ಅನೇಕ ತರದ ವಿಡಿಯೋ ಅನ್ನು ಮಾಡಿ ಯುಟ್ಯೂಬ್ ಅಲ್ಲಿ ಅಪ್ಲೋಡ್ ಮಾಡಿ ಹೆಚ್ಚಿನ ಆದಾಯವನ್ನು ಗಳಿಸುವ ಸೋಶಿಯಲ್ ಮೀಡಿಯಾ ವೇದಿಕೆ ಯುಟ್ಯೂಬ್ ಆಗಿದೆ ಅದರಲ್ಲಿ ಅನೇಕ ಜನರು ಒಳ್ಳೆಯ ಹೆಸರನ್ನು ಹಾಗೂ ಒಳ್ಳೆಯ ಕೆಲಸವನ್ನು ಮಾಡಿದರೆ ಕೆಲವರು ಸೋಶಿಯಲ್ ಮೀಡಿಯಾದ ದುರುಪಯೋಗವನ್ನು ಪಡಿಸಿಕೊಳ್ಳುತ್ತಾರೆ ಅದರಲ್ಲಿ ಹರ್ಷ ಸಾಯಿ ಎನ್ನುವ ಯುಟ್ಯೂಬರ ಅನೇಕ ಜನರಿಗೆ ಹಣ ಸಹಾಯವನ್ನು ಮಾಡಿದ್ದಾರೆ
ಇನ್ನೊಬ್ಬರಿಗೆ ಸಹಾಯ ಮಾಡಲು ಹಿಂದೆ ಮುಂದೆ ನೀಡುವ ಈ ಲೋಕದಲ್ಲಿ ಹೆಚ್ಚಿನ ಮೋತ್ತದ ಹಣವನ್ನು ಬಡವರಿಗೆ ನೀಡಿ ಅನೇಕ ಜನರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ .ಅನೇಕ ಬಡ ಕುಟುಂಬಕ್ಕೆ ದಾರಿ ದೀಪವಾಗಿ ಸಹಾಯವನ್ನು ಮಾಡಿದ್ದಾರೆ ಹರ್ಷ ಸಾಯಿ ಅವರು ತೆಲುಗು ಯೂಟ್ಯೂಬರ್ ವಿವಿಧ ಭಾಷೆಯಲ್ಲಿ ತನ್ನದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಹೊಂದಿದ್ದಾನೆ ನಾವು ಈ ಲೇಖನದ ಮೂಲಕ ಹರ್ಷ ಸಾಯಿ ಬಗ್ಗೆ ತಿಳಿದುಕೊಳ್ಳೊಣ.
ತೆಲುಗು ಯೂಟ್ಯೂಬ್ ಚಾನೆಲ್ ರದ ಹರ್ಷ ಸಾಯಿ ವಿಡಿಯೋ ಅನ್ನು ಸಾಕಷ್ಟು ಜನ ನೋಡಿರುತ್ತಾರೆ ಇಂದಿನ ಕಾಲದಲ್ಲಿ ಪಕ್ಕದ ಮನೆಯವರಿಗೆ ಒಂದು ಚಿಟಿಕೆ ಉಪ್ಪನ್ನು ನೀಡಲು ಹಿಂದೆ ಮುಂದೆ ನೋಡುತ್ತಾರೆ ಹೀಗಿರುವಾಗ ಹರ್ಷ ಸಾಯಿ ಯವರು ಜನರಿಗಾಗಿ ತುಂಬಾ ಹಣವನ್ನು ಖರ್ಚು ಮಾಡುತ್ತಾರೆ ಇಂದಿನ ಕಾಲದಲ್ಲಿ ಬೇರೆಯವರಿಗೆ ಸಹಾಯ ಮಾಡಲು ಹಿಂದೇಟು ಹಾಕುವ ಈ ಕಾಲದಲ್ಲಿ ಹರ್ಷ ಸಾಯಿ ಯವರು ಅನೇಕ ಜನ ಬಡವರಿಗೆ ಸಹಾಯ ಮಾಡುತ್ತಾರೆ ಆದರೆ ಅಷ್ಟು ಹಣವನ್ನು ನೀಡುವ ಹರ್ಷ ಸಾಯಿ ಅವರ ಆದಾಯದ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿದೆ.
