100 ಕ್ಕೂ ಹೆಚ್ಚು ಸಿನಿಮಾ ಮಾಡಿರುವ ಈಗಲೂ ಯಂಗ್ ಆಗಿ ಕಾಣುವ ರಮೇಶ್ ಅರವಿಂದ್ ಅವರ ಕುಟುಂಬದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ರಮೇಶ್ ಅರವಿಂದ್ ಅವರು 1990 ರ ಕಾಲದಲ್ಲಿ ಕನ್ನಡದ ಟಾಪ್ ನಟ ಆಗಿದ್ದರು. ಇವರು ಹುಟ್ಟಿದ್ದು ತಮಿಳುನಾಡಿನ ಕುಂಭಕೋಣಂನಲ್ಲಿ. ಇವರ ಮಾತೃಭಾಷೆ ತಮಿಳು. ಇವರು ತಮಿಳಿಯನ್ ಆಗಿದ್ದರು ತಾನೊಬ್ಬ ಪಕ್ಕ ಕನ್ನಡಿಗ ಎಂದು ಸುಮಾರು ಬಾರಿ ಹೇಳಿಕೊಂಡಿದ್ದಾರೆ ಇದು ಸಂತೋಷದ ವಿಷಯವಾಗಿದೆ. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ತಮ್ಮ ವ್ಯಾಸಂಗ ಮುಗಿಸಿಕೊಂಡ ಇವರು ಸುಂದರ ಸ್ವಪ್ನಗಳು ಎಂಬ ಚಿತ್ರದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈಗ ಅವರು 100ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇವರ ಹೆಂಡತಿಯ ಹೆಸರು ಅರ್ಚನಾ ಇವರದು ಲವ್ ಕಮ್ ಆರೆಂಜ್ ಮ್ಯಾರೇಜ್. ಅರ್ಚನಾ ಅವರ ಮಾತೃಭಾಷೆ ಹಿಂದಿ ಇವರಿಗೆ ಕನ್ನಡ ಅಂದರೆ ಬಹಳ ಅಭಿಮಾನ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ನಿಹಾರಿಕಾ ಹಾಗೂ ಅರ್ಜುನ್. ಅರ್ಜುನ ರಮೇಶ್ ಅವರಿಗೆ ಮೀಡಿಯಾ ಕಂಡರೆ ಇಷ್ಟವಿಲ್ಲವಂತೆ. ಹೀಗಾಗಿ ಅವರು ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ಈಗ ಡಿಗ್ರಿ ಮುಗಿಸಿದ್ದು. ಸ್ವಂತ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ರಮೇಶ್ ಅರವಿಂದ್ ಅವರಿಗೆ ಮಕ್ಕಳೆಂದರೆ ಪಂಚಪ್ರಾಣ. ಹೆಚ್ಚು ಸಮಯ ಮಕ್ಕಳೊಂದಿಗೆ ಕಳೆಯುತ್ತಾರೆ. ರಮೇಶ್ ಅರವಿಂದ್ ಅವರು ತಮ್ಮ ಮಕ್ಕಳಿಗೆ ನಿಮಗೆ ಯಾವುದೇ ಸಮಸ್ಯೆ, ಕಷ್ಟವಿರಲಿ ಮೊದಲು ನನ್ನ ಜೊತೆ ಶೇರ್ ಮಾಡಿಕೊಳ್ಳಿ ನಾನು ಎಲ್ಲೆ ಇದ್ದರೂ ನಿಮಗಾಗಿ ಬರುತ್ತೇನೆ ಎಂದು ಹೇಳಿದ್ದಾರೆ. ತಂದೆಯೆಂದರೆ ರಮೇಶ್ ಅರವಿಂದ್ ಅವರಂತೆ ಇರಬೇಕು ಎಂದು ಹೇಳಿದರೆ ತಪ್ಪಾಗಲಾರದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!