2024 ರಲ್ಲಿ ಈ 5 ರಾಶಿಯವರಿಗೆ ರಾಜಯೋಗ ಇನ್ನೂ ಇವರನ್ನ ತಡೆಯೊರೆ ಇಲ್ಲ

0 18,271

2024ರಲ್ಲಿ ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಧೀರ್ಘ ಅವಧಿ ಕಾಲ ಒಂದೇ ರಾಶಿಯಲ್ಲಿ ಇರುವ ಗ್ರಹಗಳ ಆಧಾರದ ಮೇಲೆ 12 ರಾಶಿಗಳ ಗೋಚರ ಫಲಗಳು ಗೋಚರ ಆಗುತ್ತದೆ. ಶನಿ ಗ್ರಹ ಒಂದೇ ರಾಶಿಯಲ್ಲಿ ಎರಡು ವರ್ಷ ಆರೂ ತಿಂಗಳ ಕಾಲ ಸಂಚಾರ ಮಾಡುತ್ತದೆ. ರಾಹು ಮತ್ತು ಕೇತು ಗ್ರಹ 18 ತಿಂಗಳ ಕಾಲ ಒಂದೇ ರಾಶಿಯಲ್ಲಿ ಸಂಚಾರ ಮಾಡುತ್ತವೆ. ಗುರು ಗ್ರಹ ಒಂದು ರಾಶಿಯಲ್ಲಿ ಒಂದು ವರ್ಷಗಳ ಕಾಲ ಸಂಚಾರ ಮಾಡುತ್ತದೆ.

ಶನಿ ಗ್ರಹ ಜನವರಿ ತಿಂಗಳಿಂದ ಡಿಸೆಂಬರ್ ತಿಂಗಳವರೆಗೂ ಕುಂಭ ರಾಶಿಯಲ್ಲಿ ಇರುವನು, ರಾಹು ಗ್ರಹ ಈ ವರ್ಷ ಪೂರ್ತಿ ಮೀನ ರಾಶಿಯಲ್ಲಿ ಇರುವನು, ಕೇತು ಗ್ರಹ ವರ್ಷ ಪೂರಾ ಕನ್ಯಾ ರಾಶಿಯಲ್ಲಿ ಇರುವನು ಮತ್ತು ಗುರು ಗ್ರಹ ಏಪ್ರಿಲ್ ತಿಂಗಳವರೆಗೂ ಮೇಷ ರಾಶಿಯಲ್ಲಿ ಇರುವನು ಮೇ ತಿಂಗಳಿಗೆ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಡಿಸೆಂಬರ್ ತಿಂಗಳವರೆಗೂ ಅದೇ ಗ್ರಹದಲ್ಲಿ ಇರುವನು. 2024ರಲ್ಲಿ 5 ರಾಶಿಗಳಿಗೆ ಈ ವರ್ಷ ಹೆಚ್ಚು ಶುಭ ಫಲ ದೊರಕುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವವು ಮತ್ತು ಯಾವ ರೀತಿಯ ಫಲಗಳು ಲಭಿಸುತ್ತವೆ ಎಂದು ತಿಳಿಯೋಣ.

ಮೇಷ ರಾಶಿ :- 2023ರಲ್ಲಿ ಹೆಚ್ಚು ಸಾಂಸಾರಿಕ ಜೀವನದಲ್ಲಿ ತೊಂದರೆಗಳನ್ನು ಅನುಭವಿಸಿರುವರು, ಹಣ ಕನಸಿನ ವಿಚಾರದಲ್ಲಿ ಹೆಚ್ಚು ತೊಂದರೆ ತಾಪತ್ರಯಗಳು ಎದುರಾದವು. ಇದು ಗುರು ಮತ್ತು ರಾಹು ಗ್ರಹ ಒಂದೇ ಮನೆಯಲ್ಲಿ ಇದ್ದರ ಪರಿಣಾಮ. 2024ರಲ್ಲಿ ರಾಹು ಗ್ರಹ 12ನೇ ಮನೆಗೆ ಹೋಗುವ ಕಾರಣ ಮತ್ತು ಕೇತು ದೃಷ್ಟಿ ದೂರವಾದ ಕಾರಣ. ವೈವಾಹಿಕ ಮತ್ತು ಸಾಂಸಾರಿಕ ಜೀವನ ಮೆಲ್ಲಗೆ ಸರಿಯಾಗುತ್ತದೆ. ಗುರು ಗ್ರಹ ತಿಳುವಳಿಕೆ ನೀಡುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಪ್ರಾಪ್ತಿಯಾಗುತ್ತದೆ ಮತ್ತು ಮನೆಯಲ್ಲಿ ಶುಭ ಸಮಾರಂಭ ನೆರವೇರಲಿದೆ. ದೈವ ಕಾರ್ಯಗಳು ಕೂಡ ನಡೆಯುತ್ತವೆ. ಹಣ ಕಾಸಿನ ಸ್ಥಿತಿ ಹೆಚ್ಚು ಉತ್ತಮವಾಗಿ ಇರುತ್ತದೆ. ಹಣ ಹೂಡಿಕೆ ಮಾಡಿ ಇಷ್ಟು ವರ್ಷ ಸಿಗದ ಲಾಭ ಈ ವರ್ಷ ಪಡೆಯುವ ಸಾಧ್ಯತೆ ಇರುತ್ತದೆ.

