ನಿರೂಪಕಿ ಅನುಶ್ರೀ ಎಂದರೆ ಯಾರಿಗೆ ತಾನೆ ಪರಿಚಯವಿಲ್ಲ ಯಾರಿಗೆ ತಾನೇ ಇಷ್ಟ ಇಲ್ಲ?? ಮೈಕ್ ಹಿಡಿದು ಸ್ಟೇಜ್ ಹತ್ತಿದರೆ ಸಾಕು ಇವರು ನಿರರ್ಗಳವಾಗಿ ಕನ್ನಡ ಮಾತನಾಡಬಲ್ಲರು. ಜೀ ಕನ್ನಡದ ಸರಿಗಮಪ ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ಗಳಲ್ಲಿ ಹಾಗೂ ಬೇರೆ ಇನ್ಯಾವುದೇ ಶೋ ಗಳಲ್ಲಿ ಯಾವುದೇ ಭಯ ಇಲ್ಲದೆಯೇ ಸರಾಗವಾಗಿ ಎಲ್ಲಿಯೂ ತಪ್ಪದೆ ಅಚ್ಚುಕಟ್ಟಾಗಿ ಕನ್ನಡ ಮಾತನಾಡುವ ಜಾಣ್ಮೆ ಇವರಲ್ಲಿದೆ. ಸ್ಟೇಜ್ ಮೇಲೆ ಸಮಯಕ್ಕೆ ತಕ್ಕಂತೆ ಮಾತುಗಳನ್ನು ಜೋಡಿಸಿಕೊಂಡು ನಿರೂಪಣೆ ಮಾಡುವ ಅನುಶ್ರೀ ಅವರು ರಾಜ್ಯದ ನಂಬರ್ 1 ನಿರೂಪಕಿ ಎನ್ನುವ ಹೆಸರು ಗಳಿಸಿಕೊಂಡು ಬಂದಿದ್ದಾರೆ ಎಂದರೆ ಅವರ ಈ ಸಾಧನೆಯ ಹಿಂದೆ ಎಷ್ಟು ಪರಿಶ್ರಮವಿರಬಹುದು? ಇನ್ನು ಲಾಕ್ಡೌನ್ ನಿಂದಾಗಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಎಲ್ಲಾ ಕಡೆ ಜಿಮ್ ಬಂದಾಗಿದೆ. ಸದ್ಯಕ್ಕೆ ಜಿಮ್ ಗಳು ತೆಗೆಯುವ ಸಾಧ್ಯತೆ ಇಲ್ಲ. ಫಿಟ್ನೆಸ್ ಬಗ್ಗೆ ಹೆಚ್ಚಾಗಿ ಆಸಕ್ತಿ ತೋರುವ ಅನುಶ್ರೀ ಜಿಮ್ ಮರೆತು ಮನೆಯಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಅನುಶ್ರೀ ಈಗ ಯಾವುದೇ ರಿಯಾಲಿಟಿ ಶೋಗಳ ನಿರೂಪಣೆ ಇಲ್ಲದೆ ಇರುವುದರಿಂದ ಮನೆಯಲ್ಲಿ ಸೇಫ್ ಆಗಿ ಇದ್ದಾರೆ.

ಮನೆಯಲ್ಲಿ ವರ್ಕೌಟ್ ಕೂಡ ಮಾಡುತ್ತ ತನ್ನ ತಮ್ಮನಿಗೂ ಸಹ ವ್ಯಾಯಾಮ ಹೇಳಿಕೊಡುತ್ತಿದ್ದಾರೆ. ತಾವು ತಮ್ಮನ ಜೊತೆ ವರ್ಕೌಟ್ ಮಾಡುತ್ತಿದ್ದ ವಿಡಿಯೋವನ್ನು ಅನುಶ್ರೀ ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಎಂದ ಮೇಲೆ ಸಣ್ಣಪುಟ್ಟ ಜಗಳಗಳು ಇದ್ದೇ ಇರುತ್ತವೆ ಅವನ ಜೊತೆ ಜಗಳ ಮಾಡುವುದಕ್ಕಾದರೂ ಶಕ್ತಿ ಬೇಕಲ್ಲವೇ!? ಅದಕ್ಕಾಗಿ ಈ ವರ್ಕೌಟ್ ಮಾಡುತ್ತಿದ್ದೇನೆ ಎಂದು ಅನುಶ್ರೀ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

By

Leave a Reply

Your email address will not be published. Required fields are marked *