ಗಿಡಗಳಲ್ಲಿ ಎರಡು ವಿಧಗಳಿವೆ. ಒಂದು ಬೀಜಗಳನ್ನ ಬಿತ್ತಿ ಗಿಡಗಳನ್ನು ಪಡೆಯುವುದು. ದಂಟಿನ ಸೊಪ್ಪು ಹರವೇ ಸೊಪ್ಪು ಮೆಂತೆ ಸೊಪ್ಪು ಉದಾಹರಣೆಗಳಾಗಿವೆ. ಇನ್ನು ಎರಡನೆಯದು ಕಡ್ಡಿಯನ್ನು ನೆಟ್ಟು ಗಿಡಗಳನ್ನು ಪಡೆಯುವುದು. ಉದಾಹರಣೆಗೆ ಪುದೀನಾ ಸೊಪ್ಪು, ದೊಡ್ಡಪತ್ರೆ ಸೊಪ್ಪು ಇತ್ಯಾದಿ. ಅಂಗಡಿಗೆ ಹೋಗಿ ಹರವೇ ಸೊಪ್ಪು ಕೊತ್ತಂಬರಿ ಸೊಪ್ಪು ಏನಾದರೂ ತಂದರೆ, ಬೇರಿನ ಸಮೇತ ಸಿಗತ್ತೆ ಅದೇ ಪುದೀನಾ ಸೊಪ್ಪು ತಗೊಂಡು ಬಂದರೆ, ಬೇರು ಇರಲ್ಲ ಹಾಗೆ ದಂಟನ್ನು ಮಾತ್ರ ಕೊಡ್ತಾರೆ ಯಾಕೆ ಗೊತ್ತಾ? ಬೇರು ಬಿಟ್ಟು ಹಾಗೇ ದಂಟು ಮಾತ್ರ ಕತ್ತರಿಸುವುದರಿಂದ ಬೇರು ಮಣ್ಣಲ್ಲೆ ಇರುವುದರಿಂದ ಮತ್ತೆ ಎಲೆಗಳು ಚಿಗುರಿ ಬರತ್ತೆ. ಇವತ್ತು ಈ ಲೇಖನದಲ್ಲಿ ಮನೆಯಲ್ಲಿಯೇ ಹೇಗೆ ಪುದೀನಾ ಗಿಡವನ್ನ ಬೆಳೆಸೋದು ಅನ್ನೋದರ ಬಗ್ಗೆ ಇಲ್ಲಿದೆ ಪುಟ್ಟ ಮಾಹಿತಿ.
ಮಾರ್ಕೆಟ್ ಇಂದ ಪುದೀನಾ ತಂದಮೇಲೆ ಎಲೆಗಳನ್ನ ತೆಗೆದುಕೊಂಡು ಕಡ್ಡಿಗಳನ್ನ ಒಗೆಯುತ್ತೀರಿ ಆದರೆ ಒಗೆಯುವಾಗ ಸ್ವಲ್ಪ ಬಲಿತ ಕಡ್ಡಿಗಳನ್ನ ಮಾತ್ರ ತೆಗೆದಿಟ್ಟುಕೊಳ್ಳಬೇಕು. ಕಡ್ಡಿಯಲ್ಲಿ ಪೂರ್ತಿ ಎಲೆಗಳನ್ನು ತೆಗೆದುಕೊಂಡು ತುದಿಯಲ್ಲಿ ಚಿಗುರಿಕೊಂಡು ಇರುವ ಎಲೆಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ನಂತರ ಒಂದು ಗ್ಲಾಸಿನಲ್ಲಿ ಅರ್ಧದಷ್ಟು ನೀರನ್ನ ತುಂಬಿಸಿ ತೆಗೆಟ್ಟುಕೊಂಡ ಬಲಿತ ಎಲ್ಲ ಪುದೀನಾ ಕಡ್ಡಿಗಳನ್ನು ಬೆಳಕು ಬರುವ ಜಾಗದಲ್ಲಿ ಇಡಬೇಕು. ನಾಲ್ಕರಿಂದ ಐದು ದಿನ ಹಾಗೆ ಬಿಡಬೇಕು. ನೀರನ್ನ ದಿನ ಡಿ ಆ ಬದಲಾಯಿಸಬೇಕು ಅನ್ನುವ ಗೊಂದಲ ಬೇಡ ಮೊದಲ ದಿನ ಇಟ್ಟ ನೀರೆ ಸಾಕಗತ್ತೆ. 