ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಕನ್ನಡ ಚಿತ್ರರಂಗದ ಅಪರೂಪದ ಜೋಡಿ. ಕನ್ನಡ ಚಿತ್ರರಂಗದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಅನೇಕ ಸಿನಿಮಾಗಳಲ್ಲಿ ನಟಿಸಿ ಇಬ್ಬರೂ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ವಿವಾಹವಾಗಿದ್ದಾರೆ. ಅವರ ಬಗ್ಗೆ ಹಾಗೂ ಅವರ ಸಿನಿ ಪ್ರಯಾಣದ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

1984 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಕೃಷ್ಣ ಪ್ರಸಾದ್ ಪಂಡಿತ್, ತಾಯಿ ಮಂಗಳಾ. ರಾಧಿಕಾ ಅವರು ಎಂಬಿಎ ಓದಿದ್ದಾರೆ, ಅವರು ಬಿಕಾಂ ಓದುತ್ತಿರುವಾಗಲೆ ನಂದಗೋಕುಲ ಸೀರಿಯಲ್ ನಲ್ಲಿ ನಟಿಸಲು ಅವಕಾಶ ದೊರೆಯಿತು. ನಂತರ ಅದೇ ವರ್ಷ ಸುಮಂಗಲಿ ಎಂಬ ಧಾರವಾಹಿಯಲ್ಲಿ ಕೂಡ ನಟಿಸಿದರು. ನಂತರ ಮೊಗ್ಗಿನ ಮನಸ್ಸು ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಒಲವೇ ಜೀವನ ಲೆಕ್ಕಾಚಾರ, ಲವ್ ಗುರು, ಕೃಷ್ಣನ ಲವ್ ಸ್ಟೋರಿ, ಗಾನಾ ಬಜಾನಾ, ಅಲೆಮಾರಿ, ಬ್ರೇಕಿಂಗ್ ನ್ಯೂಸ್, ಅದ್ದೂರಿ, ಸಾಗರ, ಕಡ್ಡಿಪುಡಿ, ದಿಲ್ ವಾಲಾ, ಬಹದ್ದೂರ್, ಝೂಮ್, ದೊಡ್ಮನೆ ಹುಡುಗ, ಸಂತು ಸ್ಟ್ರೇಟ್ ಫಾರ್ವರ್ಡ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರಕ್ಕೆ ಫಿಲ್ಮ್ ಫೇರ್, ರಾಜ್ಯ ಪ್ರಶಸ್ತಿ ದೊರೆಯಿತು.

ಡ್ರಾಮಾ ಚಿತ್ರದಲ್ಲಿ ಯಶ್ ಅವರ ಜೊತೆ ರಾಧಿಕಾ ಅವರು ನಟಿಸಿದರು. ಈ ಚಿತ್ರ ಚಿತ್ರರಂಗದಲ್ಲಿ ಹೆಸರು ಮಾಡಿತು ಇದರಿಂದ ರಾಧಿಕಾ ಅವರಿಗೆ ಉತ್ತಮ ಆಫರ್ ಬಂದಿತು. ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ ಎಂಬ ಸಿನಿಮಾದಲ್ಲಿ ರಾಧಿಕಾ ಹಾಗೂ ಯಶ್ ಜೋಡಿ ಮತ್ತೊಮ್ಮೆ ಚಿತ್ರರಂಗದಲ್ಲಿ ಮೋಡಿ ಮಾಡಿತು. ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಜೋಡಿ ಎಂದು ಖ್ಯಾತಿ ಪಡೆದು ನಂತರ ನಿಜ ಜೀವನದಲ್ಲಿ ಇವರಿಬ್ಬರೂ ಮದುವೆಯಾದರು. ರಾಧಿಕಾ ಅವರಿಗೆ ಅತ್ಯುತ್ತಮ ನಟಿ, ಸುವರ್ಣ ಫಿಲ್ಮ್ ಪ್ರಶಸ್ತಿ, ಜನಪ್ರಿಯ ನಟಿ, ಟಿವಿ 9 ಸ್ಯಾಂಡಲ್ ವುಡ್ ಸ್ಟಾರ್ ಪ್ರಶಸ್ತಿ ಲಭಿಸಿದೆ.