ವಿಧ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಿ ಪ್ರಗತಿ ಸಾಧಿಸಲು ಸಾಧ್ಯವಿದೆ. ಹೆಚ್ಚಿನ ವ್ಯಾಸಂಗ ಮಾಡಲು ವಿದೇಶಕ್ಕೆ ಹೋಗುವ ಯೋಗ ಪ್ರಾಪ್ತಿಯಾಗುತ್ತದೆ. ವಿದೇಶ ಪ್ರಯಾಣ ವಿಧ್ಯಾಭ್ಯಾಸ, ವೃತ್ತಿ ಅಥವಾ ಇತರೆ ಕೆಲಸಗಳಿಗೆ ವಿದೇಶಕ್ಕೆ ಹೋಗುವ ಯೋಗ ಹೆಚ್ಚಾಗಿ ಇರುತ್ತದೆ. ಮೇ ತಿಂಗಳಿನಿಂದ ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ. ವೃತ್ತಿಯಲ್ಲಿ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇರುತ್ತದೆ. ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. ಯಾವ ರೀತಿಯ ಕೆಲಸಕ್ಕೆ ಕೈ ಹಾಕಿದ್ದರು ಅದಕ್ಕೆ ತಕ್ಕಂತೆ ಉತ್ತಮ ಫಲ ಹಾಗೂ ಹೆಚ್ಚು ಯಶಸ್ಸು ಖಂಡಿತ ಸಿಗುತ್ತದೆ. ಇದೆಲ್ಲಾ ಗುರು ಗ್ರಹದ ಬಲದಿಂದ ಸಾಧ್ಯವಾಗುತ್ತದೆ.

ವೃಷಭ ರಾಶಿ :- 2024ರಲ್ಲಿ ಹೆಚ್ಚು ಶುಭ ಫಲ ಸಿಗುತ್ತದೆ ವೃಷಭ ರಾಶಿಗೆ. ಅನಿರೀಕ್ಷಿತ ಅಭಿವೃದ್ದಿ ಸಿಗುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ತರುತ್ತದೆ. ಸ್ವಯಂ ಉದ್ಯೋಗ ಮಾಡುವ ಜನರಿಗೆ ಒಳ್ಳೆ ಯೋಗ ಪ್ರಾಪ್ತಿಯಾಗುತ್ತದೆ.ಹಣ ಕಾಸಿನ ವಿಷಯದಲ್ಲಿ ಪ್ರಗತಿ ಸಿಗುತ್ತದೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಸಾಧ್ಯತೆ ಇರುತ್ತದೆ. ವಿವಾಹ ಯೋಗ ಪ್ರಾಪ್ತಿಯಾಗುತ್ತದೆ, ಕೆಲಸದ ನಿಮಿತ್ತ ಬೇರೆ ದೇಶಕ್ಕೆ ಹೋಗುವ ಅವಕಾಶ ಒದಗಿಸುತ್ತದೆ. ಆತ್ಮಜ್ಞಾನವನ್ನು ಅಭಿವೃದ್ದಿ ಮಾಡುತ್ತದೆ ಗುರು ಗ್ರಹ. ಅಧ್ಯಾತ್ಮದ ಬಗ್ಗೆ ಹೆಚ್ಚಿನ ಜ್ಞಾನ ಈ ವರ್ಷ ಸಿಗುತ್ತದೆ ವೃಷಭ ರಾಶಿಯವರಿಗೆ. ಧಾನ ಮಾಡುವ ವ್ಯಕ್ತಿಗಳಿಗೆ ಹೆಚ್ಚು ಜ್ಞಾನ ಸಿದ್ಧಿಯಾಗುತ್ತದೆ. ಕೋಟಿ ಜಪ ಒಂದು ಧ್ಯಾನಕ್ಕೆ ಸಮ ಧ್ಯಾನದಿಂದ ಹೆಚ್ಚು ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ.

ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ ಮತ್ತು ನಿರ್ವಿಘ್ನವಾಗಿ ನಡೆಯುತ್ತದೆ. ಈ ವರ್ಷ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ ವೃಷಭ ರಾಶಿಯವರಿಗೆ. ಆದಾಯ ಗಳಿಕೆ ಹೆಚ್ಚಾಗುತ್ತದೆ ಖರ್ಚು ವೆಚ್ಚ ಕೂಡ ಕಡಿಮೆಯಾಗಿ ಉಳಿತಾಯ ಮಾಡುವ ಸಾಧ್ಯತೆ ಇದೆ. ಸಂತಾನ ಭಾಗ್ಯ ಪ್ರಾಪ್ತಿಯಾಗುವುದು. ಮಕ್ಕಳಿಂದ ದೂರವಾದ ವೃದ್ಧರು ಹಾಗೂ ಅವರ ನಡುವೆ ಇರುವ ಮನಸ್ತಾಪಗಳು ಎಲ್ಲಾ ದೂರವಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.

ಸಿಂಹ ರಾಶಿ :-ದೈವ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ. ಶುಭ ಕಾರ್ಯಕ್ಕೆ ಇದ್ದ ಎಲ್ಲಾ ತೊಡಕುಗಳು ದೂರವಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಪ್ರಾಪ್ತಿಯಾಗುತ್ತದೆ.  ಸಂತಾನ ಭಾಗ್ಯ ಕೂಡ ಸಿದ್ಧಿಯಾಗುತ್ತದೆ. ಉನ್ನತ ವ್ಯಾಸಂಗ ಮಾಡುವ ಮತ್ತು ಒಳ್ಳೆ ಅಂಕ ಗಳಿಸಿ ಪ್ರಗತಿ ಸಾಧಿಸುವ ಸಾಧ್ಯತೆ ಇರುತ್ತದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ದೈವ ಬಲದಿಂದ ಎಲ್ಲಾ ಸಾಧಿಸುವ ಸಾಮರ್ಥ್ಯ ಬರುತ್ತದೆ.

ದೇವರ ಕೃಪೆಯಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಯಾವುದೇ ರೀತಿಯ ದೃಷ್ಟಿ ದೋಷಗಳು ಇದ್ದರು ದೂರ ಆಗುತ್ತದೆ. 8ನೇ ಮನೆಯಲ್ಲಿ ರಾಹು ಗ್ರಹದ ಪ್ರಭಾವ ಇರುವ ಕಾರಣ ಹಣ ಕಾಸಿನ ವಿಷಯದಲ್ಲಿ ಖರ್ಚು ವೆಚ್ಚ ಹೆಚ್ಚಾಗುತ್ತದೆ. ಜಂಟಿ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಇಷ್ಟು ವರ್ಷ ನಕಾರಾತ್ಮಕವಾಗಿ ಇದ್ದ ಯೋಚನೆ ಇನ್ನು ಸಕರಾತ್ಮಕವಾಗಿ ಪರಿವರ್ತನೆ ಆಗುತ್ತದೆ. ಕೆಲಸದಲ್ಲಿ ಹೆಚ್ಚು ನ್ಯಾಯ ಸಿಗುತ್ತದೆ. ಮೇ ತಿಂಗಳಿನಿಂದ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ. ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇರುತ್ತದೆ. ಗೌರವ ಸನ್ಮಾನ ಎಲ್ಲಾ ವೃತ್ತಿಯಲ್ಲಿ ಪ್ರಾಪ್ತಿಯಾಗುತ್ತದೆ. ಸಹನೆ ಮತ್ತು ತಾಳ್ಮೆ ಹೆಚ್ಚು ತೆಗೆದುಕೊಳ್ಳಬೇಕು ಅದರಿಂದ ಅತ್ಮ ಗೌರವ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ದೊರಕುವುದು. ಹೊಸ ಮನೆ ಕಟ್ಟುವುದು, ವಾಹನ ಖರೀದಿ, ಭೂಮಿ ಖರೀದಿ ಎಲ್ಲಾ ಮಾಡುವ ಸಾಧ್ಯತೆ ಇರುತ್ತದೆ. ಕಾನೂನಿನ ವಿಚಾರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.

