ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ, ಹೀಗೆ ಪ್ರತಿ ವರ್ಷ ಬರುವುದು ಯುಗಾದಿ ಹಬ್ಬ. ಜನವರಿಯಲ್ಲಿ ಹೊಸವರ್ಷದ ಆರಂಭವಾದರೂ ನಮ್ಮ ಹಿಂದೂಗಳಿಗೆ ಹೊಸ ವರ್ಷದ ಆರಂಭ ಯುಗಾದಿ. ಯುಗಾದಿ ಎಂದರೆ ಯುಗದ ಆದಿ. ಈ ಹಬ್ಬವನ್ನು ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಿ ಆಚರಣೆ ಮಾಡುತ್ತಾರೆ. ಬೇವು ಬೆಲ್ಲ ಮಾಡಿ ಹಂಚುತ್ತಾರೆ.
ಯುಗಾದಿ ಮೊದಲು ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ತಂದಿಟ್ಟರೆ ಮನೆಯಲ್ಲಿ ಮಹಾಲಕ್ಷ್ಮೀಯು ಯಾವಾಗಲೂ ನೆಲೆಸಿರುತ್ತಾಳೆ ಎಂದು ಪಂಡಿತೋತ್ತಮರು ಹೇಳುತ್ತಾರೆ. ಅದೇ ರೀತಿಯಲ್ಲಿ ಧನ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೇ ಅಂದುಕೊಂಡ ಕೆಲಸಗಳು ಯಾವುದೇ ವಿಘ್ನವಿಲ್ಲದೆ ನೆರವೇರುತ್ತದೆ ಎಂದು ನಂಬಿಕೆ.
ಈಗ ಪ್ರತಿಯೊಬ್ಬರೂ ಕೂಡ ಆಚಾರ ವಿಚಾರಗಳನ್ನು ನಂಬುತ್ತಾರೆ. ಅದೇ ಆಚಾರ ವಿಚಾರಗಳನ್ನು ಅನುಸರಿಸುತ್ತಾರೆ. ತಮಗೆ ತಿಳಿಯದಿದ್ದರೂ ತಿಳಿದವರ ಬಳಿ ಮಾಹಿತಿಯನ್ನು ತಿಳಿದುಕೊಂಡು ಆಚಾರ ವಿಚಾರಗಳನ್ನು ಅನುಸರಿಸುತ್ತಾರೆ. ಯುಗಾದಿ ಹಬ್ಬದ ದಿನ ಲಕ್ಷ್ಮೀ ಹಾಗೂ ಗಣಪತಿಯ ಬೆಳ್ಳಿಯ ವಿಗ್ರಹವನ್ನು ತಂದು ಮನೆಯಲ್ಲಿಟ್ಟರೆ ಒಳ್ಳೆಯದಾಗುತ್ತದೆ.
ನಿಮಗೆ ಅನುಕೂಲವಾಗುವಂತೆ ತಾಮ್ರ, ಹಿತ್ತಾಳೆ ಯಾವುದೇ ಆದರೂ ನಿಮ್ಮ ಶಕ್ತಿಗೆ ಅನುಗುಣವಾಗಿ ಮಾಡಿ ಪೂಜೆಯನ್ನು ಮಾಡಬಹುದು. ಇದರಿಂದ ಧನಲಕ್ಷ್ಮೀ ಮನೆಯಲ್ಲಿ ನೆಲೆಸುತ್ತಾಳೆ. ಆರ್ಥಿಕ ಸಂಪತ್ತು ವೃದ್ಧಿಯಾಗುತ್ತದೆ. ಏನೇ ಸಮಸ್ಯೆಗಳು ಇದ್ದರೂ ದೂರವಾಗುತ್ತದೆ.
ಹಾಗೆಯೇ ಲಘು ತೆಂಗಿನಕಾಯಿ ಮತ್ತು ಒಂದು ಕೆಂಪುವಸ್ತ್ರ ಇದನ್ನು ಮನೆಯಲ್ಲಿ ಇಡಬೇಕು. ಹಣಕಾಸು ಇಡುವಲ್ಲಿ ಕೆಂಪುವಸ್ತ್ರಕ್ಕೆ ತೆಂಗಿನಕಾಯಿ ಸುತ್ತಿ ಇಡಬೇಕು. ಇಲ್ಲಿ ಯುಗಾದಿ ಹಬ್ಬದ ದಿನ ವಿಶೇಷವಾಗಿ ಪೂಜೆ ಸಲ್ಲಿಸಬೇಕು. ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ಹಾಗೇ ಯುಗಾದಿ ಹಬ್ಬದ ಮುಂಚೆ ಶ್ರೀ ಯಂತ್ರವನ್ನು ತಂದು ಮನೆಯ ದೇವರ ಮನೆಯಲ್ಲಿಟ್ಟು ಯುಗಾದಿ ಹಬ್ಬದ ದಿನ ವಿಶೇಷವಾಗಿ ಪೂಜೆ ಮಾಡಬೇಕು. ಇದು ಮುಂದೆ ಭವಿಷ್ಯದಲ್ಲಿ ಒಳ್ಳೆಯದನ್ನು ಮಾಡುತ್ತದೆ. ಹೀಗೆ ಯುಗಾದಿ ಹಬ್ಬದ ದಿನ ಇವುಗಳನ್ನು ಅನುಸರಿಸಿ ಜೀವನವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಜೀವನದ ತುಂಬಾ ಸುಖವನ್ನು ಕಾಣಿರಿ.