ಏನಾದರೂ ಹೊಸ ಬಿಸ್ನೆಸ್ ಮಾಡಬೇಕು ಎಂದು ಇರುವವರಿಗೆ ಜಿಯೋ ಕಡೆಯಿಂದ ಒಂದು ಹೊಸ ಅವಕಾಶವನ್ನು ನೀಡಲಾಗಿದೆ. ಅದೇನೆಂದರೆ ಜಿಯೋ ಮಾರ್ಟ್ ಸೆಲ್ಲರ್ ಆಪರ್ಚುನಿಟಿ. ಜಿಯೋ ಕಂಪನಿ ಆನ್ಲೈನ್ ನಲ್ಲಿ ಈ ಕಾಮರ್ಸ್ ವೆಬ್ಸೈಟ್ ಅನ್ನು ಬಿಡುಗಡೆ ಮಾಡುತ್ತಿದೆ. ಇದು ಈಗಾಗಲೇ ಬಿಡುಗಡೆ ಆಗಿದ್ದು ತಪಾಸಣೆಯಲ್ಲಿ ಇದೆ. ಜಿಯೋ ಮಾರ್ಟ್ ಇನ್ನೂ ಬೀಟಾ ವರ್ಷನ್ ಅಲ್ಲಿ ಇದೆ. ಏನಿದು ಜಿಯೋ ಮಾರ್ಟ್ ಅಂದ್ರೆ? ಅನ್ನೋ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತೆ. ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಜಿಯೋ ಮಾರ್ಟ್ ಇದು ಆನ್ಲೈನ್ ನಲ್ಲಿ ಕಿರಾಣಿ ವಸ್ತುಗಳನ್ನು ಮಾರಾಟ ಮಾಡುವುದಾಗಿದೆ. ನಮಗೆ ಪ್ರತೀ ದಿನ ಬಳಕೆಗೆ ಬೇಕಾಗಿರುವ ಸೋಪ್, ಪೇಸ್ಟ್, ಅಕ್ಕಿ, ಸಕ್ಕರೆ ಮುಂತಾದ ಕಿರಾಣಿ ಸಾಮಗ್ರಿಗಳನ್ನು ಹೀಗೆ ಮನೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಆನ್ಲೈನ್ ಮೂಲಕ ಮಾರಾಟ ಮಾಡುವುದು. ಈಗಾಗಲೇ ಬಿಗ್ ಬಾಸ್ಕೆಟ್ ಮತ್ತು ಗ್ರೋ ಫೋರ್ಸ್ ಅಂತಹ ಆನ್ಲೈನ್ ಸೌಲಭ್ಯಗಳು ಲಭ್ಯವಿದ್ದು ಇದರಲ್ಲಿ ಆರ್ಡರ್ ಮಾಡಿದರೆ ನಮಗೆ ಬಂದು ತಲುಪುವುದಕ್ಕೆ ಎರಡು ಮೂರು ದಿನ ಆದರೂ ಬೇಕಾಗುತ್ತದೆ. ಆದರೆ ಜಿಯೋ ಮಾರ್ಟ್ ನಲ್ಲಿ ಹಾಗಿಲ್ಲ. ಜಿಯೋ ಮಾರ್ಟ್ ಭಾರತದ ಎಲ್ಲಾ ಕಿರಾಣಿ ಅಂಗಡಿಗಳಿಗೆ ಸಹ ಲೈಸೆನ್ಸ್ ನೀಡಿದೆ. ಇದರಿಂದ ಯಾರಾದರೂ ಗ್ರಾಹಕರು ಆನ್ಲೈನ್ ನಲ್ಲಿ ಏನಾದರೂ ಆರ್ಡರ್ ಮಾಡಿದ್ದರೆ, ಅವರು ಇರುವ ಏರಿಯಾದಲ್ಲಿ ಇರುವಂತಹ ಯಾವ ಕಿರಾಣಿ ಅಂಗಡಿ ರಿಜಿಸ್ಟರ್ ಆಗುತ್ತದೋ ಅವರಿಗೆ ಜಿಯೋ ಮಾರ್ಟ್ ಕಡೆಯಿಂದ ಮೆಸೇಜ್ ಹೋಗುತ್ತದೆ. ಆರ್ಡರ್ ತಲುಪಿದ ತಕ್ಷಣ ಅವರು ಗ್ರಾಹಕರು ಆರ್ಡರ್ ಮಾಡಿದ ಎಲ್ಲಾ ವಸ್ತುಗಳನ್ನು ಸರಿಯಾಗಿ ನೀಟ್ ಆಗಿ ಪ್ಯಾಕ್ ಮಾಡಿ ಇಡಬೇಕು. ನಂತರ ಡೆಲಿವರಿ ಬಾಯ್ ಬಂದು ಅವುಗಳನ್ನು ತೆಗೆದುಕೊಂಡು ಹೋಗಿ ಗ್ರಾಹಕರಿಗೆ ನೀಡುತ್ತಾನೆ. ಈ ರೀತಿಯಾಗಿ ಜಿಯೋ ಮಾರ್ಟ್ ಮೂಲಕ ಕಿರಾಣಿ ಅಂಗಡಿಗಳು ಇರುವವರು ಗ್ರಾಹಕರಿಗೆ ಮನೆಯ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಬಹುದು. ಇದರಿಂದ ನಿಮ್ಮ ಬಿಸ್ನೆಸ್ ಕೂಡಾ ಬೆಳವಣಿಗೆ ಹೊಂದುತ್ತದೆ.
