ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ಇವರ ಪತ್ನಿಯರು ಕೂಡ ಫೇಮಸ್ ನಟಿಯರು, ವಿಡಿಯೋ ನೋಡಿ.

0 0

ವಿಲನ್ ಪಾತ್ರದಲ್ಲಿ ನಟಿಸುತ್ತಿರುವವರ ಹೆಂಡತಿಯರು ಫೇಮಸ್ ನಟಿಯರಾಗಿದ್ದಾರೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ರಘು ವರನ್ ಅವರು ಒಂದು ಕಾಲದಲ್ಲಿ ಮೋಸ್ಟ್ ಪವರ್ ಫುಲ್ ಹಾಗೂ ಜನರಲ್ಲಿ ಭಯ ಹುಟ್ಟಿಸುತ್ತಿದ್ದ ವಿಲನ್ ಇವರ ಹೆಂಡತಿ ರೋಹಿಣಿ ಅವರು ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ 90 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಪ್ರಸಿದ್ಧ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅವಿನಾಶ್ ಕನ್ನಡದ ನಟ ಅವರ ಹೆಂಡತಿ ಮಾಳವಿಕಾ ಪ್ರಸಿದ್ಧ ನಟಿ. ಅಥುಲ್ ಕುಲಕರ್ಣಿ ತನ್ನ ನೈಜ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಇವರ ಹೆಂಡತಿ ಗೀತಾಂಜಲಿ 4 ಭಾಷೆಗಳಲ್ಲಿ ನಟಿಸಿದ್ದಾರೆ ಅಲ್ಲದೇ ಒಂದು ಕಾಲದಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆಶೀಷ್ ವಿಧ್ಯಾರ್ಥಿ ಅವರು ದಕ್ಷಿಣ ಭಾರತದ ಟಾಪ್ ವಿಲನ್ ರಲ್ಲಿ ಒಬ್ಬರು. ಇವರ ಹೆಂಡತಿ ರಾಜುಶಿ ವಿಧ್ಯಾರ್ಥಿ ಇವರು ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಧಾರಾವಾಹಿ ಹಾಗೂ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.

ವಿಜು ಮೆನನ್ ಹ್ಯಾಂಡ್ ಸಮ್ ವಿಲನ್ ಆಗಿರುವ ಇವರು ದಕ್ಷಿಣ ಭಾರತದ ನೆಗೆಟಿವ್ ರೋಲನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇವರ ಹೆಂಡತಿ ಸಂಯುಕ್ತ ವರ್ಮಾ ಮಲಯಾಳಿ ಚಿತ್ರರಂಗದಲ್ಲಿ ಪ್ರಸಿದ್ಧ ನಟಿ ಅಲ್ಲದೆ ಉತ್ತಮ ನಟಿಯೆಂಬ ಎರಡು ಸ್ಟೇಟ್ ಅವಾರ್ಡ್ ಪಡೆದುಕೊಂಡಿದ್ದಾರೆ. ಮುರುಳಿ ಶರ್ಮಾ ವಿಭಿನ್ನ ಮಾತಿನ ಶೈಲಿ ಹಾಗೂ ಅದ್ಭುತ ನಟನೆಯ ಮೂಲಕ ಬೇಡಿಕೆಯ ವಿಲನ್ ಆಗಿ ಗುರುತಿಸಿಕೊಂಡಿದ್ದಾರೆ. ಇವರ ಪತ್ನಿಯ ಹೆಸರು ಅಶ್ವಿನಿ ಹಿಂದಿಯಲ್ಲಿ ಹೆಸರು ಮಾಡಿದ ನಟಿ. ನಟ ಅಜಯ್ ಕನ್ನಡದಲ್ಲೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು ಈಗಲೂ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಇವರ ಪತ್ನಿಯ ಹೆಸರು ಶ್ವೇತ ಕೆಲವು ಚಿತ್ರದಲ್ಲಿ ನಟಿಸಿದ್ದು ಅಲ್ಲದೆ ಮಿಸ್ಸೆಸ್ ಇಂಡಿಯಾ ವರ್ಲ್ಡ್ ವೈಡ್ ಬ್ಯೂಟಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಆಶಿತೋಷ ರಾಣಾ ಹಿಂದಿ ಹಾಗೂ ದಕ್ಷಿಣ ಭಾರತದಲ್ಲೂ ವಿಲನ್ ಆಗಿ ಫೇಮಸ್ ಆಗಿದ್ದಾರೆ. ಇವರ ಪತ್ನಿ ರೇಣುಕಾ ಅವರು ಹಿಂದಿ ಹಾಗೂ ಇತರೆ ಭಾಷೆಗಳಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದವರು. ಗಂಡ ಹೆಂಡತಿ ಸ್ಟಾರ್ ಗಳಾಗಿದ್ದರು ಇಗೋ ಇಲ್ಲದೆ ಹೊಂದಿಕೊಂಡು ಹೋಗುತ್ತಿದ್ದಾರೆ ಇವರಿಗೆ ಮೆಚ್ಚುಗೆ ಸಲ್ಲಿಸಲೆಬೇಕು.

Leave A Reply

Your email address will not be published.