2024ರಲ್ಲಿ ಈ ಒಂದು ವರ್ಷಗಳ ಕಾಲ ಈ ಮೂರು ರಾಶಿಗಳ ಮೇಲೆ ಗುರು ಗ್ರಹದ ಬಲ ಇರುತ್ತದೆ. ಯಾವುದು ಆ ಅದೃಷ್ಟವಂತ ರಾಶಿಗಳು, ಏನೇನು ಫಲ ಸಿಗುತ್ತದೆ ಎಂದು ನೋಡೋಣ.

ಮೇ 1ದರಿಂದ, ಗುರು ಗ್ರಹ ವೃಷಭ ರಾಶಿಯಲ್ಲಿ ಸಂಚಾರ ಶುರು ಮಾಡುತ್ತದೆ, ಇದು 3 ರಾಶಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಯಾವ ರಾಶಿಯವರಿಗೆ ಮುಂದಿನ ಒಂದು ವರ್ಷದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಯಶಸ್ಸು ಲಭಿಸಲಿದೆ?, ಯಾವ ರಾಶಿಯ ವ್ಯಕ್ತಿಗಳಿಗೆ ಮದುವೆಯಾಗುವ ಯೋಗ ಇದೆ ಎಂದು ತಿಳಿಯೋಣ.

ಗ್ರಹಗಳ ಸಂಚಾರವು ಜನರ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಒಂದು ಪ್ರಮುಖ ಗ್ರಹವು ಒಂದು ರಾಶಿ ಚಿಹ್ನೆಯಿಂದ ಇನ್ನೊಂದಕ್ಕೆ ಸಂಚಾರ ಮಾಡುವುದರಿಂದ ಅನೇಕ ರಾಶಿಯ ವ್ಯಕ್ತಿಗಳ ಅದೃಷ್ಟ ಬದಲಾಗುತ್ತದೆ. ಈ ಬಾರಿ ಕೂಡ ಗುರು ಗ್ರಹದ ದೊಡ್ಡ ಸಂಚಾರ ಮೇ ತಿಂಗಳಿನಲ್ಲಿ ಆರಂಭ ಆಗುತ್ತದೆ. ಇದರಿಂದಾಗಿ, ಕೆಲವು ರಾಶಿಯ ವ್ಯಕ್ತಿಗಳ ಹಣೆಬರಹ ಕೂಡ ಸಂಪೂರ್ಣವಾಗಿ ಬದಲಾಗಬಹುದು. ಈ ಜನರು ಮುಂದಿನ ವರ್ಷದ ವೇಳೆಗೆ ನಿರೀಕ್ಷೆ ಮಾಡಿದ ಜಯವನ್ನು ಪಡೆಯಬಹುದು ಮತ್ತು ಹಣಕಾಸಿನ ವಿಚಾರಗಳಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು.

ಗುರುವು 2024ರ ಮೇ 1ದರಂದು ಮಧ್ಯಾಹ್ನ 12.58ರವರೆಗೆ ಮೇಷ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಇದರ ನಂತರ, ಗುರು ಮೇಷ ರಾಶಿಯಿಂದ ಹೊರಬಂದು ವೃಷಭ ರಾಶಿಯ ಪ್ರವೇಶ ಮಾಡುವನು. ಗುರು ಅಕ್ಟೋಬರ್ 9 ರಂದು ಸ್ವಲ್ಪ ಹಿಮ್ಮುಖನಾಗುತ್ತಾನೆ ಮತ್ತು 2025ರ ಫೆಬ್ರವರಿ 4 ರಂದು ನೇರವಾಗಿ ಚಲಿಸುತ್ತಾನೆ. ಒಟ್ಟಾರೆಯಾಗಿ, ಈ ಸಂಚಾರವು ಮೇ 1ದರಂದು ಆರಂಭವಾಗುತ್ತದೆ ಮತ್ತು ಸುಮಾರು ಒಂದು ವರ್ಷದವರೆಗೆ ಇರುತ್ತದೆ.

ಈ ಸಂಚಾರವು ಕೆಲವು ರಾಶಿ ಚಿಹ್ನೆಗಳಿಗೆ ಸಿರಿವಂತಿಕೆ ಮತ್ತು ಮಾಡುವ ಎಲ್ಲಾ ಕೆಲಸಗಳಲ್ಲಿ ಗೆಲುವು ತರುತ್ತದೆ. ಆ ಅದೃಷ್ಟದ ರಾಶಿಗಳ ಬಗ್ಗೆ ನೋಡೋಣ.