ಜಿಯೋ ಮಾರ್ಟ್ ನಲ್ಲಿ ರಜಿಷ್ಟರ್ ಮಾಡಿಸಲು ಜಿಯೋ ಯಾವುದೇ ರೀತಿಯ ಅಫೀಷಿಯಲ್ ಲಿಂಕ್ ಕಳುಹಿಸಿಲ್ಲ ಅಥವಾ ಯಾವುದೇ ಅನೌಂಸ್ಮೆಂಟ್ ಕೂಡಾ ಮಾಡಿಲ್ಲ. ಏಕೆಂದರೆ ಇದಿನ್ನೂ ಸಂಪೂರ್ಣವಾಗಿಲ್ಲ ಇನ್ನೂ ತಪಾಸಣೆಯಲ್ಲಿ ಇದೆ. ಆನ್ಲೈನ್ ನಲ್ಲಿ ಜಿಯೋ ಮಾರ್ಟ್ ಅಂತ ಚೆಕ್ ಮಾಡಬಹುದು. ಜಿಯೋ ಮಾರ್ಟ್ ವೆಬ್ಸೈಟ್ ಇನ್ನೂ ಬೀಟಾ ವರ್ಷನ್ ಅಲ್ಲಿ ಇದೆ. ಇದರ ತಪಾಸಣೆ ಒಮ್ಮೆ ಸಂಪೂರ್ಣವಾಗಿ ಮುಗಿದ ನಂತರ, ಜಿಯೋ ಕಂಪನಿ ತನ್ನ ಅಫೀಷಿಯಲ್ ಲಿಂಕ್ ಮತ್ತು ಅನೌಂಸ್ಮೆಂಟ್ ಮಾಡುತ್ತದೆ. ಆದರೂ ಸ್ವಲ್ಪ ಹುಷಾರಾಗಿ ಇರುವುದು ಒಳ್ಳೆಯದು. ಜಿಯೋ ಮಾರ್ಟ್ ಹೆಸರಿನಲ್ಲಿ ಫೇಕ್ ವೆಬ್ಸೈಟ್ ಅಥವಾ ಲಿಂಕ್ ಗಳು ಇರಬಹುದು. ಯಾವುದೇ ಕಾರಣಕ್ಕೂ ಅಲ್ಲಿ ನಿಮ್ಮ ಹೆಸರು ರಿಜಿಸ್ಟರ್ ಮಾಡಿಸಿ ಯಾವುದೇ ದಾಖಲೆಗಳನ್ನೂ ನೀಡಬೇಡಿ. ಜಿಯೋ ಕಂಪನಿ ಇನ್ನೂ ತಾನೇ ಸ್ವತಃ ಅನೌನ್ಸ್ ಮಾಡಿಲ್ಲ. ಆದರೆ ಯಾವುದೇ ಸಮಯದಲ್ಲಿ ಆದರೂ ಅನೌನ್ಸ್ ಮಾಡಬಹುದು. ಹಾಗಾಗಿ ಬೇಕಾದ ಎಲ್ಲಾ ದಾಖಲೆಗಳನ್ನೂ ಸಿದ್ಧವಾಗಿ ಇಟ್ಟುಕೊಳ್ಳಬೇಕು.
ಬೇಕಾಗಿರುವ ದಾಖಲೆಗಳು ಎನು ಅಂತ ನೋಡುವುದಾದರೆ ಶಾಪ್ ರಿಜಿಸ್ಟ್ರೇಷನ್ ಲೈಸೆನ್ಸ್, GST ಲೈಸೆನ್ಸ್, ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಇವುಗಳು ಯಾವಾಗಲೂ ರೆಡಿ ಇರಬೇಕು. ಜಿಯೋ ಮಾರ್ಟ್ ಬಗ್ಗೆ ಕಂಪನಿ ಅನೌನ್ಸ್ ಮಾಡಿದ ತಕ್ಷಣ ಈ ದಾಖಲೆಗಳನ್ನು ಇಟ್ಟುಕೊಂಡು ರಜೀಸ್ಟರ್ ಮಾಡಿಕೊಳ್ಳಬೇಕು. ಮೊದಲು ರಿಜಿಸ್ಟರ್ ಆಗಿ ಲೈಸೆನ್ಸ್ ತೆಗೆದುಕೊಂಡವರಿಗೆ ಒಳ್ಳೆಯ ಬಿಸ್ನೆಸ್ ಮತ್ತು ಆದಾಯ ದೊರೆಯುತ್ತದೆ. ಈ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳದೆ ಯಾರೆಲ್ಲ ಕಿರಾಣಿ ಅಂಗಡಿ ಇಟ್ಟಿರುತ್ತೀರೋ ಅವರೆಲ್ಲ ಸರಿಯಾದ ರೀತಿಯಲ್ಲಿ ಇದರ ಪ್ರಯೋಜನ ಪಡೆದುಕೊಂಡು ಜನರಿಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮ ಆದಾಯವನ್ನೂ ಕೂಡಾ ಹೆಚ್ಚಿಸಿಕೊಳ್ಳಬಹುದು.