ಕನ್ಯಾ ರಾಶಿ :-ಕೇತು ಗ್ರಹದ ಪ್ರಭಾವದಿಂದ ಕನ್ಯಾ ರಾಶಿಯಲ್ಲಿ ಇರುವ ಜನರಿಗೆ ತಾಳ್ಮೆ ಹೆಚ್ಚಾಗುತ್ತದೆ. ಅಧ್ಯಾತ್ಮದ ವಿಚಾರ, ಪೂಜೆ ಪುನಸ್ಕಾರ, ಆಚಾರ ವಿಚಾರಗಳು ಎಲ್ಲಾ ಒಳಗೊಂಡಂತೆ ದೇವರ ಮೇಲೆ ಭಕ್ತಿ ಹೆಚ್ಚಾಗುತ್ತದೆ. ಈ ವರ್ಷ ಪ್ರಯಾಣ ಹೆಚ್ಚಾಗುತ್ತದೆ. ಬೇರೆ ಬೇರೆ ರಾಜ್ಯಗಳಿಗೆ, ದೇಶಗಳಿಗೆ ಪ್ರಯಾಣ ಮಾಡುವ ಅವಕಾಶ ಹೆಚ್ಚಾಗಿ ಇರುತ್ತದೆ ಅದು ವೃತ್ತಿ ಸಲುವಾಗಿ, ವಿಧ್ಯಾಭ್ಯಾಸದ ನಿಮಿತ್ತ ಅಥವಾ ಇತರೆ ಕೆಲಸಗಳಿಗೆ ವಿದೇಶಕ್ಕೆ ಹೋಗುವ ಅವಕಾಶ ಒದಗಿ ಬರುವ ಸಾಧ್ಯತೆ ಇದೆ. ಈ ವರ್ಷ ಪೂರಾ ಹೆಚ್ಚು ಕೆಲಸದಲ್ಲಿ ತೊಡಗಿಕೊಂಡು ದುಡಿಮೆಯನ್ನು ಮಾಡುವರು ಜೊತೆಗೆ ಹೆಚ್ಚುವರಿ ಕೆಲಸವನ್ನು ಮಾಡಿ ಸಂಪಾದನೆ ಮಾಡುವ ಅವಕಾಶ ಹೆಚ್ಚಾಗಿ ಇರುತ್ತದೆ ಇದರಿಂದ ಅರ್ಥಿಕ ಸ್ಥಿತಿ ಹೆಚ್ಚು ಸುಧಾರಿಸುತ್ತದೆ.

ಋಣಾತ್ಮಕ ಆಲೋಚನೆಗಳಿಂದ ದೂರ ಉಳಿಯಬೇಕು ಎಂದರೆ ಮಿದುಳಿಗೆ ಸದಾ ಕೆಲಸ ಕೊಡಬೇಕು. ಮಾತಿನಿಂದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವ ಸಾಮರ್ಥ್ಯ ಇರುತ್ತದೆ ಸಿಂಹ ರಾಶಿಯವರಿಗೆ. ಏಪ್ರಿಲ್ ತಿಂಗಳು ಕಳೆದ ನಂತರ ಕಂಕಣ ಭಾಗ್ಯ ಕೂಡಿ ಬರುತ್ತದೆ. ಸಂತಾನ ಭಾಗ್ಯ ಕೂಡ ಸಿದ್ಧಿಯಾಗುತ್ತದೆ ಈ ವರ್ಷ ಕನ್ಯಾ ರಾಶಿಯವರಿಗೆ. ವ್ಯಾಸಂಗದಲ್ಲಿ ಏಕಾಗ್ರತೆ ಹೆಚ್ಚಾಗಿ ಒಳ್ಳೆ ಉನ್ನತ ಸ್ಥಾನ ಸಿಗುತ್ತದೆ. ಹೆಚ್ಚಿನ ವ್ಯಾಸಂಗ ಮಾಡಲು ವಿದೇಶಕ್ಕೆ ಹೋಗುವ ಅವಕಾಶ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇದು ಸಕಾಲ. ಕೇತು ಗ್ರಹದ ಮೇಲೆ ಗುರು ಗ್ರಹದ ದೃಷ್ಟಿ ಬಿದ್ದರೆ ಆಧ್ಯಾತ್ಮದಲ್ಲಿ ಹೆಚ್ಚಿನ ಸಾಧನೆ ಮಾಡುವ ಅವಕಾಶ ಇರುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನ ಸಿಗುತ್ತದೆ, ಹೊಸ ಪ್ರೊಜೆಕ್ಟ್ ಕೈ ಸೇರುವುದು ಮತ್ತು ಯಶಸ್ಸು ಸಿಗುತ್ತದೆ.

