ಜಗತ್ತಿನಲ್ಲಿ ಅನೇಕ ವಿಷಯಗಳು ನಡೆಯುತ್ತದೆ. ಜೊತೆಗೆ ಅನೇಕ ತಿಳಿಯದ ವಿಷಯಗಳು ನಮ್ಮ ಮುಂದೆ ಇರುತ್ತದೆ. ಅದನ್ನು ತಿಳಿದುಕೊಳ್ಳುವುದು ನಮ್ಮ ಬುದ್ಧಿಶಕ್ತಿಗೆ ಮತ್ತು ನಮ್ಮ ಜ್ಞಾನಕ್ಕೆ ಶಕ್ತಿಯಾಗಿದೆ. ಸಾಮಾನ್ಯವಾಗಿ ಯಾರೂ ಕೂಡ ಕೆಲವೊಂದು ವಿಚಾರಗಳನ್ನು ವಿಮರ್ಶಾತ್ಮಕವಾಗಿ ನೋಡುವುದಿಲ್ಲ. ಆದರೆ ಅದರಲ್ಲಿ ತಿಳಿದುಕೊಳ್ಳುವ ಹಲವಾರು ಸಂಗತಿಗಳು ಇರುತ್ತವೆ. ಫ್ಯಾಕ್ಟರಿಗಳ ಮೇಲೆ ಹವಾನಿಯಂತ್ರಿತ ಯಂತ್ರಗಳನ್ನು ಬಳಸಲು ಕಾರಣ ಹಾಗೂ ಹುಳಗಳೇ ತುಂಬಿರುವ ಪೆನ್ನು, ಉಗುರನ್ನು ಕತ್ತರಿಸುವಾಗ ಸಹಜವಾಗಿ ನೋವಾಗುವುದಿಲ್ಲ ಏಕೆ ಎಂಬ ಇಂತಹ ಹಲವಾರು ವಿಚಾರಗಳ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಒಬ್ಬ ವ್ಯಕ್ತಿಗೆ ಕಣ್ಣಿನ ಹುಬ್ಬು ಹಾಗೂ ಒಂದು ಎದುರಿನ ಹಲ್ಲು ಇರುವುದಿಲ್ಲ. ಪ್ರತಿಯೊಬ್ಬರೂ ಅವನನ್ನು ನೋಡಿದಾಗ ಮೊದಲು ಗಮನಿಸುವುದು ಅವನ ಹಲ್ಲುಗಳನ್ನಾಗಿರುತ್ತದೆ. ಕಾರಣವೇನೆಂದರೆ ಪ್ರತಿಯೊಬ್ಬರು ವ್ಯಕ್ತಿಯ ನಗುವನ್ನು ಮೊದಲು ಗಮನಿಸುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ನಗುನಗುತ್ತಾ ಇರಬೇಕು. ಒಬ್ಬ ಹುಡುಗನು ಒಂದು ಇಂಟರ್ವ್ಯೂ ಗೆ ಹೋಗುತ್ತಾನೆ. ಅಲ್ಲಿ ಮೂರು ಜನ ಇಂಟರ್ವ್ಯೂವರ್ಸ್ ಇರುತ್ತಾರೆ. ಅಲ್ಲಿ ಆ ವ್ಯಕ್ತಿಯ ಸರ್ಟಿಫಿಕೇಟ್ಗಳನ್ನು ನೋಡಿ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಕೊನೆಯದಾಗಿ ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಅದೇನೆಂದರೆ ಟೇಬಲ್ ಮೇಲೆ ಇರುವ ಲೋಟವನ್ನು ಕೈನ ಸಹಾಯವಿಲ್ಲದೆ ಎತ್ತಬೇಕು ಎಂದು ಹೇಳುತ್ತಾರೆ. ಅದಕ್ಕೆ ಇಂಟರ್ವ್ಯೂಗೆ ಬಂದ ಹುಡುಗ ಟೇಬಲ್ ಮೇಲೆ ಗ್ಲಾಸ್ ಇಲ್ಲವೆಂದು ಹೇಳುತ್ತಾನೆ.

