ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಕಪಲ್ ಎಂದೇ ಹೆಸರುವಾಸಿಯಾಗಿರುವ ರಾಧಿಕ ಮತ್ತು ಯಶ್ ಅವರ ಜೋಡಿ ಯಾರಿಗೆ ತಾನೇ ಗೊತ್ತಿಲ್ಲ ಇನ್ನು ಯಶ್ ಅವರು ತಮ್ಮ ಕೆಜಿಎಫ್ 2 ಚಿತ್ರೀಕರಣದಲ್ಲಿ ಬಿಝಿ ಆಗಿದ್ದು ಇನ್ನು ಅವರ ಪತ್ನಿ ರಾಧಿಕಾ ಅವರು ಮಕ್ಕಳ ಲಾಲನೆ ಪಾಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಇತ್ತೀಚಿನ ಮಾದ್ಯಮ ವಾಹಿನಿಯವರು ಯಶ್ ಅವರ ತಂದೆ ತಾಯಿ ಅವರನ್ನು ಸಂದರ್ಶನ ಮಾಡಿದಾಗ ತಮ್ಮ ಸೊಸೆ ಮೊಮ್ಮಕ್ಕಳ ಬಗ್ಗೆ ಹೊಗಳಿದ್ದಾರೆ.

ಯಶ್ ಅವರು ಮೂಲತಃ ಹಾಸನ ಜಿಲ್ಲೆಯವರು ಅರುಣ ಕುಮಾರ್ ಮತ್ತು ಪುಷ್ಪ ದಂಪತಿ ಪುತ್ರ ಒಬ್ಬನೇ ಮುದ್ದಿನ ಮಗ ಇನ್ನು ನಂದಿನಿ ಎನ್ನುವ ತಂಗಿ ಇದ್ದಾಳೆ ಅವರ ತಂದೆ ಬಿಎಂಟಿಸಿ ಡ್ರೈವರ್ ಆಗಿದ್ದು ತನ್ನ ಮಗನ ಯಶಸ್ಸಿನ ಬಳಿಕ ತನ್ನ ಕೆಲಸವನ್ನು ಬಿಡಲೇ ಇಲ್ಲ ತನ್ನ ದೈನಂದಿನ ಕಾರ್ಯಗಳಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ತಾನು ಒಬ್ಬ ಎಲ್ಲ ಸಾಮಾನ್ಯ ನೌಕರರಂತೆ ಕಾರ್ಯ ನಿರ್ವಹಿಸುತ್ತಿದ್ದರು ಇವರ ವ್ಯಕ್ತಿತ್ವಕ್ಕೆ ಎಲ್ಲರೂ ಖುಷಿ ಪಡುತ್ತಾರೆ ದುಡ್ಡು ಇರುವಾಗ ಸಮಯ ಇಲ್ಲ ಆದರೆ ಸಮಯ ಇದ್ದಾಗ ದುಡ್ಡು ಇರಲಿಲ್ಲ ಹಾಗಾಗಿ ಮನೆಯ ಪ್ರತಿಯೊಬ್ಬ ಸದಸ್ಯರು ಸಮಯಕ್ಕೆ ತುಂಬಾ ಗೌರವ್ ನೀಡುತ್ತಾರೆ ಎನ್ನುವುದು ಖುಶಿಯ ವಿಚಾರ

ರಾಧಿಕಾ ಅವರು ಮೊದಲಿಂದ ತಮ್ಮ ಮಗಳು ನಂದಿನಿಗಿಂತ ಕೂಡ ಜಾಸ್ತಿ ಇಷ್ಟ ಎಲ್ಲರನ್ನೂ ಹೊಂದಿಕೊಳ್ಳುವ ಗುಣ ಇದ್ದು ನಮ್ಮ ಮನೆ ಮಗಳು ಎಂದು ಹೊಗಳಿದ್ದಾರೆ ಇನ್ನು ಯಶ್ ಅವರು ಕಾಲೇಜ್ ದಿನಗಳಿಂದ ಅಭಿನಯ ಮೇಲೆ ಆಸಕ್ತಿ ಹೊಂದಿದ್ದು ಅವರ ಗುರಿ ಇದ್ದಿದು ತಾನೊಬ್ಬ ಅತ್ಯುತ್ತಮ ನಟ ಆಗಬೇಕೆಂಬುದು ಅವರ ಕನಸ್ಸು ಕೊನೆಗೂ ನೆರವೇರಿದೆ ಆದರೆ ಇಂದು ಪ್ರಸಿದ್ದ ನಟ ಆಗಲೂ ಸಾಕಷ್ಟು ಶ್ರಮ ಮತ್ತು ಕಷ್ಟ ಪಟ್ಟಿದಾರೆ