5 ದಿನಗಳ ನಂತರ ಆ ಕಡ್ಡಿಗಳಲ್ಲಿ ಸಣ್ಣ ಸಣ್ಣ ಬೇರು ಬಂದಿರತ್ತೆ. 4 / 5 ದಿನಗಳಲ್ಲಿ ಬೇರು ಬಂದ ನಂತರ ನೀರನ್ನ ಬದಲಾಯಿಸಿ ಅದೇ ಲೋಟದಲ್ಲಿ ಅದೇ ಜಾಗದಲ್ಲಿ ನೀರನ್ನ ಬೇರೆ ಮಾಡಿ ಮತ್ತೆ ಒಂದು ವಾರ ಇಡಬೇಕು. ಈ ವಾರದಲ್ಲಿ ಪುದೀನಾ ಕಡ್ಡಿಗಳನ್ನು ಮಣ್ಣಿಗೆ ಹಾಕುವ ಮೊದಲೇ ಬೇರಿನ ಜೊತೆಗೆ ಸಣ್ಣ ಸಣ್ಣದಾದ ಪುದೀನಾ ಎಲೆಗಳು ಚಿಗುರಲು ಆರಂಭಿಸುತ್ತವೆ.
ನಂತರ ಇದನ್ನ ಮಣ್ಣು ಗೊಬ್ಬರ ತುಂಬಿದ ಪಾಟ್ ಒಳಗೆ ಪುದೀನಾ ಕಡ್ಡಿಗಳನ್ನ ನೆಡಬೇಕು. ಮಣ್ಣು ಹುಡಿಯಾಗಿ ಇರಬೇಕು ಇದಕ್ಕೆ ಸಾಧ್ಯ ಆದರೆ ಸಾವಯವ ಗೊಬ್ಬರ ಅಥವಾ ಎರೆಹುಳು ಗೊಬ್ಬರ ಹಾಕಬೇಕು. ಈ ಯಾವುದೂ ಗೊಬ್ಬರ ಸಿಗಲಿಲ್ಲ ಅಂದರೂ ಕೂಡ ಟೆನ್ಷನ್ ಬೇಡ ಒಣಗಿದ ಎಲೆಗಳನ್ನು ಸಹ ಹಾಕಬಹುದು. ಆದರೆ ಮಣ್ಣು ಈ ದೇ ಇದ್ದರೆ ಯಾವುದೇ ಗಿಡ ಆದರೂ ಸಹ ಚೆನ್ನಾಗಿ ಬೆಳೆಯಲ್ಲ. ನೀರು ಹಾಕುತ್ತ ಹೋದಹಾಗೆ ಮಣ್ಣು ಕೊನೆ ಕೊನೆಗೆ ಗಟ್ಟಿ ಆಗೋಕೆ ಶುರು ಆಗತ್ತೆ. ಈಗ ಪುದೀನಾ ಕಡ್ಡಿ ನೇಡೋವಾಗ ಹದಿನೈದು ಕಡ್ಡಿಗೆ ಬೇರು ಬಂದಿದೆ ಅಂತ ಇಟ್ಟುಕೊಳ್ಳೋಣ. ಆ 15 ಕಡ್ಡಿಗಳನ್ನೂ ಒಂದೇ ಕಡೆ ಹೋಲ್ ಮಾಡಿ ನೆಡಬಾರದು. ಒಂದೇ ಪಾಟ್ ನಲ್ಲಿ ಸ್ವಲ್ಪ ಸ್ವಲ್ಪ ಜಾಗ ಬಿಟ್ಟು ಅಷ್ಟಷ್ಟು ದೂರಕ್ಕೆ ಒಂದೊಂದು ಕಡ್ಡಿಗಳನ್ನ ನೆಡಬೇಕು. ನಂತರ ಮಣ್ಣಿನಿಂದ ಭದ್ರ ಮಾಡಿ ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ನೀರನ್ನ ಹಾಕಬೇಕು. ಈ ಪುದೀನಾ ಗಿದಜ್ಜೆ ಸೂರ್ಯನ ಬೆಳಕು ಜಾಸ್ತಿ ಬೇಕು ಹಾಗೆ ನೀರು ಕೂಡ ಸ್ವಲ್ಪ ಜಾಸ್ತಿ ಬೇಕಾಗತ್ತೆ. ತುಂಬಾ ಜಾಸ್ತಿ ನೀರು ಹಾಕಿದ್ರೂ ಕೂಡ ಕೊಳೆತು ಹಾಳಾಗತ್ತೆ ಹಾಗಂತ ಅದನ್ನ ಒಣಗೋಕು ಬಿಡದೆ ಮಿತವಾಗಿ ನೀರನ್ನ ಹಾಕಬೇಕು. ಹೀಗೆ ಮಾಡ್ತಾ ಬಂದರೆ 25 ಕಡ್ಡಿಗಳಲ್ಲಿ ಸುಮಾರು 8 ಕಡ್ಡಿಗಳು ಚೆನ್ನಾಗಿ ಬೆಳೆಯತ್ತೆ. ಬಿತ್ತಿದ ಎಲ್ಲಾ ಬೀಜಗಳೂ ಕೂಡ ಗಿಡ ಆಗಲ್ಲ ಅಲ್ವಾ ಹಾಗೇ ಬೆಳೆದ ಎಲ್ಲಾ ಗಿಡಗಳೂ ಫಲ ಕೊಡಲ್ಲ ಇದೂ ಪ್ರಕೃತಿ ನಿಯಮ.
ಪುದೀನಾ ಗಿಡ ಮಣ್ಣಲ್ಲಿ ಚನ್ನಾಗಿ ಬೇರೂರಿ ಬೆಳೆದರೆ ತುಂಬಾ ಚೆನ್ನಾಗಿ ಇರತ್ತೆ ಹಸಿರಾಗಿ ಒಂದು ರೀತಿಯ ಪೊದೆಯ ಹಾಗೆ ತುಂಬಾ ಬೆಳೆದಿರತ್ತೆ. ಇನ್ನೊಂದು ಮುಖ್ಯವಾದ ವಿಷಯ ಏನು ಅಂದರೆ ಪುದೀನಾ ಹೇಗಿದ್ರೂ ಬೆಳೆದು ಎಲೆ ಬಂದಿದ್ದೂ ಆಯ್ತು ಅಂತ ಹಾಗೆ ಬರೀ ಎಲೆಗಳನ್ನ ಮಾತ್ರ ಕಿತ್ತುಕೊಳ್ಳದೆ ನಿಧಾನಕ್ಕೆ ಅದರ ಕಡ್ಡಿಗಳನ್ನೂ ಸಹ ವಾರಕ್ಕೆ ಅಥವಾ ಎರಡು ವಾರಕ್ಕೆ ತೆಗೆಯುತ್ತಾ ಇರಬೇಕು. ಹೇಗಿದ್ರೂ ಬೇರು ಇರತ್ತೆ ಕಡ್ಡಿಯನ್ನ ಹಾಗೆ ಮತ್ತೆ ಮಣ್ಣಲ್ಲಿ ಊರಿದ್ರೆ ಮತ್ತೆ ಹೊಸದಾಗಿ ಬೆಳೆಯೋಕೆ ಶುರು ಆಗತ್ತೆ. ವಾರಕ್ಕೆ ಎರಡು ಬಾರಿ ಆದರೂ ಪುದೀನಾ ಬಳಸು ಹಿತ್ತಲ ಗಿಡ ಮದ್ದಲ್ಲ ಅನ್ನೋ ಮಾತನ್ನ ನಿಜ ಮಾಡಬಹುದು. ಇದನ್ನ ಬಳಸದೆ ಜಾಗೆ ಬಿಟ್ಟರೆ ನಿಧಾನವಾಗಿ ಎಲೆಗಳು ತಾನಾಗಿಯೇ ಚಿಕ್ಕದಾಗುತ್ತ ಹೋಗತ್ತೆ, ಹಾಗೇ ಗಿಳಿ ಹಸಿರು ಬಣ್ಣ ಹೋಗಿ ಕಪ್ಪು ಹಸಿರು ಬಣ್ಣ ಆಗತ್ತೆ ಹಾಗಾಗಿ ವಾರದಲ್ಲಿ ಒಂದೇರಡು ಬಾರಿ ಆದರೂ ಬಳಸಲೇಬೇಕು.