಾರೆ. ಮರವನ್ನು ರಕ್ಷಣೆ ಮಾಡುವ ಸಲುವಾಗಿ ಭದ್ರತಾ ಸಿಬ್ಬಂದಿಯ ಜೊತೆಗೆ ಮರದ ಸುತ್ತ ಕಬ್ಬಿಣದ ಜಾಲರಿಯನ್ನು ಕಾಂಪೌಂಡ್ ರೀತಿ ನಿರ್ಮಿಸಲಾಗಿದೆ. ಮರದ ಬೆಳವಣಿಗೆಗಾಗಿ ವಿಶೇಷ ಕಾಳಜಿ ವಹಿಸಿರುವ ಜಿಲ್ಲಾಡಳಿತ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿದ್ದು ಸರಿಯಾದ ಸಮಯಕ್ಕೆ ಈ ಮರಕ್ಕೆ ನೀರು, ಗೊಬ್ಬರದ ವ್ಯವಸ್ಥೆಯನ್ನು ಕೂಡ ಸರ್ಕಾರ ಮಾಡಿದೆ. ಬಹಳ ವಿಶೇಷ ಮಹತ್ವವಿರುವ ಮತ್ತು ಬಹಳ ಪ್ರಾಚೀನವಾದ ಈ ಮರವನ್ನು ಎಲ್ಲಾ ರೀತಿಯಿಂದ ಸಂರಕ್ಷಣೆ ಮಾಡಲಾಗುತ್ತಿದೆ. ನಿಸರ್ಗದ ಬಗ್ಗೆ ಇರುವ ಕಾಳಜಿಯನ್ನು ಮೆಚ್ಚಲೇಬೇಕು.

Leave A Reply

Your email address will not be published.