ಅಷ್ಟೆಲ್ಲ ಹಣವನ್ನು ಇನ್ನೊಬ್ಬರಿಗೆ ನೀಡುವ ಹರ್ಷ ಸಾಯಿ ಬಗ್ಗೆ ಒಂದು ಹೆಮ್ಮೆ ಆದರೆ ಕುತೂಹಲ ಸಹ ಬರುತ್ತದೆ ಪ್ರತಿಯೊಬ್ಬರಿಗೂ ಸಹ ಹರ್ಷ ಸಾಯಿ ಯವರಿಗೆ ಹಣ ಎಲ್ಲಿಂದ ಬರುತ್ತದೆ ಕೊಟ್ಯಾಧೀಶ್ವರ ಮಗನ ಎಂದು ಆತನ ಕೋಟಿ ಕೋಟಿ ವೀಕ್ಷಕರ ಅನುಮಾನವಾಗಿದೆ ಆದರೆ ತೆಲುಗಿನ ಪ್ರೆಸ್ ಅದ ಚಾಪರ್ ಅವರು ಈ ಪ್ರಶ್ನೆಗಳ ಹಿಂದೆ ಬಿದ್ದು ಹರ್ಷ ಸಾಯಿಯಿಂದ ಹಣ ಪಡೆದವರ ಬಗ್ಗೆ ತನಿಖೆ ಮಾಡಿದ್ದರು.
ಯಾರ ಕೈಗೂ ಸಿಗದ ಹರ್ಷ ಸಾಯಿಯನ್ನು ಕುದ್ದು ಅವರ ಸಂದರ್ಶನ ಮಾಡಿದ್ದರು ಇದರಿಂದ ಕೆಲವು ಮಾಹಿತಿಯನ್ನು ಪಡೆದುಕೊಂಡರು ಜನರಲಿಷ್ಟ್ ಆದ ಜಾಪರ್ ಅವರು ಹರ್ಷ ಸಾಯಿ ಭೇಟಿಗೂ ಮುನ್ನ ಅವರು ಹರ್ಷ ಸಾಯಿ ಸಹಾಯ ಮಾಡಿದ ಜನರನ್ನು ಭೇಟಿ ಮಾಡಿದ್ದರು ಅಂಥವರ ಬಳಿ ತಾವೇ ಖುದ್ದಾಗಿ ಸಂದರ್ಶನ ಮಾಡಿದ್ದರು ಹರ್ಷ ಸಾಯಿ ತರಕಾರಿ ಮಾರುವರಿಗೆ ಶು ಪಾಲಿಷ್ ಮಾಡುವರಿಗೆ ಹೀಗೇ ಇನ್ನಿತರ ಬಡವರಿಗೆ ಕಂತೆ ಕಂತೆ ಹಣವನ್ನು ನೀಡಿದ್ದರು.
ಶೂ ಪಾಲಿಷ್ ಮಾಡುವರುಗೆ ಇಪ್ಪತ್ತು ಸಾವಿರವನ್ನು ಕೊಟ್ಟು ಸಹಾಯ ಮಾಡಿದ್ದಾರೆ ಹಾಗೆಯೇ ಕ್ಷೌರಿಕ ಕೆಲಸ ಮಾಡು ವನಿಗೆ ಲಕ್ಷ ಲಕ್ಷ ಕೊಟ್ಟು ಒಂದು ಮನೆಯನ್ನು ಕಟ್ಟು ಕೊಟ್ಟಿದ್ದಾರೆ ಹಾಗಾಗಿ ಹರ್ಷಸಾಯಿಯನ್ನು ದೇವರೆಂದು ಪ್ರಾರ್ಥಿಸುತ್ತಾರೆ ಕಷ್ಟ ಇರುವಾಗ ಯಾರು ಸಹಾಯಕ್ಕೆ ಬರುವುದು ಇಲ್ಲ ತಮ್ಮ ಸಂಭಂದಿಕರು ಸಹ ಸಹಾಯಕ್ಕೆ ಬರುವುದು ಇಲ್ಲ ಆದರೆ ಹರ್ಷ ಸಾಯಿ ಮನೆಯನ್ನು ಕಟ್ಟಿಕೊಟ್ಟಿದ್ದಾರೆ ಇಂಥವರು ಈ ಕಾಲದಲ್ಲಿ ಸಿಗುವುದೇ ಕಷ್ಟ ಎಂದು ಜನರು ಹೇಳುತ್ತಾರೆ ಇಷ್ಟೆಲ್ಲ ಸಹಾಯ ಮಾಡಿದ ಹರ್ಷ ಸಾಯಿ ಸಹಾಯ ಮಾಡಿದ್ದು ನಿಜ ಎಂದು ಜಾಫರ್ ಅವರಿಗೆ ತಿಳಿಯುತ್ತದೆ.