ಇಂಟರ್ವ್ಯೂವರ್ ಟೇಬಲ್ ಮೇಲೆಯೇ ಇದೆ ಎಂದು ಎರಡು ಮೂರು ಸಾರಿ ಹೇಳಿದರೂ ಇಂಟರ್ವ್ಯೂಗೆ ಬಂದ ಯುವಕ ಇಲ್ಲವೆಂದೇ ನಯವಾಗಿ ಹೇಳುತ್ತಾನೆ. ಅದಕ್ಕೆ ಪ್ರತಿಯಾಗಿ ಸಿಟ್ಟಿಗೆದ್ದ ಇಂಟರ್ವಿವರ್ ತಟ್ಟೆಯನ್ನು ಎತ್ತಿ ತೋರಿಸಿ ಇದನ್ನೇ ಎತ್ತು ಎಂದು ಹೇಳುತ್ತಾನೆ. ಆಗ ಆ ಯುವಕ ನೀವು ಹೇಳಿದ ಹಾಗೆ ಕೈನ ಸಹಾಯವಿಲ್ಲದೆ ಲೋಟವನ್ನು ಎತ್ತಿ ಇಟ್ಟಿದ್ದೇನೆ ಎಂದು ಉತ್ತರಿಸುತ್ತಾನೆ. ಈ ಹುಡುಗನ ಚಾಣಾಕ್ಷತನದ ಯೋಜನೆ ಅದ್ಭುತವಾಗಿತ್ತು. ಅದನ್ನು ಇಂಟರ್ವ್ಯೂರ್ಸ್ ಅವರು ಮೆಚ್ಚುತ್ತಾರೆ. ಬಿಲ್ಗೆಟ್ಸ್ ಮದುವೆಯಾದಾಗ ಅವರ ಮದುವೆ ಫೋಟೋ ವಿಡಿಯೋ ಯಾವುದೂ ಕೂಡ ಹೊರಗೆ ಬರಲಿಲ್ಲ. ಕಾರಣ ಅವರ ಮದುವೆಯ ಸಲುವಾಗಿಯೇ ಹವಾಯಿ ಎಂಬ ದ್ವೀಪವನ್ನು ಖರೀದಿ ಮಾಡುತ್ತಾರೆ. ಮೀಡಿಯಾಗಳಿಗೆ ಅಲ್ಲಿ ಅವಕಾಶವಿರಲಿಲ್ಲ. ಹೀಗಾಗಿ ಅವರ ಮದುವೆಯ ಫೋಟೋಗಳು ಹೊರಬರಲಿಲ್ಲ.

ಸಹಜವಾಗಿ ಮಕ್ಕಳು ಯಾವ ವಾತಾವರಣದಲ್ಲಿ ಬೆಳೆಯುತ್ತಾರೋ ಮತ್ತು ಸರಿಯಾದ ಮಾರ್ಗದರ್ಶನದಲ್ಲಿ ಬೆಳೆಯುತ್ತಾರೆ ಎನ್ನುವುದು ಅವರ ಜೀವನದ ಮೇಲೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜಪಾನ್ದಲ್ಲಿರುವ ಒಂದು ಹೋಟೆಲ್ನಲ್ಲಿ ಬಹುತೇಕ ಫ್ರೀಯಾಗಿ ಎಲ್ಲವು ದೊರಕುತ್ತದೆ. ಈ ಹೋಟೆಲ್ ನ ರೂಂಗಳಲ್ಲಿ ನಡೆಯುವ ವಿಚಾರಗಳು ವಿಡಿಯೋ ರೆಕಾರ್ಡಿಂಗ್ ಆಗುತ್ತದೆ. ಇದನ್ನು ಒಪ್ಪುವವರು ಈ ಹೋಟೆಲ್ನಲ್ಲಿ ಉಳಿಯಬಹುದಾಗಿದೆ. ಹುಳಗಳು ಇರುವ ಪೆನ್ನನ್ನು ತಯಾರಿಸಿದ್ದಾರೆ. ಅರ್ಧ ಪೆನ್ನಿಗೆ ನೀರಿನ ತರಹದ ಫ್ಲೋಯಡ್ ಅನ್ನು ಹಾಕಿ ಅದಕ್ಕೆ ಜೀವಂತ ಹುಳಗಳನ್ನು ಹಾಕುತ್ತಾರೆ. ಫ್ಲೋಯಡ್ ಇರುವ ಕಾರಣ ಹುಳಗಳು ಜೀವಂತವಾಗಿರುತ್ತದೆ.

ಉಗುರು ತೆಗೆಯುವಾಗ ಹಾಗೂ ಕೂದಲುಗಳನ್ನು ಕಟ್ ಮಾಡುವಾಗ ಸಹಜವಾಗಿ ನೋವಾಗುವುದಿಲ್ಲ. ಕಾರಣ ಇವುಗಳು ಡೆಡ್ ಸೆಲ್ಸ್ ಗಳಿಂದ ನಿರ್ಮಾಣವಾಗಿರುತ್ತದೆ. ಇದರಲ್ಲಿ ರಕ್ತಸಂಚಾರ ಇರುವುದಿಲ್ಲ. ಹೀಗಾಗಿ ಇದನ್ನು ತೆಗೆಯುವಾಗ ಸಹಜವಾಗಿ ನೋವಾಗುವುದಿಲ್ಲ. ಸಹಜವಾಗಿ ಫ್ಯಾಕ್ಟರಿಗಳ ಮೇಲೆ ತಿರುಗುತ್ತಿರುವ ಮಷೀನ್ ಗಳನ್ನು ಹಾಕುತ್ತಾರೆ. ಇದನ್ನು ವಿಂಡ್ ಟರ್ಬೈನ್ ವೆಂಟಿಲೇಟರ್ ಎಂದು ಕರೆಯುತ್ತಾರೆ. ಇದನ್ನು ಬಳಸುವ ಕಾರಣ ಫ್ಯಾಕ್ಟರಿಗಳಲ್ಲಿ ಉತ್ಪತ್ತಿಯಾಗುವ ತಾಪಮಾನವನ್ನು ಸರಿಯಾಗಿರಿಸುವ ಸಲುವಾಗಿ ಬಳಸಲಾಗುತ್ತದೆ. ಇಂತಹಾ ವಿಚಾರಗಳನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!