ಕನಸಿನಲಿ ಆನೆ ಕಾಣಿಸಿಕೊಂಡರೆ ಇದರ ಫಲವೇನು ಗೊತ್ತೇ?

0 224

ಮಲಗಿದಾಗ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಬಗೆಯ ಕನಸುಗಳು ಬೀಳುತ್ತವೆ, ಅಷ್ಟೇ ಅಲ್ದೆ ಕನಸಿನಲ್ಲಿ ಹಲವು ವಿಧಗಳಿವೆ, ಕೆಟ್ಟ ಕನಸು ಬೀಳಬಹದು ಅಥವಾ ಶುಭ ಕನಸು ಬೀಳಬಹುದು ಆದ್ರೆ ಎಲ್ಲವು ಕೂಡ ನಮ್ಮ ವಿವೇಚನೆಗೆ ಬಿಟ್ಟಿದ್ದು ಅನ್ನೋದನ್ನ ಹೇಳಲಾಗುತ್ತದೆ, ಅದೇ ನಿಟ್ಟಿನಲ್ಲಿ ಕನಸಿನಲ್ಲಿ ಆನೆ ಬಂದ್ರೆ ಇದರ ಫಲವೇನು ಒಳ್ಳೆದಾ ಅಥವಾ ಕೆಟ್ಟದಾ ಅನ್ನೋದನ್ನ ನೋಡುವುದಾದರೆ ಜ್ಯೋತಿಷ್ಯ ಶಾಸ್ತ್ರ ಏನ್ ಹೇಳುತ್ತೆ ಅನ್ನೋದನ್ನ ಮುಂದೆ ನೋಡಿ.

ರಾತ್ರಿ ಮಲಗಿದಾಗ ನಾವು ಎಲ್ಲರೂ ಕನಸು ಕಾಣುತ್ತೇವೆ. ಎಲ್ಲರಿಗೂ ಬೇರೆ ಬೇರೆ ರೀತಿಯ ಕನಸುಗಳು ಬೀಳತ್ತೆ ಒಬ್ಬರಿಗೆ ಒಳ್ಳೆಯ ಕನಸು ಬಿದ್ದರೆ ಇನ್ನೋಬರಿಗೆ ಕೆಟ್ಟ ಕನಸುಗಳು ಕಾಣತ್ತೆ ಹಾಗೆ ಒಬ್ಬರಿಗೆ ದೇವರು ಕನಸಲ್ಲಿ ಬಂದರೆ ಇನ್ನೊಬ್ಬರಿಗೆ ತಾವು ಅತಿಯಾಗಿ ಇಷ್ಟ ಪಡುವ ವ್ಯಕ್ತಿಗಳು, ಪಕ್ಷಿಗಳು, ಪ್ರಾಣಿಗಳು ಕನಸಲ್ಲಿ ಕಾಣತ್ತೆ. ಹಾಗೆ ಜ್ಯೋತಿಷ್ಯದ ಪ್ರಕಾರ ಕನಸಲ್ಲಿ ಆನೆ ಕಂಡರೆ ಅದರ ಅರ್ಥ ಏನು ಅದರ ಫಲಗಳು ಏನು ಅನ್ನೋದನ್ನ ನೋಡೋಣ.

ಪ್ರಾಣಿಗಳು ಕನಸಲ್ಲಿ ಬಂದ್ರೆ ಎಲ್ಲರಿಗೂ ಅದು ಶುಭವೋ ಅಥವ ಅಶುಭವೋ ಅನ್ನೋ ಅನುಮಾನ ಇದ್ದೆ ಇರತ್ತೆ ಆದ್ರೆ ಆನೆ ಕನಸಲ್ಲಿ ಬಂದ್ರೆ ಅದರ ಅರ್ಥ ನಮಗೆ ತೀರಾ ಹತ್ತಿರದಲ್ಲಿ ಯಾವುದೋ ದೊಡ್ಡ ಅಧಿಕಾರ, ಉನ್ನತ ಸ್ಥಾನ ಪ್ರಾಪ್ತಿ ಆಗತ್ತೆ ಅನ್ನೋದನ್ನ ಆ ಕನಸು ಸೂಚಿಸುತ್ತದೆ. ನಾವು ಪವಿತ್ರ ಶ್ರೇಷ್ಠ ಅಂತ ಭಾವಿಸಿ ಪೂಜಿಸಿ ಪ್ರಾಣಿಗಳಲ್ಲಿ ಆನೆ ಕೂಡ ಒಂದು ಎನ್ನಬಹುದು. ಹಾಗಾಗಿ ಆನೆ ಕನಸಲ್ಲಿ ಕಂಡರೆ ಅದು ಶುಭವೆ ಹೊರತು ಅಶುಭ ಏನು ಅಲ್ಲ ಆನೆ ಕನಸಲ್ಲಿ ಬಂದರೆ ಹೆದರುವ ಸಂದರ್ಭವೇ ಇಲ್ಲ

Leave A Reply

Your email address will not be published.