ಹಲವು ಅಡೆ ತಡೆಗಳ ನಡುವೆ ಹುಚ್ಚ ಸಿನಿಮಾ ಶೂಟಿಂಗ್ ಹೇಗಾಯಿತು ಹಾಗೂ ಅದರ ಬಗ್ಗೆ ಹಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ
ಸೇತು ಸಿನಿಮಾವನ್ನು ಬಿಡುಗಡೆ ಮಾಡಿದಾಗ ರೆಹಮಾನ್ ಅವರು ನೋಡಿ ಅವರಿಗೆ ಹಿಡಿಸಿತು ನಂತರ ಹುಚ್ಚ ಸಿನಿಮಾದ ರೈಟ್ಸ್ ನ್ನು ರೆಹಮಾನ್ ಅವರು ತೆಗೆದುಕೊಂಡು ಶಿವಣ್ಣ ಅವರನ್ನು ಹೀರೊ ಆಗಲು ಕೇಳಿದಾಗ ಕ್ಯಾಸೆಟ್ ನೋಡಿ ಗೀತಾ ಅವರು ಒಪ್ಪಲಿಲ್ಲ. ನಂತರ ಉಪೇಂದ್ರ ಅವರ ಬಳಿ ಹೋದಾಗ ಅವರು ಮೊದಲು ಒಪ್ಪಿಕೊಂಡು ಹುಚ್ಚ ಎನ್ನುವ ಟೈಟಲ್ ಕೇಳಿದ ಕೂಡಲೇ ನಿರಾಕರಿಸಿದರು. ನಂತರ ರೆಹಮಾನ್ ಅವರ ಮನೆಯಲ್ಲಿ ಸುದೀಪ್ ಅವರನ್ನು ಈ ಸಿನಿಮಾಕ್ಕೆ ಹೀರೊ ಮಾಡಬಹುದು ಎಂದು ಹೇಳಿದಾಗ ರೆಹಮಾನ್ ಮೊದಲು ಸುಮ್ಮನಿದ್ದು ನಂತರ ಅಚಾನಕ್ ಆಗಿ ಸುದೀಪ್ ಅವರ ತಂದೆ ಸಿಕ್ಕಾಗ ಈ ಸಿನಿಮಾದ ಬಗ್ಗೆ ಹೇಳುತ್ತಾರೆ ಇದಕ್ಕೆ ಸುದೀಪ್ ಅವರು ಒಪ್ಪುತ್ತಾರೆ. ರೆಹಮಾನ್ ಅವರಿಗೆ ಎಸ್. ಮಹೇಂದರ್ ಅವರ ನಿರ್ದೇಶನದಲ್ಲಿ ಹುಚ್ಚ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಆದರೆ ಸುದೀಪ್ ಅವರು ಓಂ ಪ್ರಕಾಶ್ ಬಗ್ಗೆ ಹೇಳಿದಾಗ ರೆಹಮಾನ್ ಅವರು ನೋಡೋಣ ಎಂದು ಹೇಳಿ ಸಿನಿಮಾ ಬೇಡವೆಂದು ಊರಿಗೆ ಹೋದರು ಅಲ್ಲಿಗೆ ಹೋಗಿ ಸುದೀಪ್ ಅವರು ಎಸ್.ಮಹೇಂದರ ನಿರ್ದೇಶನದಲ್ಲಿ ಸಿನಿಮಾ ಮಾಡೋಣವೆಂದು ರೆಹಮಾನ್ ಅವರನ್ನು ಒಪ್ಪಿಸುತ್ತಾರೆ. ನಂತರ ಓಂ ಪ್ರಕಾಶ್ ಅವರೆ ನಿರ್ದೇಶನ ಮಾಡುತ್ತಾರೆ. ಚಿತ್ರದುರ್ಗ, ಸಾಗರ, ಮಾರಿಕಣಿವೆಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಹೀರೋಯಿನ್, ಆರ್ಟಿಸ್ಟ್ ರೆಹಮಾನ್ ಅವರೆ ಆಯ್ಕೆಮಾಡುತ್ತಾರೆ .
ಆನಂದ ಆಡಿಯೋ ಸಂಗೀತ ನೀಡಿದರು ಈ ಸಿನಿಮಾದ ಉಸಿರೆ ಸಾಂಗ್ ಸೂಪರ್ ಹಿಟ್ ಆಗಿದೆ. ಶೂಟಿಂಗ್ ಸಮಯದಲ್ಲಿ ಜೇನುನೊಣಗಳಿಂದ ಕ್ಯಾಮರಾಮೆನ್ ಮತ್ತಿಬ್ಬರು ಕಚ್ಚಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಅದರಲ್ಲಿ ಕರುಣಾಕರ್ ಎನ್ನುವವರು ಹಾರ್ಟ್ ಅಟ್ಯಾಕ್ ನಿಂದ ಆಸ್ಪತ್ರೆಯಲ್ಲಿ ಸಾಯುತ್ತಾನೆ. ನಂತರ ಸಿನಿಮಾ ಬಿಡುಗಡೆ ಮಾಡಲಾಯಿತು ರೆಹಮಾನ್ ಅವರು ಇದು ಪ್ಲಾಪ್ ಆಗುತ್ತದೆ ಎಂದು ಅಂದುಕೊಂಡಿದ್ದರು ಆದರೆ ಭರ್ಜರಿ ಜಯವನ್ನು ತಂದುಕೊಟ್ಟಿತು. ನಂತರ ಹಲವು ಸಿನಿಮಾ ಮಾಡಿದರು ಮದುವೆ ಮನೆ ಸಿನಿಮಾದಿಂದ ಸೋತ ರೆಹಮಾನ್ ಅವರು ಸಿನಿಮಾ ಮಾಡಿರಲಿಲ್ಲ. ಈಗ ಬಂದಿರುವ ಕೊರೋನ ಫಿಲ್ಮ್ ಇಂಡಸ್ಟ್ರಿಗೆ ಭಾರಿ ಹೊಡೆತವನ್ನು ನೀಡಿದೆ ಎಂದು ತಮ್ಮ ಅಭಿಪ್ರಾಯವನ್ನು ರೆಹಮಾನ್ ಅವರು ಹೇಳಿದರು.