ಈ ಗುರು ಗ್ರಹದ ಅದೃಷ್ಟ :- ಕಟಕ ರಾಶಿ, ಸಿಂಹ ರಾಶಿ ಮತ್ತು ಕನ್ಯಾ ರಾಶಿಯ ಜನರಿಗೆ ಗುರುವಿನ ಸಂಚಾರ ತುಂಬ ಅದೃಷ್ಟವನ್ನು ಉಂಟು ಮಾಡುತ್ತದೆ. ಈ ಜನರ ಅದೃಷ್ಟದ ನಕ್ಷತ್ರಗಳು ಮೇ 1ದರಿಂದ ಪ್ರಜ್ವಲಿಸುತ್ತದೆ. ಈ ರಾಶಿಯ ವ್ಯಕ್ತಿಗಳಿಗೆ ಗುರು ಸಂಚಾರದ ಸಂಪೂರ್ಣ ಸಮಯ ಅದೃಷ್ಟ ತರುತ್ತದೆ ಮತ್ತು ಆದಾಯದ ಮೂಲಗಳು ಹೆಚ್ಚಾಗುತ್ತವೆ. ಆದಾಯವು ಹೆಚ್ಚಾಗುವುದರಿಂದ ಆರ್ಥಿಕ ಪರಿಸ್ಥಿತಿ ವೃದ್ಧಿ ಆಗುತ್ತದೆ.

ಗುರುವಿನ ಪ್ರಭಾವದಿಂದ, ಈ 3 ರಾಶಿಯವರಿಗೆ ಉದ್ಯೋಗದ ಹುಡುಕಾಟವು ಪೂರ್ಣಗೊಳ್ಳುತ್ತದೆ ಮತ್ತು ಪ್ರಗತಿಗೆ ಉತ್ತಮ ಅವಕಾಶಗಳು ದೊರಕುವುದು. ಇವರು ಕಷ್ಟಪಟ್ಟು ಕೆಲಸ ಮಾಡಿದರೆ, ಈ ಜನರು ಸರ್ಕಾರಿ ಉದ್ಯೋಗಗಳಲ್ಲಿ ಕೂಡ ಗೆಲುವು ಕಾಣಬಹುದು.

ಈ ರಾಶಿಯವರಿಗೆ ಒಂದು ವರ್ಷದಲ್ಲಿ ಮದುವೆ ಯೋಗ ಕೂಡಿ ಬರುತ್ತದೆ. ಗುರು ಗ್ರಹದ ಸಂಚಾರವು ಮದುವೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಗುರು ಗ್ರಹ 5, 7 ಮತ್ತು 11ನೇ ಮನೆಗೆ ಸಂಬಂಧಿಸಿರುವ ರಾಶಿಗಳ ಜನರ ಮದುವೆ ಪ್ರಯತ್ನಗಳು ಯಶಸ್ವಿ ಆಗುತ್ತದೆ ಮತ್ತು ಅವರು ಬಯಸಿದ ಪ್ರೀತಿಯನ್ನು ಸಹ ಪಡೆಯುತ್ತಾರೆ.

ಗುರುವಿನ ಸಂಚಾರದಿಂದ, ಮಿಥುನ ರಾಶಿ, ಕಟಕ ರಾಶಿ, ತುಲಾ ರಾಶಿ ಮತ್ತು ವೃಶ್ಚಿಕ ರಾಶಿಯವರ ಮದುವೆ ಕೂಡ ನಡೆಯಬಹುದು. ದೀರ್ಘಕಾಲದಿಂದ ಮದುವೆಗಾಗಿ ಪ್ರಯತ್ನ ನಡೆಸುತ್ತಿರುವ ವ್ಯಕ್ತಿಗಳ ವಿವಾಹಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ಪಡೆಯುತ್ತಾರೆ.

ಆದರು ಕೆಲವು ರಾಶಿಯ ವ್ಯಕ್ತಿಗಳ ಪ್ರೀತಿಯ ಜೀವನ ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ನೋಡಬಹುದು. ವೃಷಭ ರಾಶಿ, ತುಲಾ ರಾಶಿ ಮತ್ತು ಧನು ರಾಶಿಯವರ ಪ್ರೀತಿಯ ಜೀವನ ಮತ್ತು ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಕೂಡ. ಉಂಟಾಗುವ ಸಾಧ್ಯತೆ ಇದೆ. ಗುರು ಸಂಚಾರದಿಂದ ಮೇಲೆ ಹೇಳಿರುವ ಕೆಲವು ರಾಶಿಯವರ ಅದೃಷ್ಟ ಬದಲಾಗುತ್ತದೆ. ಬದುಕನ್ನು ಬಂದ ಹಾಗೆ ಸ್ವೀಕಾರ ಮಾಡಬೇಕು, ದೇವರ ಅಪ್ಪಣೆಯಂತೆ ಎಲ್ಲಾ ನಡೆಯುವ ಕಾಲಕ್ಕೆ ಖಂಡಿದ ನಡೆಯುತ್ತದೆ ಅದಕ್ಕೆ ಈ ಗ್ರಹಗಳ ಸಹಕಾರ ಕೂಡ ಇರುತ್ತದೆ.

Leave a Reply

Your email address will not be published. Required fields are marked *