ವೃಶ್ಚಿಕ ರಾಶಿ :-ಉದ್ಯೋಗದಲ್ಲಿ ಪ್ರಗತಿ ಸಿಗುತ್ತದೆ. ಗುರು ಗ್ರಹ ಹೆಚ್ಚಿನ ಗೌರವವನ್ನು ತಂದು ಕೊಡುತ್ತದೆ. ಸೈಟ್ ಖರೀದಿ ಮಾಡುವುದು, ಮನೆ ಖರೀದಿ ಮಾಡುವುದಕ್ಕೆ ಶನಿ ಗ್ರಹ ಸಹಾಯ ಮಾಡುತ್ತದೆ. ಉದ್ಯೋಗದಲ್ಲಿ ಸ್ಥಿರತೆ ಕಾಣುವ ಸಾಧ್ಯತೆ ಇದೆ ವೃಶ್ಚಿಕ ರಾಶಿಯವರಿಗೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಹಣ ಕಾಸಿನ ಸಮಸ್ಯೆ ದೂರವಾಗುತ್ತದೆ. ಸಾಲ ಪಡೆದವರು ಹಣವನ್ನು ಮರಳಿಸಿ ಕೊಡುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ಈ ವರ್ಷ ಲಗ್ನ ಕೂಡಿ ಬರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ. ಸಂತಾನ ಭಾಗ್ಯವೂ ಕೂಡ ಪ್ರಾಪ್ತಿಯಾಗುತ್ತದೆ. ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ. ಹಿಂದಿನ ತಲೆಮಾರಿನ ಆಸ್ತಿಯಲ್ಲಿ ತಕರಾರು ಇದ್ದರು ಅದು ಈ ವರ್ಷ ಎಲ್ಲಾ ಸರಿಯಾಗಿ ಆಸ್ತಿ ಲಾಭ ತರುತ್ತದೆ. ವಿಧ್ಯಾರ್ಥಿಗಳಿಗೆ ಪ್ರಗತಿ ಸಾಧಿಸುವ ಸಾಧ್ಯತೆ ಇರುತ್ತದೆ.

ವ್ಯಾಸಂಗದ ವಿಚಾರವಾಗಿ ಬೇರೆ ರಾಜ್ಯ ಅಥವಾ ದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಈ ವರ್ಷ ಎಲ್ಲಾ ರೀತಿಯ ಶುಭ ಫಲ ದೊರಕುತ್ತದೆ. ಕುಟುಂಬ ಜೀವನ ಸುಖಕರವಾಗಿ ಇರುತ್ತದೆ. ಮೇಲಿನ ಎಲ್ಲಾ ರಾಶಿಯವರಿಗೆ 2024ರಲ್ಲಿ ಹೆಚ್ಚು ಮಂಗಳಕರ ಫಲಗಳು ಸಿದ್ಧಿಸುತ್ತವೆ. ಇವು ಕೇವಲ ಗೋಚಾರ ಫಲಗಳು ಅಷ್ಟೇ ಇದಕ್ಕೆ ಮತ್ತು ಜನ್ಮ ಜಾತಕಕ್ಕೆ ಯಾವುದೇ ಸಂಬಂಧ ಇರುವುದಿಲ್ಲ.

Leave A Reply

Your email address will not be published.