ಗಣೇಶ ಎಲ್ಲಾ ವಿಘ್ನಗಳನ್ನು ನಿವಾರಿಸುವ ದೈವ ಆದ್ದರಿಂದ ಅವನಿಗೆ ಪ್ರಥಮ ಪೂಜೆ. ಗಣಪತಿ ದಯೆ ಇದ್ದರೆ ಯಶಸ್ಸು ಮತ್ತು ಸಂಪತ್ತು ಸಿದ್ಧಿಯಾಗುತ್ತದೆ.  ಗಣಪ ಎಲ್ಲದಕ್ಕೂ ಅಧಿನಾಯಕ. ಗೌರಿ ತನಯನಿಗೆ ಎಲ್ಲಾ 12 ರಾಶಿಗಳ ಮೇಲೆ ಹೆಚ್ಚು ಪ್ರೀತಿ ಇರುತ್ತದೆ ಆದರೆ ಈ ನಾಲ್ಕು ರಾಶಿಗಳ ಮೇಲೆ ಹೆಚ್ಚು ಅಚ್ಚು ಮೆಚ್ಚು. ಯಾವುದು ಆ ಅದೃಷ್ಟವಂತ ರಾಶಿಗಳು ಎಂದು ನೋಡೋಣ.

ಮೇಷ ರಾಶಿ :-ಈ ರಾಶಿಯನ್ನು ಮಂಗಳ ಗ್ರಹ ಆಳುತ್ತದೆ ಆ ಗ್ರಹ ಧೈರ್ಯ ಮತ್ತು ಆತ್ಮವಿಶ್ವಾಸ ಕೊಡುತ್ತದೆ.  ಗಣೇಶನ ಕೃಪೆ ಸದಾ ಕಾಲ ಇರುತ್ತದೆ.  ಕಠಿಣವಾದ ಕೆಲಸವನ್ನು ಅತಿ ಸುಲಭವಾಗಿ ಮಾಡುವರು. ಈ ರಾಶಿಯವರು ಪ್ರತಿ ದಿನ ಗಣೇಶನ ಪೂಜೆ ಮಾಡಬೇಕು ಅದರಿಂದ ಒಳ್ಳೆಯ ಫಲ ಸಿಗುತ್ತದೆ. ಗಣೇಶನಿಗೆ ಮೇಷ ರಾಶಿ ಹೆಚ್ಚು ಪ್ರಿಯವಾದ ರಾಶಿ.

ಮಿಥುನ ರಾಶಿ :-ಮಿಥುನ ರಾಶಿಯನ್ನು ಬುಧ ಗ್ರಹ ಆಳುತ್ತದೆ ಅದರಿಂದ ವ್ಯಾಪಾರ ಸಮ್ಮೋಹನ ಮತ್ತು ಬುದ್ದಿವಂತಿಕೆ ದೊರಕುತ್ತದೆ. ಈ ರಾಶಿಯವರು ಮಾನಸಿಕವಾಗಿ ಹೆಚ್ಚು ಚುರುಕಾಗಿ ಇರುವರು. ಯಾವ ಕೆಲಸಕ್ಕೆ ಕೈ ಹಾಕಿದರು ಯಶಸ್ಸು ಸಿಗುತ್ತದೆ. ಗಣೇಶನ ಕೃಪೆಯಿಂದ ಹೆಚ್ಚು ಪ್ರಖ್ಯಾತಿ ಪಡೆಯುವರು, ಮತ್ತು ಪ್ರಗತಿ ಹೊಂದುವರು. ಪ್ರತಿ ಬುಧವಾರ ಗಣೇಶನ ಪ್ರಾರ್ಥನೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಕನ್ಯಾ ರಾಶಿ :-ಕನ್ಯಾ ರಾಶಿಯ ಜನರಿಗೆ ಗಣಪತಿಯ ವಿಶೇಷ ಅನುಗ್ರಹ ಸಿಗುತ್ತದೆ. ಬುಧ ಗ್ರಹ ಕನ್ಯಾ ರಾಶಿಯನ್ನು ಆಳುತ್ತದೆ. ಗ್ರಹದ ಬಲದಿಂದ ಬುದ್ದಿವಂತಿಕೆ ಮತ್ತು ಅದೃಷ್ಟ ಪಡೆಯುವರು.ಈ ರಾಶಿಯವರು ಬುದ್ದಿವಂತಿಕೆಯಿಂದ ಉನ್ನತ ಸ್ಥಾನ ಪಡೆಯುವರು. ಗಣೇಶನ ದಯೆಯಿಂದ ಕೆಲಸದಲ್ಲಿ ಯಾವ ತೊಡಕುಗಳು ಎದುರಾಗುವುದಿಲ್ಲ. ಅದರಿಂದ ಅವರಿಗೆ ಗೆಲುವಿನ ಮೆಟ್ಟಿಲು ಏರಲು ಸುಲಭವಾಗುತ್ತದೆ.

ಮಕರ ರಾಶಿ :-ಮಕರ ರಾಶಿಯ ಮಂದಿ ಕಠಿಣ ಪರಿಶ್ರಮ ಮತ್ತು ಮುಕ್ತ ಮನಸ್ಸು ಉಳ್ಳವರು. ಅವರ ಮನಸ್ಸು ಹೆಚ್ಚು ದೃಢವಾಗಿ ಇರುತ್ತದೆ. ಗಣೇಶನ ಜೊತೆಗೆ ಶನಿ ಗ್ರಹದ ಆಶೀರ್ವಾದ ಇರುವ ಕಾರಣ ಅವರ ಕಾರ್ಯಗಳು ಸುಗಮವಾಗಿ ನಡೆಯುತ್ತದೆ. ಉತ್ತಮ ಫಲಗಳನ್ನು ಪಡೆಯುವರು ವ್ಯಾಪಾರ ಮತ್ತು ವ್ಯವಹಾರಗಳಲ್ಲಿ. ಈ ರಾಶಿಯವರು ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಗಳಿಕೆ ಮಾಡುವರು.

ಪ್ರತಿನಿತ್ಯ ಗಣೇಶನ ಪ್ರಾರ್ಥನೆ ಮಾಡುವುದು ಉತ್ತಮ ಲಾಭ ತರುತ್ತದೆ ಎಲ್ಲರ ಬದುಕಿಗೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೇಲೆ ತಿಳಿಸಿರುವ ಮೇಷ ರಾಶಿ, ಕನ್ಯಾ ರಾಶಿ, ಮಿಥುನ ರಾಶಿ ಹಾಗೂ ಮಕರ ರಾಶಿ ವಿನಾಯಕನಿಗೆ ಹೆಚ್ಚು ಪ್ರಿಯ.

By

Leave a Reply

Your email address will not be published. Required fields are marked *