ಆಸ್ತಿ ಅಥವಾ ಪ್ರಾಪರ್ಟಿ ಎಂದರೆ ಖಾಲಿ ಜಾಗ, ಮನೆ, ಬಂಗಲೆ ಅಥವಾ ಫ್ಲ್ಯಾಟ್‌ಗಳಿಗೆ ಅನ್ವಯವಾಗುತ್ತದೆ. ಇಷ್ಟ ಇದೆಯೋ ಇಲ್ಲವೋ ಕಂದಾಯ ಇಲಾಖೆಯಡಿ ಬರುವ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸುವುದು ಅತ್ಯಗತ್ಯವಾಗಿರುತ್ತದೆ. ಇದನ್ನು ಮಾಡಿಕೊಳ್ಳದಿದ್ದರೆ ಸರಕಾರಿ ದಾಖಲೆಗಳ ಪ್ರಕಾರ ಯಾರಿಗೂ ಕೂಡ ಆ ಜಮೀನಿನ ವಾರಸುದಾರರಾಗಿರುವುದಿಲ್ಲ .

ನೋಂದಣಿ ಪ್ರಕ್ರಿಯೆ ಎನ್ನುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಅರ್ಹ ವಕೀಲರೊಬ್ಬರ ಸಹಾಯ ಪಡೆಯಬೇಕಾಗುತ್ತದೆ. ಅವರನ್ನು ರಿಜಿಸ್ಟ್ರೇಶನ್ ಅಟಾರ್ನಿ ಎಂದು ಕರೆಯಲಾಗುತ್ತದೆ. ಆದ್ದರಿಂದ ನಾವಿಲ್ಲಿ ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಭಾರತದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಯೆಂಬುದು ಸ್ವಲ್ಪ ಸಂಕೀರ್ಣ ಸಂಗತಿ. ಜೊತೆಗೆ ಒಂದಷ್ಟು ಪೇಪರ್ ವರ್ಕ್ ಮಾಡಬೇಕಾಗುತ್ತದೆ. ಜಮೀನ್ ವರ್ಗಾವಣೆಯ ರಿಜಿಸ್ಟರ್ ಮಾಡಿದ ಮಾತ್ರಕ್ಕೆ ಆಸ್ತಿ ಹಕ್ಕು ಬದಲಾವಣೆ ಪ್ರಕ್ರಿಯೆ ಮುಗಿದಿದೆ ಎಂದರ್ಥವಲ್ಲ. ಯಾವುದೇ ಒಂದು ಜಮೀನು ಅಥವಾ ಆಸ್ತಿಯನ್ನು ಹಕ್ಕು ಬದಲಾವಣೆ ಮಾಡುವ ಸಂದರ್ಭದಲ್ಲಿ ಕೊನೆಯ ಹಂತದಲ್ಲಿ ನಡೆಯುವ ಪ್ರಕ್ರಿಯೆಯನ್ನು ಜೆ ಫಾರಂ ಎಂದು ಕರೆಯಲಾಗುತ್ತದೆ.

ಇದನ್ನು ನಮೂನೆ 12 ಮತ್ತು ನಮೂನೆ 21ರ ಮೂಲಕ ಮಾಡಲಾಗುತ್ತದೆ. ಹಕ್ಕು ಬದಲಾವಣೆ ಮತ್ತು ವರ್ಗಾವಣೆ ಸಂದರ್ಭದಲ್ಲಿ ವಿಲೇಜ್ ಅಕೌಂಟೆಂಟ್ ಅವರ ಮೂಲಕ ಆಸಕ್ತರಿಗೆ 30 ದಿನಗಳ ಒಳಗಾಗಿ ನೋಟಿಸ್ ಹೊರಡಿಸಲಾಗುತ್ತದೆ.