ಬಾಲ್ಯದಲ್ಲಿ ತಂದೆ ಕಟ್ಟುನಿಟ್ಟಿನ ವ್ಯಕ್ತಿ ಹಾಗೂ ಸಮಯ ಪರಿಪಾಲನೆ ನಿಷ್ಟೆ ಹೊಂದಿದ್ದು ಯಶ್ ಅವರ ತುಂಟಾಟದಿಂದ ತಂದೆಯ ಬಳಿ ಹಲವಾರು ಬಾರಿ ಪೆಟ್ಟು ತಿಂದಿದ್ದಾರೆ ನಂತರ ತಾಯಿಯ ಮಾತಿನಂತೆ ಬೆಳೆದರು ಏಪ್ರಿಲ್ 14 ಕೆಜಿಎಫ್ 2 ಬಿಡುಗಡೆ ಜೊತೆಗೆ ಯಶ್ ತಂದೆ ತಾಯಿಯವರ ಮದುವೆ ವಾರ್ಷಿಕೋತ್ಸವ ಎನ್ನುವುದು ವಿಶೇಷ.

ಇನ್ನು ಅವರ ತಾಯಿ ಯಶ್ ಅವರ ಬಗ್ಗೆ ಯಶ್ ಅವರಿಗೆ ಕಾಲೇಜ್ ದಿನಗಳಲ್ಲಿ ಜಾಮೂನ್ ಹಾಗೂ ಕ್ಯಾರಟ್ ಹಲ್ವಾ ಅಂದ್ರೆ ಬಲುಪ್ರಿಯ ಎಷ್ಟ್ ಕೊಟ್ರು ಬೇಡ ಅನ್ನುತಾ ಇರಲಿಲ್ಲ ಆದರೆ ಇವಾಗ ನಾನ್ ವೆಜ್ ಜಾಸ್ತಿ ಇಷ್ಟ ಪಡುತ್ತಾರೆ ಇನ್ನು ರಾಧಿಕಾ ಅವರಿಗೆ ಮೊದಲು ಮುದ್ದೆ ಮಾಡಲು ಬರುತ್ತಿರಲಿಲ್ಲ ಆದರೆ ಇವಾಗ ತನ್ನ ಪತಿಗೋಸ್ಕರ ಮುದ್ದೆ ರುಚಿಯಾದ ಅಡುಗೆ ಮಾಡಲು ಕಲಿತಿದ್ದಾರೆ

ಇನ್ನು ಮೊಮ್ಮಕ್ಕಳು ಐರ ಹಾಗೂ ಅರ್ಥರ್ವ ಕೂಡ ತಮ್ಮ ಅಜ್ಜಿ ತಾತ ಜೊತೆ ಚೆನ್ನಾಗಿ ಆಟ ಆಡುತ್ತಾರೆ ಏನೇ ಮಾಡಿಕೊಟ್ಟರು ಖುಷಿಯಿಂದ ತಿನ್ನುತ್ತಾರೆ ಎಂದು ಸಂದರ್ಶನದಲ್ಲಿ ಹೇಳಿದ್ದು ಏನೇ ಅಗತ್ಯವಿದ್ದಾಗ ಅಥವಾ ಕೆಲಸವಿದ್ದರೆ ಮಾತ್ರ ಬಂದು ಹೋಗುತ್ತಾರೆ ಇಲ್ಲ ಅಂದ್ರೆ ನಾವೇ ಹೋಗಿ ಬಂದು ಮಾಡ್ತೀವಿ ಎಂದಿದ್ದಾರೆ ಇನ್ನು ಕೆಜಿಎಫ್ 2 ಸಿನಿಮಾದಲ್ಲಿ ಪ್ರಶಾಂತ್ ನೀಲ್ ಅವರು ತುಂಬಾ ಶ್ರಮವಹಿಸಿ ನಿರ್ಮಾಣ ಮಾಡಿದ್ದು ಒಳ್ಳೆಯ ಯಶಸ್ಸು ಸಿಗಲಿ ಎಂದು ಹಾರೈಸಿದರು ಹೀಗೆ ಲಕ್ಷ್ಮೀ ನಾರಾಯಣರಂತೆ ಸದಾ ಹಸನ್ಮುಖಿಯಾಗಿ ಖುಶಿಯಾಗಿ ನೂರಾರು ವರ್ಷ ಬಾಳಲಿ ಎಂದು ನಾವು ಕೂಡ ಹಾರೈಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!