ರಾಕಿಂಗ್ ಸ್ಟಾರ್ ಯಶ್ ಅವರು ಹಾಸನ ಜಿಲ್ಲೆಯ ಒಂದು ಹಳ್ಳಿಯಲ್ಲಿ ಜನಿಸಿದರು. ಅವರ ಬಾಲ್ಯದ ಹೆಸರು ನವೀನ್ ಕುಮಾರ್ ಗೌಡ. ಇವರ ತಂದೆ ಬಸ್ ಡ್ರೈವರ್ ಆಗಿದ್ದು ಸಾಮಾನ್ಯ ಬಡ ಕುಟುಂಬವಾಗಿರುತ್ತದೆ. ಯಶ್ ಅವರಿಗೆ ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು. ಅವರು ಶಾಲಾ ದಿನಗಳಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಯಶ್ ಅವರು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಸ್ಟಾರ್ ನಟನಾಗಲು ಬೆಂಗಳೂರಿಗೆ ಬರುತ್ತಾರೆ ಆಗ ಅವರ ಬಳಿ ಕೇವಲ 300 ರೂಪಾಯಿ ಇತ್ತು. ಪ್ರಾರಂಭದ ದಿನಗಳಲ್ಲಿ ಅವರು ಬಹಳ ಪರದಾಡುತ್ತಾರೆ. ನಂತರ ಒಂದು ನಾಟಕ ರಂಗಭೂಮಿಯಲ್ಲಿ ಕೆಲಸ ಸಿಗುತ್ತದೆ. ಆ ಸಮಯದಲ್ಲಿ ಅವರು ಅನೇಕ ಆಡಿಷನ್ ಕೊಡುತ್ತಾರೆ ಆದರೆ ಯಾವುದರಲ್ಲೂ ಸೆಲೆಕ್ಟ್ ಆಗುವುದಿಲ್ಲ. ನಂತರ ಒಂದು ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಸಿಗುತ್ತದೆ ಅಲ್ಲಿ ಅವರಿಗೆ ಅವಮಾನ ಆಯಿತು.

ಮೊದಲು ಸೀರಿಯಲ್ ನಲ್ಲಿ ನಟಿಸುತ್ತಾರೆ ನಂತರ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ರಾಧಿಕಾ ಪಂಡಿತ್ ಅವರ ಜೊತೆ ನಟಿಸುತ್ತಾರೆ. ಅವರಿಗೆ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಎಂಬ ಫಿಲ್ಮ್ ಫೇರ್ ಅವಾರ್ಡ್ ಲಭಿಸುತ್ತದೆ. ನಂತರ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಕೆಲವೇ ವರ್ಷಗಳಲ್ಲಿ ಯಶ್ ಅವರು ಕನ್ನಡದ ಟಾಪ್ ನಟರಾಗಿ ಹೊರ ಹೊಮ್ಮಿದ್ದಾರೆ. ಯಶ್ ಅವರು ಮೊಗ್ಗಿನ ಮನಸ್ಸು, ಗೋಕುಲ, ಡ್ರಾಮಾ, ಕಿರಾತಕ, ಲಕ್ಕಿ, ರಾಜಧಾನಿ, ರಾಜಾಹುಲಿ, ಜಾನು, ರೋಕಿ, ಮೊದಲಸಲ, ಕಳ್ಳರ ಸಂತೆ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಕೆಜಿಎಫ್ ಸಿನಿಮಾದ ಮೂಲಕ ಇಡೀ ಜಗತ್ತು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಕೆಜಿಎಫ್ ಸಿನಿಮಾ ಶೂಟಿಂಗ್ ಮಾಡಲು 4 ವರ್ಷ ಸಮಯ ತೆಗೆದುಕೊಂಡರು. ಬಾಲಿವುಡ್ ಝೀರೊ ಸಿನಿಮಾಕ್ಕೆ ಕೆಜಿಎಫ್ ಸಿನಿಮಾ ಸೆಡ್ಡು ಹೊಡೆಯಿತು. ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಗಳು ಐರಾ, ಮಗ ಅಥರ್ವ. ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವುದರಿಂದ ತಮ್ಮ ಮಕ್ಕಳ ಹೊಸ ಹೊಸ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುತ್ತಾರೆ. ರಾಧಿಕಾ ಪಂಡಿತ್ ಅವರ ಕುಟುಂಬದವರ ಕ್ಯೂಟ್ ವಿಡಿಯೋ, ಫೋಟೋಸ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!