ಯಶ್ ಹಾಗೂ ರಾಧಿಕಾ ಅವರ ಮುದ್ದು ಮಗಳಿಗೆ ಬಂತು ಚಿಕಾಗೋದಿಂದ ಗಿಫ್ಟ್.! ಕಳ್ಸಿದ್ದು ಯಾರು ನೋಡಿ

0 0

ಕ್ಯೂಟ್ ಮಕ್ಕಳ ಮುದ್ದಿನ ಅಮ್ಮ ರಾಧಿಕಾ ಪಂಡಿತ್ ಅವರ ನಟನೆಗೆ ಮನಸೋಲದವರೇ ಇಲ್ಲ. ಅವರ ಮಕ್ಕಳು ಕೂಡ ಕ್ಯೂಟ್ ಆಗಿದ್ದಾರೆ. ರಾಧಿಕಾ ಅವರ ಮಗಳು ಐರಾ ಬೇಬಿಗೆ ಚಿಕಾಗೊದಿಂದ ಉಡುಗೊರೆ ಬಂದಿದೆ. ಚಿಕಾಗೊದಿಂದ ಯಾರು ಉಡುಗೊರೆ ಕಳುಹಿಸಿದ್ದಾರೆ, ಏನು ಉಡುಗೊರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ರಾಧಿಕಾ ಪಂಡಿತ್ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಕೃಷ್ಣ ಪ್ರಸಾದ್ ಪಂಡಿತ್, ತಾಯಿ ಮಂಗಳಾ. ಇವರು ಎಂಬಿಎ ಮುಗಿಸಿದ್ದಾರೆ. ಇವರು ಡಿಗ್ರಿ ಓದುತ್ತಿರುವಾಗಲೇ ನಂದಗೋಕುಲ ಧಾರಾವಾಹಿಯಲ್ಲಿ ನಟಿಸಲು ಅವಕಾಶ ದೊರೆಯಿತು. ಸುಮಂಗಲಿ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಮೊಗ್ಗಿನ ಮನಸ್ಸು, ಗೋಕುಲ, ದೊಡ್ಮನೆ ಹುಡುಗ, ಝೂಮ್ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಅತ್ಯುತ್ತಮ ನಟಿಯಾದರು. ಮೊಗ್ಗಿನ ಮನಸ್ಸು, ಮಾಸ್ಟರ್ ಪೀಸ್, ಸಂತು, ಹೀಗೆ ಯಶ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಆಗಿದ್ದಾರೆ. ರಾಧಿಕಾ ಪಂಡಿತ್ ಹಾಗೂ ಯಶ್ ಅವರು ಮಿಸ್ಟರ್ ಎಂಡ್ ಮಿಸ್ಸೆಸ್ ರಾಮಾಚಾರಿ ಎಂಬ ಸಿನಿಮಾದಲ್ಲಿ ನಟಿಸಿ ಇಬ್ಬರು ಮದುವೆಯಾದರು. ಯಶ್ ಹಾಗೂ ರಾಧಿಕಾ ಪಂಡಿತ್ ಅವರು ನಟಿಸಿದ ಚಿತ್ರಗಳು ಹಿಟ್ ಆಗಿವೆ. ರಾಧಿಕಾ ಅವರು ಮದುವೆಯ ನಂತರ ಆದಿಲಕ್ಷ್ಮೀ ಪುರಾಣ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ರಾಧಿಕಾ ಪಂಡಿತ್ ಹಾಗೂ ಯಶ್ ಅವರಿಗೆ ಕ್ಯೂಟ್ ಮಗಳಿದ್ದಾಳೆ ಅವಳ ಹೆಸರು ಐರಾ ಅವಳಿಗೆ ಒಬ್ಬ ಮುದ್ದಾದ ತಮ್ಮನಿದ್ದು ಅವನ ಹೆಸರು ಯಥರ್ವ ಇಬ್ಬರು ಮಕ್ಕಳ ಮುದ್ದಿನ ತಾಯಿಯಾಗಿ ರಾಧಿಕಾ ಪಂಡಿತ್ ಅವರು ತಮ್ಮ ಜವಾಬ್ದಾರಿಯನ್ನು ಖುಷಿಯಿಂದ ನಿರ್ವಹಿಸುತ್ತಿದ್ದಾರೆ. ರಾಧಿಕಾ ಅವರಿಗೆ ಇಬ್ಬರು ಮಕ್ಕಳೆಂದರೆ ಬಹಳ ಇಷ್ಟ. ಅವರು ಸಿನಿಮಾದಲ್ಲಿ ನಟಿಸುವುದನ್ನು ಬಿಟ್ಟು ಮಕ್ಕಳ ಆರೈಕೆಯಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಅವರು ತಮ್ಮ ಮಕ್ಕಳ ಹೊಸ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ.

ಐರಾ ಬೇಬಿಗೆ ಅತಿಥಿಗಳಿಂದ ಭರ್ಜರಿ ಉಡುಗೊರೆ ಬಂದಿದೆ. ರಾಧಿಕಾ ಪಂಡಿತ್ ಅವರ ಸಹೋದರ ಗೌರಮ್ ಪಂಡಿತ್ ಅವರು ತಮ್ಮ ಪತ್ನಿ ಹಾಗೂ ಮಗಳ ಜೊತೆಯಲ್ಲಿ ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದಾರೆ. ಗೌರಮ್ ಪಂಡಿತ ಅವರ ಪತ್ನಿ ಸಹನಾ ಪಂಡಿತ್ ಅವರು ಐರಾಗಾಗಿ ಚಿಕಾಗೊದಿಂದ ವಿಶೇಷವಾದ ಗಿಫ್ಟ್ ಬಾಕ್ಸ್ ಕಳುಹಿಸಿದ್ದು, ಅದರಲ್ಲಿ ಐರಾ ಓದಲು, ಬರೆಯಲು ಸಹಾಯವಾಗುವ ಚಾರ್ಟ್ ಗಳು, ಕೆಲವು ವಿಶೇಷ ಟೀಚಿಂಗ್ ಮಟೀರಿಯಲ್ಸ್ ಇವೆ. ಅಲ್ಲದೆ ಯಥರ್ವನಿಗೆ ಬಣ್ಣದ ಆಟಿಕೆಗಳನ್ನು ಕಳುಹಿಸಿದ್ದಾರೆ. ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳಿಗೆ ಚಿಕಾಗೊದಿಂದ ಬಂದ ಉಡುಗೊರೆಯನ್ನು ನೋಡಿ ಬಹಳ ಖುಷಿಪಟ್ಟರು. ಒಟ್ಟಿನಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ಅವರು ತಮ್ಮ ಮಕ್ಕಳೊಂದಿಗೆ ಸಂತೋಷವಾಗಿರಲಿ ಎಂದು ಆಶಿಸೋಣ.

Leave A Reply

Your email address will not be published.