ಗೊತ್ತುಪಡಿಸಿದ ದಿನಗಳಲ್ಲಿ ಯಾರಿಂದಲೂ ಆಕ್ಷೇಪಣೆ ಬರದಿದ್ದರೆ ವಿಲೇಜ್ ಅಕೌಂಟೆಂಟ್ ಅವರು ಯಾರ ಆಕ್ಷೇಪಣೆಯೂ ಬಂದಿಲ್ಲವೆಂದು 30 ದಿನಗಳ ನಂತರ ಭೂಮಿ ಖರೀದಿದಾರರ ಮತ್ತು ಆಸ್ತಿ ಮಾಡಿದವರಿಂದ ಜೆ ಫಾರಂ ಮೇಲೆ ಸಹಿಯನ್ನು ಮಾಡಿಸಿಕೊಂಡು ಹೋಗುತ್ತಾರೆ. ಅದಾದ 15 ದಿನಗಳ ನಂತರ ಹಕ್ಕು ಬದಲಾವಣೆ ಮಾಡಲು ಆದೇಶಿಸಬಹುದು.

ಇವೆಲ್ಲ ಪ್ರಕ್ರಿಯೆ ಮುಗಿದ 45 ದಿನಗಳ ನಂತರ ಜಮೀನಿನ ಪಹಣಿ ಪತ್ರಿಕೆಯು ಖರೀದಿದಾರನ ಹೆಸರಿನಲ್ಲಿ ಬರುತ್ತದೆ. ಮುಖ್ಯವಾಗಿ ಜೆ ಫಾರಂನಲ್ಲಿ ಬರುವ ನಮೂನೆ 12 ಅಂದರೆ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕವಾಗಿ ಪ್ರಚಾರ ಮಾಡಲಾಗುತ್ತದೆ. ಇದರ ಅವಧಿ 15 ದಿನಗಳಾಗಿರುತ್ತದೆ.

ನಮೂನೆ 21 ಎಂದರೆ ಅದು ಜಮೀನಿನ ಸಂಬಂಧಪಟ್ಟ ಆಸಕ್ತರಿಗೆ 30 ದಿನಗಳ ಕಾಲದ ನೋಟಿಸ್ ಹೊರಡಿಸಲಾಗುತ್ತದೆ. ಜಮೀನು ರಿಜಿಸ್ಟರ್ ಆಗಿದ್ದು ಜಮೀನಿಗೆ ಸಂಬಂಧಪಟ್ಟ ಆಸಕ್ತರು ಯಾರಾದರೂ 30 ದಿನಗಳ ಒಳಗೆ ಆಕ್ಷೇಪಣೆಯನ್ನು ನೀಡಿದರೆ ರಿಜಿಸ್ಟರ್ ಆಗಿರುವ ಜಮೀನಿನ ವಹಿವಾಟು ವಿವಾದಾಸ್ಪದ ಪ್ರಕರಣಗಳ ಪಟ್ಟಿಗೆ ಸೇರಿಸಲಾಗುತ್ತದೆ.

ಸ್ವೀಕರಿಸಿದ ಎಲ್ಲಾ ತಕರಾರುಗಳನ್ನು ಮಾನ್ಯ ತಹಶೀಲ್ದಾರರ ನೇತೃತ್ವದಲ್ಲಿ ತಹಶೀಲ್ದಾರರ ಕೋರ್ಟ್ನಲ್ಲಿ ಮುಂದಿನ 30 ದಿನಗಳ ಆದೇಶದ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಒಂದು ವೇಳೆ ತಹಶೀಲ್ದಾರರ ಕೋರ್ಟ್ನಲ್ಲಿ ಸಮಸ್ಯೆ ಬಗೆಹರಿದಿಲ್ಲ ಎಂದಾಗ ಅದನ್ನು ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಬಹುದು. ಈ ರೀತಿಯಲ್ಲಿ ಒಂದು ಜಮೀನಿನ ವರ್ಗಾವಣೆಯ ಕಾರ್ಯವಾಗುತ್ತದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!