ಇಷ್ಟೆಲ್ಲ ಹಣ ಬೇರೆಯವರಿಗೆ ಸಹಾಯ ಮಾಡುವ ಹರ್ಷ ಸಾಯಿ ಕುಬೇರನ ಪುತ್ರನಲ್ಲ ಆದರೂ ಸಹ ಇಷ್ಟು ಹಣವನ್ನು ಎಲ್ಲರಿಗೂ ಖರ್ಚು ಮಾಡುತ್ತಿರುವ ವಿಷಯ ಸಾಮಾನ್ಯದ ವಿಷಯವಲ್ಲ ಜಾಫರ್ ಅವರು ಹರ್ಷ ಸಾಯಿಯನ್ನು ಸಂದರ್ಶನ ಮಾಡಿದ್ದರು ಇದು ಹರ್ಷ ಸಾಯಿ ಅವರು ಒಬ್ಬ ವ್ಯಕ್ತಿಯೊಬ್ಬರಿಗೆ ನೀಡಿದ ಮೊದಲ ಸಂದರ್ಶನ ಆಗಿದೆ ಜಾಫರ್ ಅವರು ಕೇಳಿದ ಮೊಟ್ಟ ಮೊದಲ ಪ್ರಶ್ನೆ ದಾನ ಧರ್ಮ ಮಾಡಲು ಎಲ್ಲಿಂದ ಹಣ ಬರುತ್ತದೆ ಎಂದು ಅದಕ್ಕೆ ಹರ್ಷ ಸಾಯಿ ಅವರು ಹಣ ಎಲ್ಲಿಂದಲು ಬರುವುದು ಇಲ್ಲ ನಾವು ಅದನ್ನು ಸಂಪಾದಿಸಬೇಕು ಎಂದು ಹೇಳಿದ್ದರು ನಾನೊಬ್ಬ ವಿಡಿಯೋ ಕ್ರೀಯೆಟರ್ ಎಂದು ಹೇಳಿದ್ದರು
ಇದರಿಂದ ಬರುವ ಹಣವನ್ನು ದಾನ ಮಾಡುತ್ತಾರೆ ಇದೆ ಆದಾಯದ ಮೂಲ ಹೇಳುತ್ತಾರೆ ಆತ್ಮ ಸಂತುಪ್ತಿಗಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ .ಹಣ ನೀಡುವಾಗ ಕೆಮರಾ ಆಫ್ ಮಾಡಿ ಹಣ ನೀಡಿದರೆ ಮುಂದಿನ ದಿನದಲ್ಲಿ ಸೋಶಿಯಲ್ ಮೀಡಿಯಾ ದಿಂದ ಹಣ ಬರುವುದು ಇಲ್ಲ ಹಾಗೆಯೇ ಯಾವುದೇ ವಿಡಿಯೋ ಅನ್ನು ಪೋಸ್ಟ್ ಮಾಡಿಲ್ಲ ಅಂದರೆ ಹಣ ಬರುವುದು ಇಲ್ಲ ಹಾಗೆಯೇ ಇದರಿಂದ ಮತ್ತೊಬ್ಬರಿಗೆ ಸಹಾಯ ಮಾಡಲು ಆಗುವುದು ಇಲ್ಲ ಹಾಗಾಗಿ ಈ ಸಹಾಯ ಪ್ರಚಾರ ಅಲ್ಲ ಎಂದು ಜಾಫರ್ ಅವರಿಗೆ ಉತ್ತರ ನೀಡಿದ್ದರು
ಒಂದು ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಮುಂದಿನ ಗುರಿ ಹರ್ಷ ಸಾಯಿ ಆಗಬೇಕು ಎಂದು ಬರೆದಿದ್ದ ಹೀಗೆ ಸಹಾಯ ಮಾಡುವ ಗುಣ ಚಿಕ್ಕ ಮಕ್ಕಳಿಂದಲೇ ಬೆಳೆಯುತ್ತದೆ ಹರ್ಷ ಅವರು ಮೊದಲು ಕೂಡ ಸಹಾಯ ಮಾಡುತಿದ್ದೆ ಈಗಲೂ ಸಹ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ ಇಂದಿನ ಕಾಲದಲ್ಲಿ ಸಹಾಯ ಎಂದಾಗ ಕಿವಿ ಕೇಳಿಸದೆ ಇರುವ ಜನರ ನಡುವೆ ಹರ್ಷ ಸಾಯಿ ಗೆ ಎಷ್ಟು ಕೃತಜ್ಞತೆ ಹೇಳಿದರು ಸಾಕಾಗದು.