ಈ ಪ್ರಪಂಚದಲ್ಲಿ ಒಬ್ಬ ಹೀರೋಗಳಿಗೆ ಅಥವಾ ಯಾವುದಾದರೂ ಆಟಗಾರರರಿಗೆ ಅಭಿಮಾನಿಗಳು ಇರುವುದು ಸಹಜ. ಆದರೆ ಹೆಚ್ಚಾಗಿ ತಮ್ಮ ಮಾತಲ್ಲಿ ಅಥವಾ ತಮ್ಮ ಮೊಬೈಲ್ ಫೋನ್ ನಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಕೆಲವರು ಅವರ ಫೋಟೋಗಳನ್ನು ಸಂಗ್ರಹ ಮಾಡಿ ತಮ್ಮಲ್ಲಿ ಇಟ್ಟುಕೊಳ್ಳುತ್ತಾರೆ. ಹಾಗೆಯೇ ಇಲ್ಲಿ ಎಮ್.ಎಸ್. ಧೋನಿಯ ಅಭಿಮಾನಿಯಾಗಿ ಅಸಾಧಾರಣ ರೀತಿಯಲ್ಲಿ ತನ್ನ ಪ್ರೀತಿಯನ್ನು ಮತ್ತು ಅಭಿಮಾನವನ್ನು ವ್ಯಕ್ತ ಪಡಿಸಿದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಅರಂಗೂರು ಎನ್ನುವುದು ಕಡಲೂರು ತಾಲ್ಲೂಕಿನ ಒಂದು ಹಳ್ಳಿ. ಇದು ತಮಿಳುನಾಡಿನಲ್ಲಿದೆ. ಈಗ ಈ ಹಳ್ಳಿ ಒಂದು ಸುದ್ದಿಗೆ ಹೆಸರುವಾಸಿಯಾಗಿದೆ. ಎಮ್.ಎಸ್. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಆಗಿದ್ದಾರೆ. ಇವರ ಒಬ್ಬ ಅಭಿಮಾನಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ತಮಿಳುನಾಡಿನ ಗೋಪಿಕೃಷ್ಣ ಎನ್ನುವ ವ್ಯಕ್ತಿ ಧೋನಿ ಅವರ ದೊಡ್ಡ ಅಭಿಮಾನಿ ಆಗಿದ್ದಾರೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂದರೆ ಇವರಿಗೆ ಬಹಳ ಇಷ್ಟ.
ಗೋಪಿಕೃಷ್ಣ ಎನ್ನುವ ವ್ಯಕ್ತಿಯು ತನ್ನ ಮನೆಗೆ ಹಳದಿ ಬಣ್ಣದ ಪೇಂಟಿಂಗ್ ಮಾಡಿಸಿದ್ದಾರೆ. ಹಾಗೆಯೇ ಎಮ್.ಎಸ್.ಧೋನಿ ಅವರ ಚಿತ್ರ ಕೂಡ ಪೇಂಟ್ ಮಾಡಿಸಿದ್ದಾರೆ. ಆ ಮನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಚಿಹ್ನೆಯನ್ನು ಕೂಡ ಹಾಕಿಸಿದ್ದಾರೆ. ಇದಕ್ಕೆ ಗೋಪಿಕೃಷ್ಣ ಅವರು ಒಬ್ಬ ಡ್ರಾಯಿಂಗ್ ಟೀಚರ್ ಸಹಾಯ ಪಡೆದಿದ್ದಾರೆ. ಹಾಗೆಯೇ ಇದರ ಜೊತೆ ತಮ್ಮ ಮನೆಗೆ ‘ಹೋಮ್ ಆಫ್ ಧೋನಿ ಫಾನ್’ ಎಂದು ಹೆಸರಿಟ್ಟುಕೊಂಡಿದ್ದಾರೆ. ಇದು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಹೋಗುತ್ತಿದೆ. ಇದು ಗೋಪಿಕೃಷ್ಣ ಅವರು ಧೋನಿ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ. ಇದನ್ನು ತಿಳಿದ ಧೋನಿ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಸ್ವಲ್ಪ ದಿನದ ನಂತರದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಅಭಿಮಾನಿ ಒಬ್ಬರು ಅವರ ಮನೆಗೆ ಧೋನಿ ಚಿತ್ರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಣ್ಣವನ್ನು ತಮ್ಮ ಮನೆಗೆ ಪೇಂಟ್ ಮಾಡಿಸಿದ್ದಾರೆ. ಇದರ ಕುರಿತಾಗಿ ಈಗಾಗಲೇ ಸಾಕಷ್ಟು ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿರುತ್ತಾರೆ.
ಧೋನಿ ಅವರು ಈ ಮನೆಗೆ ಹೊಡೆಸಿದ ಪೈಂಟಿಂಗ್ ಕುರಿತು ಇನ್ಸ್ತಾಗ್ರಾಂ ನಲ್ಲಿ ನೋಡಿ ಇದೊಂದು ತನಗೆ ಬಹಳ ಖುಷಿ ವಿಷಯ ಆಗಿದೆ. ಇದನ್ನ ನೋಡಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಹುದೊಡ್ಡ ಅಭಿಮಾನಿ ಎಂಬುದು ತಿಳಿಯುತ್ತದೆ. ಧೋನಿ ಅವರ ಈ ಅಭಿಮಾನಿಯು ಅವರ ಮನೆಗೆ ‘ಹೋಂ ಆಫ್ ಧೋನಿ ಫ್ಯಾನ್’ ಎಂದು ದೊಡ್ಡದಾಗಿ ನಾಮಫಲಕವನ್ನು ಇಟ್ಟಿದ್ದಾರೆ. ಈ ರೀತಿಯಾಗಿ ಮನೆಗೆ ಸಿ ಎಸ್ ಕೆ ತಂಡದ ಹಾಗೂ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಚಿತ್ರವನ್ನು ಮನೆಯ ತುಂಬೆಲ್ಲ ಪೇಂಟ್ ಮಾಡಿಸಿರುವುದು ಇದು ಒಂದು ರೀತಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೇಲಿನ ಅಭಿಮಾನಿಗಳ ಭಾವನೆ. ಈ ರೀತಿಯಾಗಿ ಮನೆಗೆ ಬಣ್ಣ ಹೊಡೆಯುವುದು ಕೇವಲ ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್ನಲ್ಲಿ ಪೋಸ್ಟ್ ಮಾಡುವುದರ ಸಲುವಾಗಿ ಅಲ್ಲ ನಿಜವಾಗಿ ಅಭಿಮಾನವಿದ್ದು ಮನೆಯವರೆಲ್ಲರ ಒಪ್ಪಿಗೆಯನ್ನು ಪಡೆದು ಇಡೀ ಮನೆಗೆ ಈ ರೀತಿಯಾಗಿ ಪೇಂಟ್ ಮಾಡಿಸಿರುವುದು ಅವರ ಅಭಿಮಾನವನ್ನು ತೋರಿಸುತ್ತದೆ. ಅವರ ಅಭಿಮಾನಕ್ಕೆ ಅವರ ಕುಟುಂಬಕ್ಕೆ ಧನ್ಯವಾದಗಳು ಎಂದು ಧೋನಿ ಹೇಳಿದ್ದಾರೆ.